: ಚೀನಾದಲ್ಲಿ ಪ್ರಬಲ ಭೂಕಂಪ, 110ಕ್ಕೂ ಹೆಚ್ಚು ಮಂದಿ ಮೃತ, ಹಲವರಿಗೆ ಗಾಯ : ವಾಯುವ್ಯ ಚೀನಾದಲ್ಲಿ ಪ್ರಬಲಕ್ಕೆ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. :ಭಾರತದ ನೆರೆಯ ರಾಷ್ಟ್ರ ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 110ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವಾಯುವ್ಯ ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿದಲ್ಲಿ ಕನಿಷ್ಠ 111 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಮವಾರ ತಡರಾತ್ರಿ ಸಂಭವಿಸಿದದಲ್ಲಿ ಗನ್ಸು ಪ್ರಾಂತ್ಯದಲ್ಲಿ 86 ಮಂದಿ ಮತ್ತು ನೆರೆಯ ಕಿಂಗ್ಹೈ ಪ್ರಾಂತ್ಯದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಭೂಕಂಪದಿಂದಾಗಿ 230ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ- ಲಭ್ಯವಿರುವ ಮಾಹಿತಿಗಳ ಪ್ರಕಾರ, ವಾಯುವ್ಯ ಚೀನಾದಲ್ಲಿ ಸಂಭವಿಸಿರುವ ಈ ಪ್ರಬಲ ಭೂಕಂಪದಿಂದಾಗಿ ರಸ್ತೆಗಳು ಮತ್ತು ಕಟ್ಟಡಗಳಿಗೆ ಭಾರೀ ಹಾನಿಯಾಗಿದ್ದು, ವಿದ್ಯುತ್ ಮತ್ತು ಸಂಪರ್ಕ ಮಾರ್ಗಗಳು ಸ್ಥಗಿತಗೊಂಡಿವೆ. ಸದ್ಯ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ.ಚೀನಾದ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಮಂಗಳವಾರ ಮುಂಜಾನೆ ಪಾರುಗಾಣಿಕಾ ಕಾರ್ಯ ನಡೆಯುತ್ತಿದ್ದು, ಬದುಕುಳಿದವರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ- ಈ ಸಂದರ್ಭದಲ್ಲಿ ಪೀಡಿತ ಜನರಿಗಾಗಿ ಪುನರ್ವಸತಿ ಮತ್ತು ಜನರ ಜೀವನ ಮತ್ತು ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗರಿಷ್ಠ ಪ್ರಯತ್ನ ಮುಂದುವರೆಸುವಂತೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ.ಚೀನಾದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದ ಕೇಂದ್ರಬಿಂದುವು ಗನ್ಸು ಪ್ರಾಂತ್ಯದ ರಾಜಧಾನಿ ಲ್ಯಾನ್‌ಝೌ ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ (60 ಮೈಲುಗಳು) ದೂರದಲ್ಲಿದೆ. ಇದು ಉತ್ತರ ಶಾಂಕ್ಸಿ ಪ್ರಾಂತ್ಯದ ಕ್ಸಿ ಆನ್‌ನಲ್ಲಿ ಸುಮಾರು 570 ಕಿಲೋಮೀಟರ್ (350 ಮೈಲುಗಳು) ದೂರದಲ್ಲಿ ಎಂದು ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...