: ಬಾಂಗ್ಲಾದೇಶದಲ್ಲಿ ಭೀಕರ ರೈಲು ದುರಂತ, 13 ಜನರ ದುರ್ಮರಣ, ಹಲವರಿಗೆ ಗಾಯ : ಸಂಜೆ 4.15ರ ಸುಮಾರಿಗೆ ಗೂಡ್ಸ್ ರೈಲು ಕಿಶೋರ್‌ಗಂಜ್‌ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಢಾಕಾ:ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಸೋಮವಾರ ಎರಡು ರೈಲುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಅಪಘಾತದ ಚಿತ್ರಗಳನ್ನು ನೋಡಿದರೆ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಸುದ್ದಿ ಸಂಸ್ಥೆ ಪಿಟಿಐ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, 'ಬಾಂಗ್ಲಾದೇಶದಲ್ಲಿ ಪ್ಯಾಸೆಂಜರ್ ರೈಲು ಮತ್ತು ಗೂಡ್ಸ್ ರೈಲು ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಸ್ಥಳೀಯ ಕಾಲಮಾನ ಸಂಜೆ 4.15ರ ಸುಮಾರಿಗೆ ಕಿಶೋರಗಂಜ್‌ನಿಂದ ಢಾಕಾಕ್ಕೆ ಬರುತ್ತಿದ್ದ ಪ್ಯಾಸೆಂಜರ್ ರೈಲಿಗೆಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ( ) ಇದನ್ನೂ ಓದಿ- ಸುದ್ದಿ ಪೋರ್ಟಲ್ BDNews24 ಉಲ್ಲೇಖಿಸಿ ಬರೆದುಕೊಂಡ ಪಿಟಿಐ, 'ಭೈರಬ್ ರೈಲ್ವೆ ನಿಲ್ದಾಣದ ಪೊಲೀಸ್ ಅಧಿಕಾರಿಯೊಬ್ಬರು ಇದುವರೆಗೆ 13 ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಹಾನಿಗೊಳಗಾದ ಕೋಚ್‌ಗಳಲ್ಲಿ ಹಲವರು ಸಿಲುಕಿಕೊಂಡಿದ್ದಾರೆ ಎಂದು ನ್ಯೂಸ್ ಪೋರ್ಟಲ್ ತಿಳಿಸಿದೆ. ಘಟನೆಯ ಕುರಿತು ಮಾಹಿತಿ ನೀಡಿರುವ ಢಾಕಾ ರೈಲ್ವೇ ಪೊಲೀಸ್ ಅಧೀಕ್ಷಕ ಅನ್ವರ್ ಹುಸೇನ್, 'ಗೂಡ್ಸ್ ರೈಲು ಹಿಂದಿನಿಂದ ಅಗಾರೋ ಸಿಂಧೂರ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ' ಎಂದು ಹೇಳಿದ್ದಾರೆ. ಇದನ್ನೂ ನೋಡಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...