ಗಾಜಾದಲ್ಲಿ ಪತ್ರಕರ್ತರಿಗೆ ಸುರಕ್ಷತೆಯ ಭರವಸೆ ಇಲ್ಲ! ಇಸ್ರೇಲ್ ಸೇನೆಯ ಘೋಷಣೆ - : ಇಸ್ರೇಲ್‌ನ ಗುರಿಯಾಗಿರುವ ಗಾಜಾ ಪಟ್ಟಿಯಲ್ಲಿರುವ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ. - : ಪ್ಯಾಲೆಸ್ತೀನ್ ಪ್ರಾಂತ್ಯದ ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಭಯೋತ್ಪಾದಕ ಗುಂಪು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ರಾಕೆಟ್ ಹಾರಿಸಿ, ಪ್ರದೇಶದೊಳಗೆ ನುಗ್ಗಿ 1,400 ಜನರನ್ನು ಕೊಂದಿತ್ತು. ಇದೇ ಕಾರಣಕ್ಕಾಗಿ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದು, ದಾಳಿಯಲ್ಲಿ ಸುಮಾರು 7,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಎಎಫ್‌ಪಿ ಇಸ್ರೇಲ್‌ ಸೇನೆಗೆ ಪತ್ರ ಬರೆದಿದ್ದು, ಗಾಜಾದಲ್ಲಿ ಪತ್ರಕರ್ತರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಸೇನೆಯು ಗಾಜಾದಲ್ಲಿ ತನ್ನ ಪತ್ರಕರ್ತರ ಮೇಲೆ ದಾಳಿ ಮಾಡುವುದಿಲ್ಲ ಎಂಬ ಭರವಸೆಯನ್ನು ನೀಡುವಂತೆ ಕೋರಲಾಗಿತ್ತು. ಇದನ್ನೂ ಓದಿ- ಪ್ರತಿಕ್ರಿಯೆಯಾಗಿ ಇಸ್ರೇಲಿ ಮಿಲಿಟರಿ ಈ ವಾರ ರಾಯಿಟರ್ಸ್ ಮತ್ತು ಎಎಫ್‌ಪಿಗೆ ಪತ್ರ ಬರೆದಿದೆ. "ಇಸ್ರೇಲ್ ಸೇನೆಯು ಗಾಜಾದಾದ್ಯಂತ ಹಮಾಸ್‌ ಎಲ್ಲಾ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಂಡಿದೆ. ಹಮಾಸ್ ಉದ್ದೇಶಪೂರ್ವಕವಾಗಿ ಪತ್ರಕರ್ತರು ಮತ್ತು ನಾಗರಿಕರು ಇರುವ ಪ್ರದೇಶಗಳ ಬಳಿ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಹಮಾಸ್ ರಾಕೆಟ್‌ಗಳು ಆಕಸ್ಮಿಕವಾಗಿ ಗಾಜಾದಲ್ಲಿ ನಾಗರಿಕರನ್ನು ಕೊಲ್ಲಬಹುದು ಈ ಸಂದರ್ಭಗಳಲ್ಲಿ, ನಿಮ್ಮ ಉದ್ಯೋಗಿಗಳ ಅಂದರೆ ಪತ್ರಕರ್ತರ ಸುರಕ್ಷತೆಯನ್ನು ನಾವು ಖಾತರಿಪಡಿಸುವುದಿಲ್ಲ ಮತ್ತು ಅವರಿಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ನಾವು ಒತ್ತಾಯಿಸುತ್ತೇವೆ" ಎಂದು ತಿಳಿಸಿದೆ. ಗಾಜಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಷ್ಟು ಸುದ್ದಿ ಸಂಸ್ಥೆಗಳು ಇದೇ ರೀತಿಯ ಪತ್ರವನ್ನು ಸ್ವೀಕರಿಸಿವೆ ಎಂಬುದು ತಿಳಿದಿಲ್ಲ. ಆದರೆ ಇತ್ತೀಚೆನ ವರದಿಯ ಪ್ರಕಾರ ಯುಎನ್ ಮಾನವೀಯ ಆಧಾರದ ಮೇಲೆ ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ-‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...