ನೆರೆಯ ರಾಷ್ಟ್ರಗಳಲ್ಲಿ ಬೆಳ್ಳಂಬೆಳಗ್ಗೆ ಸರಣಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆ ದಾಖಲು : ಭಾರತದ ನೆರೆಯ ರಾಷ್ಟ್ರಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪ ಸಂಭವಿಸಿದ್ದು, ಪ್ರಬಲ ಭೂಕಂಪಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. :ಇಂದು (ನವೆಂಬರ್ 28, ಮಂಗಳವಾರ) ಮುಂಜಾನೆ ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಮತ್ತು ಪಪುವಾದ ಕೆಲವು ಭಾಗಗಳಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಪಾಕಿಸ್ತಾನ, ನ್ಯೂ ಗಿನಿಯಾ ಮತ್ತು ಕ್ಸಿಜಾಂಗ್‌ನಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಮೂರು ದೇಶಗಳಲ್ಲಿ ಏಕಕಾಲಕ್ಕೆ ಪ್ರಬಲ ಭೂಕಂಪ:ಮಂಗಳವಾರ ಮುಂಜಾನೆ ಪಾಕಿಸ್ತಾನ, ಚೀನಾ ಮತ್ತು ಪಪುವಾ ನ್ಯೂಗಿನಿಯಾದಲ್ಲಿದ ಅನುಭವವಾಗಿದ್ದು, ಭಯಭೀತರಾದ ಜನ ಮನೆಯಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಅತಿ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿದೆ. ಆದಾಗ್ಯೂ, ಈ ಘಟನೆಯಲ್ಲಿ ಇದುವರೆಗೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದನ್ನೂ ಓದಿ- ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿರುವಂತೆ ಮಂಗಳವಾರದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಎನ್‌ಸಿ‌ಎಸ್ ಪ್ರಕಾರ, ಇಂದು ಮುಂಜಾನೆ 3:38 ಕ್ಕೆ () ಪಾಕಿಸ್ತಾನದಲ್ಲಿ ಭೂಕಂಪದ ಅನುಭವವಾಗಿದೆ. ಈ ಭೂಕಂಪದ ಕೇಂದ್ರ 10 ಕಿಮೀ ಆಳದಲ್ಲಿ 34.66 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 73.51 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿದುಬಂದಿದೆ. ನ್ಯೂಗಿನಿಯಾದಲ್ಲಿ ಭೂಕಂಪ:ಪಾಕಿಸ್ತಾನದಲ್ಲಿ ಭೂಕಂಪ ಅಪ್ಪಳಿಸುವ ನಿಮಿಷಗಳ ಮೊದಲುಪಪುವಾ ನ್ಯೂಗಿನಿಯಾದ ನ್ಯೂ ಗಿನಿಯಾದ ಉತ್ತರ ಕರಾವಳಿಯಲ್ಲಿ ಇಂದು ಮುಂಜಾನೆ 03:16 ಕ್ಕೆ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಇದನ್ನೂ ಓದಿ- ಚೀನಾದ ಜಿಜಾಂಗ್‌ನಲ್ಲಿ ಭೂಕಂಪ:ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಇಂದು ಮುಂಜಾನೆ 03:45 ಕ್ಕೆ ಜಿಜಾಂಗ್‌ನಲ್ಲಿರುವ ಚೀನಾದ ವಿವಾದಿತ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಅದೇ ರೀತಿ, ರಿಕ್ಟರ್ ಮಾಪಕದಲ್ಲಿ 5.0 ರ ತೀವ್ರತೆಯ ಭೂಕಂಪವು 140 ಕಿಮೀ ಆಳದಲ್ಲಿ ಕ್ಸಿಜಾಂಗ್ ಅನ್ನು 3:45 ಕ್ಕೆ ಅಪ್ಪಳಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...