: ʼಆನ್‌ಲೈನ್‌ʼನಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ..! : ಆನ್‌ಲೈನ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ, ಈ ಘಟನೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಅತ್ಯಂತ ನಾಚಿಕೆಗೇಡಿನ, ಆಘಾತಕಾರಿ ಪ್ರಕರಣವಾಗಿದೆ. ಈ ಕುರಿತು ಆಘಾತಕಾರಿ ವರದಿ ಇಲ್ಲಿದೆ ನೋಡಿ.. :ಆನ್‌ಲೈನ್ ಗೇಮ್ ಆಡುವಾಗ 16 ವರ್ಷದ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ. ಈ ಘಟನೆ ಬ್ರಿಟನ್‌ನಲ್ಲಿ ನಡೆದಿದ್ದು, ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ವರ್ಚುವಲ್‌ ರಿಯಾಲಿಟಿ () ಹೆಡ್‌ಸೆಟ್‌ ಧರಿಸಿ ಆಟವಾಡುತ್ತಿದ್ದ ಬಾಲಕಿ ಮೇಲೆ ಹುಡುಗರ ಗುಂಪು ದಾಳಿ ನಡೆಸಿ ಈ ಕೃತ್ಯ ಎಸಗಿದೆ. ಹೌದು.. ಈ ಘಟನೆ ನಿಮಗೆ ನಂಬಲು ಅಸಾಧ್ಯ ಎನಿಸಿದರು ಇದು ಸತ್ಯ. 16 ವರ್ಷದ ಯುವತಿ ವಿಆರ್‌ ಹೆಡ್‌ಸೆಟ್‌ ಧರಿಸಿ ಆನ್‌ಲೈನ್‌ನಲ್ಲಿ ಗೇಮ್‌ ಆಡುತ್ತಿದ್ದಳು, ಆಕೆಯ ವರ್ಚುವಲ್ ಅವತಾರವನ್ನು ಸತ್ತುವರೆದ ಇತರೆ ಹುಡುಗರ ವರ್ಚುವಲ್ ಗುಂಪು ಬಾಲಕಿಯನ್ನು ತಳ್ಳಿ 'ಗ್ಯಾಂಗ್ ರೇಪ್' ಮಾಡಿದೆ. ಬ್ರಿಟನ್‌ನಲ್ಲಿ ನಡೆದ ಅತ್ಯಂತ ವಿಚಿತ್ರ ಪ್ರಕರಣ ಇತ್ತೀಚಿಗೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 16 ವರ್ಷದ ಬಾಲಕಿಯ ವರ್ಚುವಲ್ ಅವತಾರದಲ್ಲಿ ಮೆಟಾವರ್ಸ್ ಆಟವಾಡುತ್ತಿದ್ದಾಗ ಆನ್‌ಲೈನ್‌ನಲ್ಲಿ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಘಟನೆಯ ನಂತರ ಬಾಲಕಿ ಆಘಾತಕ್ಕೊಳಗಾಗಿದ್ದಾಳೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಂತ್ರಸ್ತೆ ದೈಹಿಕವಾಗಿ ಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ, ಆದರೆ ನೈಜ ಸಾಮೂಹಿಕ ಅತ್ಯಾಚಾರದ ಬಲಿಪಶು ಅನುಭವಿಸುವ ಅದೇ ಮಾನಸಿಕ ಮತ್ತು ಭಾವನಾತ್ಮಕ ಆಘಾತವನ್ನು ಅನುಭವಿಸಿದ್ದಾಳೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗೃಹ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ವರ್ಚುವಲ್ ಗೇಮ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಘಟನೆಯ ತನಿಖೆಯನ್ನು ಸಮರ್ಥಿಸಿಕೊಂಡಿದ್ದಾರೆ, ಹುಡುಗಿಗೆ ಉಂಟಾದ ಮಾನಸಿಕ ಆಘಾತದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ವರ್ಚುವಲ್ ಕೃತ್ಯಗಳ ಗಂಭೀರತೆಯನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...