ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್..! 2024 : ದೇಶದ ಜನರು ಹೊಸ ವರ್ಷ 2024 ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಪ್ರಪಂಚದ ಇತರೆ ದೇಶಗಳಿಗಿಂತ ಮೊದಲು ಕಿರಿಬಾಟಿ ಎರಡನೇಯದಾಗಿ ನ್ಯೂಜಿಲೆಂಡ್‌ ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿವೆ. 2024 :ನ್ಯೂಜಿಲೆಂಡ್‌ನ ಆಕ್ಲೆಂಡ್ ಜನರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸುವ ಮೂಲಕ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನ್ಯೂ ಇಯರ್‌ ಲೇಸರ್ ಮತ್ತು ಪಟಾಕಿ ಪ್ರದರ್ಶನ ಅದ್ದೂರಿಯಾಗಿತ್ತು. ಸ್ಕೈ ಟವರ್ ಮೇಲೆ ಹತ್ತು ಸೆಕೆಂಡ್ ಕೌಂಟ್ ಡೌನ್ ನಂತರ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಸುಮಾರು 5 ನಿಮಿಷಗಳ ಕಾಲ ಪಟಾಕಿಗಳನ್ನು ಸುಡುವ ಮೂಲಕ ಕಿವೀಸ್ ಅದ್ಧೂರಿಯಾಗಿ ನ್ಯೂ ಇಯರ್‌ ಅನ್ನು ವೆಲ್‌ಕಮ್‌ ಮಾಡಿದರು. ಪೆಸಿಫಿಕ್ ದ್ವೀಪ ರಾಷ್ಟ್ರವಾದ ಕಿರಿಬಾಟಿಯು ಪ್ರಪಂಚದ ಇತರೆ ದೇಶಕ್ಕಿಂತ ಮುಂಚಿತವಾಗಿ ಹೊಸ ವರ್ಷವನ್ನು ಪ್ರಾರಂಭಿಸುತ್ತದೆ. | ' 2024 (: ) — (@) ಇದನ್ನೂ ಓದಿ: ನ್ಯೂಜಿಲೆಂಡ್‌ಗಿಂತ ಮೊದಲು ಅಲ್ಲಿ ಆಚರಣೆಗಳು ಪ್ರಾರಂಭವಾಗಿವೆ. ಇದನ್ನು ಕ್ರಿಸ್ಮಸ್ ದ್ವೀಪ ಎಂದೂ ಕರೆಯುತ್ತಾರೆ. ಕಿರಿಬಾಟಿ ನಂತರ, ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಆಚರಣೆಗಳು ನಡೆಯುತ್ತವೆ. ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಕ್ಷಣಗಣನೆ ಬಹುತೇಕ ಮುಗಿದಿದೆ. ಪ್ರತಿ ವರ್ಷ ದೇಶದ ಜನರು ಸಿಡ್ನಿ ಹಾರ್ಬರ್ ಬ್ರಿಡ್ಜ್ ಪ್ರದೇಶದಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...