"ಅವರು ಪ್ರಾರಂಭಿಸಿದ್ದಾರೆ, ನಾವು ಮುಗಿಸುತ್ತೇವೆ": ಹಮಾಸ್ಗೆ ಇಸ್ರೇಲ್ ಪ್ರಧಾನಿಯಿಂದ ಖಡಕ್ ಎಚ್ಚರಿಕೆ! - : ಇಸ್ರೇಲ್‍ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ಇಸ್ರೇಲ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಅಂತಾ ಹೇಳಿದ್ದಾರೆ. ಟೆಲ್ ಅವಿವ್:ಹಮಾಸ್‌ಗೆ ಮಂಗಳವಾರ ಕಠಿಣ ಎಚ್ಚರಿಕೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ಈ ಯುದ್ಧವನ್ನು ಅವರು ಪ್ರಾರಂಭಿಸಿದ್ದಾರೆ, ನಾವು ಅದನ್ನು ಮುಗಿಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973ರ ಯೋಮ್ ಕಿಪ್ಪೂರ್ ಯುದ್ಧದ ವೇಳೆ ಇಸ್ರೇಲ್ 400,000 ಸೈನಿಕರಿಂದ ಹೋರಾಡಿತ್ತು. ಅದಾದ ಬಳಿಕ ಇದೀಗ ಹಮಾಸ್ ವಿರುದ್ಧ ದೊಡ್ಡಮಟ್ಟದಲ್ಲಿ ಸೈನ್ಯಪಡೆಯನ್ನು ಯುದ್ಧಕ್ಕೆ ಸಜ್ಜುಗೊಳಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ‘ಇಸ್ರೇಲ್ ಯುದ್ಧದಲ್ಲಿದೆ. ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಆದರೆ ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸುತ್ತದೆ’ ಎಂದು ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ಶನಿವಾರ ಬೆಳಗ್ಗೆ ನಡೆದ ಹಮಾಸ್ ದಾಳಿಯಲ್ಲಿ 700ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 2,300 ಇಸ್ರೇಲಿಗಳು ಗಾಯಗೊಂಡಿದ್ದಾರೆ. ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ನೂರಾರು ಅಮಾಯಕರ ಪ್ರಾಣ ತೆಗೆದಿರುವ ಹಮಾಸ್ ತಕ್ಕ ಬೆಲೆ ತೆರುತ್ತಾರೆ. ಇತಿಹಾಸದಲ್ಲಿ ಅವರು ಇದನ್ನು ದೀರ್ಘಕಾಲ ನೆನಪಿಸಿಕೊಳ್ಳುತ್ತಾರೆ ಅಂತಾ ನೆತನ್ಯಾಹು ಹಮಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಮ್ಮ ಮೇಲೆ ದಾಳಿ ಮಾಡುವ ಮೂಲಕ ಅವರು ದೊಡ್ಡ ತಪ್ಪು ಮಾಡಿದ್ದಾರೆ. ನಾವು ಅವರಿಗೆ ಮತ್ತು ಇಸ್ರೇಲ್‌ನ ಇತರ ಶತ್ರುಗಳು ಮುಂಬರುವ ದಶಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಹಾಗೆ ತಕ್ಕ ಉತ್ತರ ನೀಡುತ್ತೇವೆ. ಮುಗ್ಧ ಇಸ್ರೇಲಿಗಳ ವಿರುದ್ಧ ಹಮಾಸ್ ನಡೆಸಿದ ಘೋರ ದಾಳಿ ಮನಸ್ಸಿಗೆ ನೋವುಂಟು ಮಾಡಿದೆ. ಯುವಕರು, ಮಕ್ಕಳು ಮಹಿಳೆಯರು ಎನ್ನದೇ ಹತ್ಯೆ ಮಾಡುವುದು, ಅಪಹರಿಸುವುದು ಮಾಡಿದ್ದಾರೆ. ಹಮಾಸ್ ಭಯೋತ್ಪಾದಕರು ಮಕ್ಕಳನ್ನು ಬಂಧಿಸಿ, ಸುಟ್ಟುಹಾಕಿದ್ದಾರೆ. ಇದು ಅವರ ಅನಾಗರಿಕತೆಯನ್ನು ತೋರಿಸುತ್ತದೆ. ಇದಕ್ಕೆ ನಾವು ತಕ್ಕ ಉತ್ತರ ನೀಡಲಿದ್ದೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇದೇ ವೇಳೆ ಇಸ್ರೇಲ್‍ಗೆ ಬೆಂಬಲ ನೀಡಿದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ವಿಶ್ವ ನಾಯಕರಿಗೆ ಬೆಂಜಮಿನ್ ನೆತನ್ಯಾಹು ಧನ್ಯವಾದ ಅರ್ಪಿಸಿದರು. ‘ನಾನುಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಇಸ್ರೇಲ್‍ನ ಭದ್ರತೆ ಮತ್ತು ರಾಷ್ಟ್ರದ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ಜೊತೆಗೆ ಕೈಜೋಡಿಸಿದ್ದಕ್ಕೆ ಎಲ್ಲಾ ನಾಗರಿಕರ ಪರವಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಸ್ರೇಲ್‌ಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ನಾನು ವಿಶ್ವ ನಾಯಕರಿಗೆ ಧನ್ಯವಾದ ಹೇಳುತ್ತೇನೆ’ ಅಂತಾ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...