ಕುಳಿತಲ್ಲೇ ಕೋಟಿಗಟ್ಟಲೆ ದುಡಿಯುತ್ತೇ ಈ ʼನಾಯಿʼ..! ಶ್ವಾನದ ಮಾಲೀಕ ಈಗ ʼಮ್ಯಾನೇಜರ್ʼ : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯನ್ನು ಬ್ರೋಡಿ ಎಂದು ಕರೆಯಲಾಗುತ್ತದೆ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಗಳಿಕೆ ಕೋಟಿಗಟ್ಟಲೇ ಇದೆ. ಅರೇ ಎನಪ್ಪಾ ಈ ನಾಯಿ ಅಷ್ಟು ಹಣ ಹೇಗೆ ಗಳಿಸುತ್ತೆ ಅಂತ ತಿಳ್ಕೊಂಡ್ರಾ..? ಬನ್ನಿ ಇಲ್ಲಿದೆ ಇಂಟ್ರಸ್ಟಿಂಗ್‌ ಮ್ಯಾಟರ್‌... :ಇಂಟರ್ನೆಟ್ ಪ್ರಪಂಚವು ವಿಭಿನ್ನ ಜಗತ್ತು, ಅದರಲ್ಲಿ ಹಲವಾರು ಅದ್ಭುತಗಳಿವೆ.. ಇಲ್ಲಿ ನಾವು ಅನೇಕ ವಿಭಿನ್ನ ವಿಷಯಗಳನ್ನು ಕಲಿಯುತ್ತೇವೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ನಮಗೆ ಅನೇಕ ಸಂದೇಶಗಳನ್ನು ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆಯ ಮಾರ್ಗವಾಗಿದೆ. ಹೌದು.. ಅಂತರ್ಜಾಲದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ನಮ್ಮ ದೈನಂದಿನ ಜೀವನದಲ್ಲಿ ನಮಗೆ ಸ್ವಲ್ಪ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇವುಗಳಲ್ಲಿ, ಪ್ರಾಣಿಗಳ ವೀಡಿಯೊಗಳು ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿವೆ. ಪ್ರಾಣಿಗಳ ಜಗತ್ತಿನಲ್ಲಿ, ನಾವು ನಂಬಲಾಗದ ಮತ್ತು ಎಂದೂ ನೋಡಿರದ ಅನೇಕ ಪ್ರಕರಣಗಳನ್ನು ಇಲ್ಲಿ ಕಾಣುತ್ತೇವೆ. ಇದನ್ನೂ ಓದಿ: ಇಂದಿನ ಯುಗದಲ್ಲಿ ಜನಸಂಖ್ಯೆ ತುಂಬಾ ಹೆಚ್ಚಿದ್ದು, ಹಲವಾರು ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಷ್ಟೋ ಜನ ಚೆನ್ನಾಗಿ ಓದಿ ಪದವಿ ಪಡೆದರೂ ಕೆಲಸ ಸಿಗುತ್ತಿಲ್ಲ. ಆದರೆ ಶ್ವಾನವೊಂದು ಕೂತಲ್ಲೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದೆ ಎಂದರೆ ನಂಬುತ್ತೀರಾ..? ಇದು ಸಾಮಾನ್ಯ ನಾಯಿಯಲ್ಲ.. ಮಿಲಿಯನೇರ್...! ಇನ್ನೊಂದು ಅಚ್ಚರಿ ವಿಚಾರ ಅಂದ್ರೆ, ಈ ನಾಯಿ ತನ್ನ ಬಳಿ ತುಂಬಾ ಹಣವಿದೆ ಎಂಬ ಕಾರಣಕ್ಕೆ ಅದು ತನ್ನ ಬಾಸ್ ಅನ್ನು ತನ್ನ ಮ್ಯಾನೇಜರ್‌ ಆಗಿ ಮಾಡಿಕೊಂಡಿದೆ. ಆದರೆ ಈ ನಾಯಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಕೆಲಸವೇನು..? ಸಂಪೂರ್ಣ ಕಥೆಯನ್ನು ತಿಳಿಯೋಣ ಬನ್ನಿ.. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯ ಹೆಸರು ಬ್ರಾಡಿ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಆದಾಯ ಕೋಟಿಯಲ್ಲಿದೆ ಎನ್ನಲಾಗಿದೆ. ಇದು ಕೇವಲ 4 ವರ್ಷ, ಆದರೆ ಇಲ್ಲಿಯವರೆಗೆ ಈ ನಾಯಿ ಒಟ್ಟು ಒಂದು ಮಿಲಿಯನ್ ಅಂದರೆ ರೂ. 8 ಕೋಟಿ 29 ಲಕ್ಷ ಗಳಿಸಿದೆ. ಈ ಬ್ರೂಡಿ ನಾಯಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಖಾತೆಯನ್ನು ಹೊಂದಿದೆ. ಇದು 6 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 60 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಬ್ರಾಡಿ ಅಧಿಕೃತ ಖಾತೆಯನ್ನು ಸಹ ಹೊಂದಿದ್ದಾರೆ. ಇದು 1 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 10 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಈ ನಾಯಿ ಹಲವು ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದೆ. ಇದನ್ನೂ ಓದಿ: ಬ್ರೂಡಿಯ ಮಾಲೀಕ ಕ್ಲಿಫ್. ಈ ನಾಯಿಯ ಮಾಲೀಕ ತನ್ನನ್ನು ತನ್ನ ನಾಯಿಯ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾನೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಬ್ರಾಡಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಇಷ್ಟಪಡುತ್ತಾರೆ. ಇದರೊಂದಿಗೆ ಇಂದು ಬ್ರಾಡಿ ಕೋಟಿಗಟ್ಟಲೆ ಸಂಪಾದಿಸುತ್ತಾನೆ. ಶ್ವಾನದ ವಿಡಿಯೋವನ್ನು ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತದೆ. ಬ್ರಾಡಿ ಸಂಪಾದನೆ ಕೋಟಿಗಟ್ಟಲೆ ಇದ್ದರೂ ಮನೆಯಲ್ಲಿ ಸುಮ್ಮನಿರುವುದಿಲ್ಲ. ಅದಕ್ಕೆ ಹೊಸ ಕೆಲಸವೂ ಸಿಕ್ಕಿದೆ. ಈಗ ಈ ಗೋಲ್ಡನ್ ಡೂಡಲ್ ನಾಯಿಯು ಮಿಯಾಮಿ ಬೀಚ್ ಪೊಲೀಸ್ ಇಲಾಖೆಯ ಭಾಗವಾಗಿದೆ. ಇತ್ತೀಚೆಗಷ್ಟೇ ಈ ಶ್ವಾನ ಪೊಲೀಸ್ ಪಡೆಯಲ್ಲಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಈಗ ಈ ನಾಯಿ ಕ್ರಿಸ್‌ಮಸ್ ಸಂದರ್ಭದಲ್ಲಿ ಮಕ್ಕಳಿಗೆ ಉಡುಗೊರೆ ನೀಡಲು ಪೊಲೀಸರೊಂದಿಗೆ ಬರಲಿದೆ. ನಾಯಿಯ ಮಾಲೀಕರು ಈ ಕುರಿತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...