ಹಣ ಗಳಿಸದೆ, ತಂತ್ರಜ್ಞಾನದ ಅವಶ್ಯಕತೆ ಇಲ್ಲದೆ ಬದುಕುತ್ತಿರುವ ವಿದೇಶಿ..! ಇವರಿಗೆ ಗಾಂಧೀಜಿಯೇ ಸ್ಫೂರ್ತಿ : ಮಾರ್ಕ್ ಬೊಯ್ಲ್, 'ದ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರರಾಗಿದ್ದು, ಅವರು ನವೆಂಬರ್ 2008 ರಿಂದ ಹಣವಿಲ್ಲದೆ ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಬದುಕುತ್ತಿದ್ದಾರೆ. :ಹೆಚ್ಚಿನ ಜನರು ಸುಂದರವಾಗಿ ಸಂಪಾದಿಸಲು ಮತ್ತು ಆರಾಮದಾಯಕ ಮತ್ತು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಆದ್ರೆ ಈ ಲೇಖನದಲ್ಲಿ, ನಾವು 2008 ರಿಂದ ಸಂಪೂರ್ಣವಾಗಿ ಹಣ ಗಳಿಕೆ ಮತ್ತು ಬಳಕೆ ಇಲ್ಲದೆ ಬದುಕು ಸಾಗಿಸುತ್ತಿರುವ ಅಪರೂಪದ ವ್ಯಕ್ತಿಯ ಬಗ್ಗೆ ನಿಮಗೆ ನಾವು ತಿಳಿಸಿಕೊಡುತ್ತೇವೆ. ಹೌದು.. ಮಾರ್ಕ್ ಬೊಯ್ಲ್, 'ದಿ ಮನಿಲೆಸ್ ಮ್ಯಾನ್' ಎಂದೂ ಕರೆಯಲ್ಪಡುವ ಐರಿಶ್ ಬರಹಗಾರ, ಅವರು ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್‌ಗೆ ನಿಯಮಿತವಾಗಿ ಬರೆಯುತ್ತಾರೆ. ನವೆಂಬರ್ 2008 ರಿಂದ ಹಣವಿಲ್ಲದೆ ಬದುಕು ಮತ್ತು 2016 ರಿಂದ ಆಧುನಿಕ ತಂತ್ರಜ್ಞಾನವಿಲ್ಲದೆ ಜೀವನ ನಡೆಸಿದ ಕುರಿತು ತಮ್ಮ ಅನುಭವಗಳ ಪುಸ್ತಕ ಬರೆದಿದ್ದಾರೆ. ಇದನ್ನೂ ಓದಿ: ಮಾರ್ಕ್ ಬೊಯೆಲ್ 1979 ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದರು. ಅವರು ಗಾಲ್ವೇ-ಮೇಯೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬ್ಯುಸಿನೆಸ್‌ನಲ್ಲಿ ಪದವಿ ಪಡೆದಿದ್ದಾರೆ. 2002 ರಲ್ಲಿ ಗೆ ತೆರಳಿದರು. ಅಲ್ಲಿನ ಬ್ರಿಸ್ಟಲ್‌ನಲ್ಲಿ ಕೈತುಂಬಾ ವೇತನ ಬರುವ ಕೆಲಸದಲ್ಲಿದ್ದರು. ಆದರೆ, 2007 ರಲ್ಲಿ ಒಂದು ರಾತ್ರಿ ಅವರ ಎಲ್ಲಾ ಆಲೋಚನೆಯನ್ನು ಬದಲಾಯಿಸಿತು. ಅವರ ದೋಣಿಮನೆಯಲ್ಲಿ ಕುಳಿತು ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿದ್ದಾಗ, ಸಮಸ್ಯೆಗಳಿಗೆ ಹಣವೇ ಮೂಲ ಎಂಬ ಅರಿವು ಅವರಿಗೆ ಬಂತು. ಆಗ ಹಣವಿಲ್ಲದೆ ಜೀವನ ನಡೆಸಬೇಕು ಎಂಬ ನಿರ್ಣಯ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದರು. ಇದನ್ನೂ ಓದಿ: ಅಲ್ಲಿಂದ ಮಾರ್ಕ್ ತನ್ನ ದುಬಾರಿ ದೋಣಿಯನ್ನು ಮಾರಿ ಹಣವಿಲ್ಲದೆ ಹಳೆಯ ಕಾರವಾನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರು, ಚಹಾ, ಕಾಫಿ ಮತ್ತು ಇತರ ಅನುಕೂಲಗಳನ್ನು ತ್ಯಜಿಸಿದರು. ಪ್ರಕೃತಿಯಿಂದ ಪಡೆದದ್ದನ್ನು ಮಾತ್ರ ಬಳಸಲು ಪ್ರಾರಂಭಿಸಿದರು. ಅಂದಿನಿಂದ ಅವರು ಅನಾರೋಗ್ಯಕ್ಕೆ ಒಳಗಾಗಿಲ್ಲ, ಅಲ್ಲದೆ ಅವರಿಗೆ ರಕ್ಷಣೆ ಅಗತ್ಯವಿಲ್ಲ ಎಂದು ಮಾರ್ಕ್‌ ಹೇಳುತ್ತಾರೆ. ಅನೇಕ ಸ್ನೇಹಿತರಿದ್ದರೂ ಸಹ ಮೊಬೈಲ್‌ ಸೇರಿದಂತೆ ಎಲ್ಲಾ ರೀತಿಯ ತಂತ್ರಜ್ಞಾನವನ್ನೂ ಸಂಪೂರ್ಣವಾಗಿ ತ್ಯಜಿಸಿದರು. ಬೋಯ್ಲ್ ಅವರು ತಮ್ಮ ಪದವಿಯ ಅಂತಿಮ ವರ್ಷದಲ್ಲಿ, ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಜೀವನದ ಬಗ್ಗೆ 'ಗಾಂಧಿ' ಚಲನಚಿತ್ರವನ್ನು ವೀಕ್ಷಿಸಿ ಅರಿತುಕೊಂಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಇವರಿಗೆ ಗಾಂಧಿಜೀಯ ಜೀವನವೇ ಈ ರೀತಿ ಬದುಕಲು ಸ್ಪೂರ್ತಿಯಾಯಿತು ಅಂತ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...