: ಪ್ರಪಂಚದ ಯಾವ ದೇಶವನ್ನು ವಿಶ್ವದ ಸಕ್ಕರೆ ಬಟ್ಟಲು ಎಂದು ಕರೆಯುತ್ತಾರೆ..? : : ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1 -ಯಾವ ನಗರವನ್ನು ಏಷ್ಯಾದ ಲಾಸ್ ವೇಗಾಸ್ ಎಂದು ಕರೆಯಲಾಗುತ್ತದೆ? (ಎ) ಟೋಕಿಯೊ (ಬಿ) ನವದೆಹಲಿ (ಸಿ) ಮಕಾವು (ಡಿ) ಬ್ಯಾಂಕಾಕ್ ಉತ್ತರ - (ಸಿ) ಮಕಾವು,ಮಕಾವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. ಈ ನಗರವು ವಿಶ್ವದಲ್ಲೇ ದೊಡ್ಡ ಖ್ಯಾತಿಯನ್ನು ಹೊಂದಿದೆ. ಜನಪ್ರಿಯವಾಗಿ ಇದನ್ನು ಪ್ರಪಂಚದ ಜೂಜಿನ ರಾಜಧಾನಿ ಎಂದೂ ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಈ ನಗರವು ಏಷ್ಯಾದ ಲಾಸ್ ವೇಗಾಸ್ ಎಂಬ ಹೆಸರನ್ನು ಪಡೆದುಕೊಂಡಿದೆ. ಪ್ರಶ್ನೆ 2 -ದೆಹಲಿ ಸುಲ್ತಾನರ ಕೊನೆಯ ರಾಜ ಯಾರು? (ಎ) ಖಿಜರ್ ಖಾನ್ (ಬಿ) ಇಬ್ರಾಹಿಂ ಲೋದಿ (ಸಿ) ನಾಸಿರುದ್ದೀನ್ ಮಹಮೂದ್ ಶಾ (ಡಿ) ಜಹೀರುದ್ದೀನ್ ಬಾಬರ್ ಉತ್ತರ - (ಬಿ) ಇಬ್ರಾಹಿಂ ಲೋದಿ,ದೆಹಲಿ ಸುಲ್ತಾನರ ಕೊನೆಯ ರಾಜ ಇಬ್ರಾಹಿಂ ಲೋದಿ. ಇವರು ಕ್ರಿ.ಶ.1517-1526 ರವರೆಗೆ ಆಳ್ವಿಕೆ ನಡೆಸಿದರು. ಇದನ್ನೂ ಓದಿ: ಪ್ರಶ್ನೆ 3 -ಭಾರತೀಯ ರೈಲ್ವೆಯ ಲೋಗೋದಲ್ಲಿ ಎಷ್ಟು ನಕ್ಷತ್ರಗಳಿವೆ? (ಎ) 17 (ಬಿ) 15 (ಸಿ) 9 (ಡಿ) 24 ಉತ್ತರ - (ಎ) 17 ನಕ್ಷತ್ರಗಳು, ಭಾರತೀಯ ರೈಲ್ವೆಯ ಲೋಗೋದಲ್ಲಿ ಒಟ್ಟು 17 ನಕ್ಷತ್ರಗಳಿವೆ. ವಾಸ್ತವವಾಗಿ ಈ 17 ನಕ್ಷತ್ರಗಳು ದೇಶದಾದ್ಯಂತ ಇರುವ ಭಾರತೀಯ ರೈಲ್ವೆಯ 17 ವಲಯಗಳ ಬಗ್ಗೆ ತಿಳಿಸುತ್ತವೆ. ಪ್ರಶ್ನೆ 4 -ಯಾವ ದೇಶವನ್ನು "ವಿಶ್ವದ ಸಕ್ಕರೆ ಬಟ್ಟಲು" ಎಂದು ಕರೆಯಲಾಗುತ್ತದೆ? (ಎ) ದಕ್ಷಿಣ ಆಫ್ರಿಕಾ (ಬಿ) ಕ್ಯೂಬಾ (ಸಿ) ಘಾನಾ (ಡಿ) ಇಟಲಿ ಉತ್ತರ - (ಬಿ) ಕ್ಯೂಬಾ, ಕ್ಯೂಬಾವನ್ನು "ವಿಶ್ವದ ಸಕ್ಕರೆ ಬಟ್ಟಲು" ಎಂದು ಕರೆಯಲಾಗುತ್ತದೆ. ಏಕೆಂದರೆ 1960ರವರೆಗೆ ಕ್ಯೂಬಾ ವಿಶ್ವದಲ್ಲೇ ಅತಿಹೆಚ್ಚು ಸಕ್ಕರೆ ರಫ್ತು ಮಾಡುವ ದೇಶವಾಗಿತ್ತು. ಪ್ರಶ್ನೆ 5 - 1856ರಲ್ಲಿ ಪುನರ್ವಿವಾಹ ಕಾಯಿದೆಯ ನಿಬಂಧನೆಗಾಗಿ ಯಾರು ಕ್ರೆಡಿಟ್ ಪಡೆಯುತ್ತಾರೆ? (ಎ) ರಾಜಾ ರಾಮ್ ಮೋಹನ್ ರಾಯ್ (ಬಿ) ಈಶ್ವರ ಚಂದ್ರ ವಿದ್ಯಾಸಾಗರ್ (ಸಿ) ಲಾರ್ಡ್ ಡಾಲ್ಹೌಸಿ (ಡಿ) ಮದನ್ ಮೋಹನ್ ಮಾಳವೀಯ ಉತ್ತರ - (ಸಿ) ಲಾರ್ಡ್ ಡಾಲ್ಹೌಸಿ,ಯರ ಪುನರ್ವಿವಾಹ ಕಾಯಿದೆ 1856ರ ಕ್ರೆಡಿಟ್ ಲಾರ್ಡ್ ಡಾಲ್ಹೌಸಿಗೆ ಸಲ್ಲುತ್ತದೆ. ಈ ಕಾಯಿದೆ ಜಾರಿಗೆ ಬಂದ ನಂತರ ಮೊದಲ ಮದುವೆ ಉತ್ತರ ಕಲ್ಕತ್ತಾದಲ್ಲಿ 7 ಡಿಸೆಂಬರ್ 1856ರಂದು ನಡೆಯಿತು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...