2024: ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ? 2024: ಆರು ದೇಶಗಳು ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. 2024:ಈ ವರ್ಷದ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆರು ದೇಶಗಳ ಪಾಸ್‌ಪೋರ್ಟ್‌ಗಳು ವಿಶ್ವಾದ್ಯಂತ ಅತ್ಯಂತ ಪವರ್‌ಫುಲ್ ಆಗಿವೆ. ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್, ಜಪಾನ್ ಮತ್ತು ಸಿಂಗಾಪುರ ಮೊದಲ ಸ್ಥಾನದಲ್ಲಿವೆ ಎಂದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಬಹಿರಂಗಪಡಿಸಿದೆ. ಈ ಆರು ದೇಶಗಳ ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ ವೀಸಾ ಇಲ್ಲದೆ 194 ದೇಶಗಳಿಗೆ ಪ್ರಯಾಣಿಸಬಹುದು. ಆದರೆ ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದೆ. ಭಾರತೀಯ ಪಾಸ್‌ ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ 62 ದೇಶಗಳಿಗೆ ಭೇಟಿ ನೀಡಬಹುದು. ಕಳೆದ ವರ್ಷ ಈ ಸೂಚ್ಯಂಕದಲ್ಲಿ ಭಾರತ 85ನೇ ಸ್ಥಾನದಲ್ಲಿತ್ತು. ಇದರ ಪ್ರಕಾರ 59 ದೇಶಗಳಿಗೆ ಮಾತ್ರ ಭೇಟಿ ನೀಡಬಹುದಿತ್ತು. ಇದನ್ನೂ ಓದಿ: ಕಳೆದ ಐದು ವರ್ಷಗಳಿಂದ ಸಿಂಗಾಪುರ ಮತ್ತು ಜಪಾನ್ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಆದರೆ ಈ ಬಾರಿ ಇನ್ನೂ ನಾಲ್ಕು ದೇಶಗಳು ಈ ಪಟ್ಟಿಗೆ ಸೇರಿಕೊಂಡವು. ದಕ್ಷಿಣ ಕೊರಿಯಾ, ಫಿನ್ಲೆಂಡ್ ಮತ್ತು ಸ್ವೀಡನ್ ದೇಶಗಳು ಎರಡನೇ ಸ್ಥಾನದಲ್ಲಿವೆ. ಈ ಪಾಸ್‌ಪೋರ್ಟ್‌ಗಳೊಂದಿಗೆ ನೀವು 193 ದೇಶಗಳಿಗೆ ಹೋಗಬಹುದು. ಮೂರನೇ ಸ್ಥಾನದಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಇದ್ದು, ಈ ಪಾಸ್‌ಪೋರ್ಟ್‌ ಇದ್ದರೆ 192 ದೇಶಗಳಿಗೆ ಪ್ರಯಾಣಿಸಬಹುದು. ಈ ಬಾರಿ ಅಫ್ಘಾನಿಸ್ತಾನವು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಅಂದರೆ 104ನೇ ಸ್ಥಾನ. ಆ ದೇಶದ ಪಾಸ್‌ಪೋರ್ಟ್‌ನೊಂದಿಗೆ 28 ದೇಶಗಳಿಗೆ ಮಾತ್ರ ಹೋಗಬಹುದು. ಸೋದರ ರಾಷ್ಟ್ರ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ. ಇವು ಟಾಪ್ 10 ಪವರ್‌ಫುಲ್ ಪಾಸ್‌ಪೋರ್ಟ್‌ಗಳಾಗಿವೆ : 1. ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ, ಸ್ಪೇನ್ (194 ದೇಶಗಳು)2. ಫಿನ್ಲ್ಯಾಂಡ್, ದಕ್ಷಿಣ ಕೊರಿಯಾ, ಸ್ವೀಡನ್ (193 ದೇಶಗಳು)3. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ನೆದರ್ಲ್ಯಾಂಡ್ಸ್ (192 ದೇಶಗಳು)4. ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್, ಯುನೈಟೆಡ್ ಕಿಂಗ್‌ಡಮ್ (193 ದೇಶಗಳು)5. ಗ್ರೀಸ್, ಮಾಲ್ಟಾ, ಸ್ವಿಟ್ಜರ್ಲೆಂಡ್ (190 ದೇಶಗಳು)6. ಜೆಕ್ ರಿಪಬ್ಲಿಕ್, ನ್ಯೂಜಿಲ್ಯಾಂಡ್, ಪೋಲೆಂಡ್ (189 ದೇಶಗಳು)7. ಕೆನಡಾ, ಹಂಗೇರಿ, ಯುನೈಟೆಡ್ ಸ್ಟೇಟ್ಸ್ (188 ದೇಶಗಳು)8. ಎಸ್ಟೋನಿಯಾ, ಲಿಥುವೇನಿಯಾ (187 ದೇಶಗಳು)9. ಲಾಟ್ವಿಯಾ, ಸ್ಲೋವಾಕಿಯಾ, ಸ್ಲೊವೇನಿಯಾ (186 ದೇಶಗಳು)10. ಐಲ್ಯಾಂಡ್ (185 ದೇಶಗಳು) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...