ಕೆನಡಾ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ ! ವಿಸಾ ಸರ್ವಿಸ್ ಸಸ್ಪೆಂಡ್ :ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. :ಭಾರತ ಕೆಂಡಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಭಾರತ ವೀಸಾಗಳನ್ನು ಅಮಾನತುಗೊಳಿಸಿರುವುದು ಇದೇ ಮೊದಲು. ಮಾಧ್ಯಮ ವರದಿಗಳ ಪ್ರಕಾರ,ಕುರಿತು ಯಾವುದೇ ಔಪಚಾರಿಕ ಪ್ರಕಟಣೆಯನ್ನು ಮಾಡಲಾಗಿಲ್ಲ. ಆದರೆ ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. 'ಭಾರತೀಯ ಮಿಷನ್ ನ ಪ್ರಮುಖ ಮಾಹಿತಿ.. 21ನೇ ಸೆಪ್ಟೆಂಬರ್ 2023 ರಿಂದ [ಗುರುವಾರ] ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಸಂದೇಶವನ್ನು ನೀಡಲಾಗಿದೆ. ಆದರೂ ಸುದ್ದಿ ಸಂಸ್ಥೆ ಪ್ರಕಾರ, ಈ ಸೂಚನೆಯನ್ನು ಸ್ವಲ್ಪ ಸಮಯದ ನಂತರ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಇದನ್ನೂ ಓದಿ : ಇದಕ್ಕೂ ಮುನ್ನ ಕೆನಡಾದಲ್ಲಿ ಹೆಚ್ಚುತ್ತಿರುವಮತ್ತು ರಾಜಕೀಯ ಬೆಂಬಲಿತ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ ಭಾರತವು ತನ್ನ ದೇಶದ ಜನರಿಗೆ 'ತೀವ್ರ ಜಾಗರೂಕತೆಯಿಂದ ಪ್ರಯಾಣಿಸುವಂತೆ ಪ್ರಯಾಣ ಸಲಹೆಯನ್ನು ಬುಧವಾರ ನೀಡಿದೆ. ಕೆನಡಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ಮತ್ತು ಜಾಗರೂಕರಾಗಿರುವಂತೆ ಸಲಹೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೇಳಿಕೊಂಡಿದೆ. 'ಇತ್ತೀಚೆಗೆ, ಬರುತ್ತಿರುವ ಬೆದರಿಕೆಗಳು ನಿರ್ದಿಷ್ಟವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಆದ್ದರಿಂದ, ಕೆನಡಾದಲ್ಲಿ ಇಂತಹ ಘಟನೆಗಳು ಕಂಡುಬಂದಿರುವ ಪ್ರದೇಶಗಳಿಗೆ ಮತ್ತು ಸಂಭವನೀಯ ಸ್ಥಳಗಳಿಗೆ ಪ್ರಯಾಣಿಸದಂತೆ ಭಾರತೀಯ ನಾಗರಿಕರಿಗೆ ಸಲಹೆ ನೀಡಲಾಗುತ್ತದೆ. ಇದನ್ನೂ ಓದಿ : ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ 'ಸಂಭವನೀಯ' ಭಾಗಿತ್ವದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದೆ. ಕೆನಡಾ ಈ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಯನ್ನು ಹೊರಹಾಕಿದ್ದಕ್ಕೆ ಪ್ರತೀಕಾರವಾಗಿ, ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಲಾಯಿತು. ಕೆನಡಾದಲ್ಲಿ ಖಾಲಿಸ್ತಾನಿ ಪರ ಹೆಚ್ಚುತ್ತಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರತ-ಕೆನಡಾ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...