ಸೆಪ್ಟೆಂಬರ್ 3 ಅನ್ನು ʼಸನಾತನ ಧರ್ಮ ದಿನʼವೆಂದು ಘೋಷಣೆ..! : ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಲಾಗಿದೆ. ಯುಸ್‌ನ ಲೂಯಿಸ್‌ವಿಲ್ಲೆಯಲ್ಲಿ ನಡೆದ ಮಹಾ ಕುಂಭ ಅಭಿಷೇಕ ಸಮಾರಂಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. :ತಮಿಳುನಾಡು ಸಚಿವ, ಸಿಎಂ ಎಂ.ಕೆ. ಸ್ಟಾಲಿನ್‌ ಪುತ್ರ, ನಟ ಉದಯನಿಧಿ ಸ್ಟಾಲಿನ್‌ ಹೇಳಿಕೆ ರಾಷ್ಟ್ರಾದ್ಯಂತ ಕೊಲಾಹಲ ಸೃಷ್ಟಿಸಿದೆ. ಬಿಜೆಪಿ ಸೇರಿದಂತೆ ಕೆಲವು ಹಿಂದೂ ಪರ ಸಂಘಟನೆಗಳು ಉದಯನಿಧಿ ವಿರುದ್ಧ ವಾಕ್ಪ್ರಹಾರ ನಡೆಸಿವೆ. ಇದರ ಬೆನ್ನಲ್ಲೆ, ಯುನೈಟೆಡ್ ಸ್ಟೇಟ್ಸ್‌ನ ಒಂದು ನಗರವು ಸೆಪ್ಟೆಂಬರ್ 3 ಅನ್ನು ಸನಾತನ ಧರ್ಮ ದಿನವೆಂದು ಘೋಷಿಸಿದೆ. ಹೌದು.. ಯುನೈಟೆಡ್ ಸ್ಟೇಟ್ಸ್ನ ಕೆಂಟುಕಿಯ ಲೂಯಿಸ್ವಿಲ್ಲೆ ಮೇಯರ್ ಅವರು ನಗರದಲ್ಲಿ ಸೆಪ್ಟೆಂಬರ್ 3 ಅನ್ನುವೆಂದು ಘೋಷಿಸಿದ್ದಾರೆ. ಲೂಯಿಸ್‌ವಿಲ್ಲೆಯಲ್ಲಿರುವ ಹಿಂದೂ ದೇವಾಲಯದ ಕೆಂಟುಕಿಯಲ್ಲಿ ಮಹಾ ಕುಂಭ ಅಭಿಷೇಕ ಆಚರಣೆಯ ಸಂದರ್ಭದಲ್ಲಿ ಮೇಯರ್ ಕ್ರೇಗ್ ಗ್ರೀನ್‌ಬರ್ಗ್ ಪರವಾಗಿ ಉಪಮೇಯರ್ ಬಾರ್ಬರಾ ಸೆಕ್ಸ್‌ಟನ್ ಸ್ಮಿತ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. - - - ' 3 2023 ! ! — (@) ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಮುಖಂಡರಾದ ಚಿದಾನಂದ ಸರಸ್ವತಿ, ಪರಮಾರ್ಥ ನಿಕೇತನದ ಅಧ್ಯಕ್ಷ ಋಷಿಕೇಶ್, ಶ್ರೀ ಶ್ರೀ ರವಿಶಂಕರ್, ಮತ್ತು ಭಗವತಿ ಸರಸ್ವತಿ, ಲೆಫ್ಟಿನೆಂಟ್ ಗವರ್ನರ್ ಜಾಕ್ವೆಲಿನ್ ಕೋಲ್ಮನ್, ಉಪಮುಖ್ಯಸ್ಥರಾದ ಕೇಶಾ ಡೋರ್ಸೆ ಮತ್ತು ಹಲವಾರು ಆಧ್ಯಾತ್ಮಿಕ ಮುಖಂಡರು ಮತ್ತು ಗಣ್ಯರು ಭಾಗವಹಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...