500 ಜನ ಆಶ್ರಯ ಪಡೆದಿದ್ದ ಗಾಜಾದ 900 ವರ್ಷ ಹಳೆಯ ಚರ್ಚ್ ಮೇಲೆ ಇಸ್ರೇಲ್ ಬಾಂಬ್ ದಾಳಿ..! : ಇಸ್ರೇಲ್ ಉತ್ತರ ಗಾಜಾದ ಮೇಲೆ ಬಾಂಬ್ ದಾಳಿ ಮಾಡಿದೆ. ಜನರು ಆಶ್ರಯ ಪಡೆದಿದ್ದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಚರ್ಚ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ತಿಳಿದುಬಂದಿಲ್ಲ. - :ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಗಾಜಾವನ್ನು ವಶಪಡಿಸಿಕೊಳ್ಳದೆ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಗಾಜಾದಲ್ಲಿ ಆಸ್ಪತ್ರೆಗಳು, ವಸತಿ ಪ್ರದೇಶಗಳು ಮತ್ತು ಚರ್ಚ್‌ಗಳ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ. ಈ ಪೈಕಿ ಇಂದು ಇಸ್ರೇಲ್ ಗಾಜಾದ ಸೇಂಟ್ ಪೋರ್ಫಿರಿಯ ಪ್ರಾಚೀನ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಇದುವರೆಗೆ 8 ಮಂದಿ ಗಾಯಗೊಂಡಿದ್ದಾಗಿ ಎಂದು ವರದಿಯಾಗಿದ್ದು, ಇನ್ನೂ ಹಲವು ಮೃತದೇಹಗಳು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿಗೊಳಗಾಗಿರುವ ಗಾಜಾದ ಈ ಚರ್ಚ್ ಸುಮಾರು 900 ವರ್ಷಗಳಷ್ಟು ಹಳೆಯದು. ಇದನ್ನು 1150 ರಲ್ಲಿ ನಿರ್ಮಿಸಲಾಯಿತು. ಯುದ್ಧದ ಮಧ್ಯೆ, ಕನಿಷ್ಠಇಸ್ರೇಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು. ಇಸ್ರೇಲ್ ದಾಳಿಯಿಂದಾಗಿ ಜನರು ಜೀವಂತ ಸಮಾಧಿಯಾಗಿದ್ದಾರೆ. ಇದನ್ನೂ ಓದಿ: ಇನ್ನು ರಾಯಿಟರ್ಸ್ ಮಾಧ್ಯಮ ವರದಿಯ ಪ್ರಕಾರ, ಆರ್ಥೊಡಾಕ್ಸ್ ಚರ್ಚ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಜೆರುಸಲೆಮ್‌ನ ಆರ್ಥೊಡಾಕ್ಸ್ ಪೇಟ್ರಿಯಾರ್ಕೇಟ್ ಗಾಜಾ ನಗರದಲ್ಲಿ ಚರ್ಚ್ ಕಾಂಪೌಂಡ್‌ಗೆ ಹೊಡೆದ ಇಸ್ರೇಲಿ ವೈಮಾನಿಕ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಗಾಜಾದ 2.3 ಮಿಲಿಯನ್ ಜನಸಂಖ್ಯೆಯು 1,000 ಕ್ರಿಶ್ಚಿಯನ್ನರನ್ನು ಒಳಗೊಂಡಿದೆ, ಅವರಲ್ಲಿ ಹೆಚ್ಚಿನವರು ಗ್ರೀಕ್ ಆರ್ಥೊಡಾಕ್ಸ್. ದಾಳಿಯ ಕುರಿತು ಇಸ್ರೇಲಿ ಸೇನೆಯು ಭಯೋತ್ಪಾದಕರ ಕಮಾಂಡ್ ಸೆಂಟರ್ ಮೇಲೆ ದಾಳಿಯ ಸಂದರ್ಭದಲ್ಲಿ ಚರ್ಚ್‌ನ ಒಂದು ಭಾಗವು ಅನಿರೀಕ್ಷಿತವಾಗಿ ಹಾನಿಗೊಳಗಾಗಿದೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...