: ಮಕ್ಕಳ ಎದುರೇ ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು..! ಇಸ್ರೇಲ್-ಹಮಾಸ್ ಯುದ್ಧ: ಅಕ್ಟೋಬರ್ 7ರಂದು ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ಮೇಲೆ ಅತಿದೊಡ್ಡ ದಾಳಿಯನ್ನು ಪ್ರಾರಂಭಿಸಿತು. ಈ ದಾಳಿಯಲ್ಲಿ 1,400 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದು, 240ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಳ್ಳಲಾಗಿದೆ. ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿತು. ನವದೆಹಲಿ:ಇಸ್ರೇಲ್‌ನ ಸ್ಡೆರೋಟ್ ನಗರದಲ್ಲಿ ಹಮಾಸ್ ದಾಳಿಯ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇಬ್ಬರು ಹೆಣ್ಣುಮಕ್ಕಳ ಎದುರೇ ಹಮಾಸ್ ಉಗ್ರರು ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇಸ್ರೇಲಿ ಮಹಿಳೆ ಒಡೆಯಾ ಸ್ವಿಸ್ಸಾ ಚಲಾಯಿಸುತ್ತಿದ್ದ ಕಾರನ್ನು ತಡೆದರು ಗುಂಡಿನ ದಾಳಿ ನಡೆಸಿದ್ದಾರೆ. ಮೃತ ಸ್ವಿಸ್ಸಾ ನಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಭಯೋತ್ಪಾದಕರು ಕಾರಿನ ಹಿಂಬದಿಯ ಸೀಟಿನ ಕೆಳಗೆ ಅಡಗಿದ್ದ ಇಬ್ಬರು ಪುತ್ರಿಯರ ಎದುರೇ ಆಕೆಗೆ ಗುಂಡಿಕ್ಕಿದ್ದಾರೆ. ಮಕ್ಕಳು ಕಾರಿನಲ್ಲಿದ್ದಾರೆ ಅನ್ನೋದು ತಿಳಿಯದೆ ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಘಟನೆಯ ಸ್ವಲ್ಪ ಸಮಯದ ನಂತರ ಇಸ್ರೇಲಿ ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಕ್ಷಿಸಲು ಬಂದ ಅಧಿಕಾರಿ ಇಸ್ರೇಲಿ ಎಂಬುದನ್ನು ತಿಳಿದಾಗ ಆ ಹೆಣ್ಣುಮಕ್ಕಳು ‘ನಮ್ಮನ್ನು ಕರೆದುಕೊಂಡು ಹೋಗಿ’ ಎಂದು ಮನವಿ ಮಾಡಿರುವುದು ಕೂಡ ಸೆರೆಯಾಗಿದೆ. 7. , , , 6, , 3. , ' . , … — (@) ಅಕ್ಟೋಬರ್ 7ರಂದು ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಇಸ್ರೇಲ್ ಮೇಲೆ ಅತಿದೊಡ್ಡ ದಾಳಿ ನಡೆಸಿದೆ. ಈ ದಾಳಿಯಲ್ಲಿ 1,400 ಇಸ್ರೇಲಿಗಳು ಸಾವನ್ನಪ್ಪಿದ್ದು, 240ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿಸಿಕೊಳ್ಳಲಾಗಿದೆ. ನಂತರ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧ ಘೋಷಿಸಿತು. ಕೂಡಲೇ ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ಮೇಲೆ ಬಾಂಬ್ ದಾಳಿ ಪ್ರಾರಂಭಿಸಿತು. ಗಾಜಾದ ಮೇಲೆ ಇಸ್ರೇಲ್‌ನ ಬಾಂಬ್ ದಾಳಿ ಇನ್ನೂ ಮುಂದುವರೆದಿದ್ದು, ಅದರ ಸೈನ್ಯವು ನಗರದಲ್ಲಿ ಕಾರ್ಯಾಚರಣೆ ಸಹ ನಡೆಸುತ್ತಿದೆ. ಇಸ್ರೇಲ್ ದಾಳಿಯಲ್ಲಿ 4,100 ಮಕ್ಕಳು ಸೇರಿದಂತೆ 10,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಡಿಫೆನ್ಸ್ ಫೋರ್ಸಸ್ () ಕಳೆದ ತಿಂಗಳಲ್ಲಿ 14,000ಕ್ಕೂ ಹೆಚ್ಚು ಭಯೋತ್ಪಾದಕ ಗುರಿಗಳನ್ನು ಹೊಡೆದಿದೆ ಎಂದು ಹೇಳಿದೆ. ಹಲವಾರು ಹಮಾಸ್ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಿದ್ದು, ಪ್ರಮುಖ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ. ‘ಗಾಜಾ ನಗರವನ್ನು ನಮ್ಮ ಸೈನಿಕರು ಸುತ್ತುವರೆದಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿದಿನವೂಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ’ ಎಂದು ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...