: 25 ವರ್ಷ ಪೂರೈಸಿದ ಗ್ಲೋಬಲ್‌ ಸರ್ಚ್‌ ಇಂಜಿನ್ 25th : ಇಂದಿಗೆ 25 ವರ್ಷಗಳ ಸಂಭ್ರಮಾಚರಣೆಯಲ್ಲಿದ್ದು, ಗ್ಯಾರೇಜ್‌ನಿಂದ ಹಿಡಿದು ದೈತ್ಯರೂಪದ ಜಾಗತಿಕ ಟೈಮಲೈನ್‌ ಆಗಿ ರೂಪಾಂತರಗೊಂಡ ಗೂಗಲ್‌ನ ಸಾಧನೆಯ ಮಾಹಿತಿ ಇಲ್ಲಿದೆ. :ಸೆಪ್ಟೆಂಬರ್‌ 4, 1998 ರಲ್ಲಿ ಅಮೇರಿಕದ ಕಂಪ್ಯೂಟರ್ ವಿಜ್ಞಾನಿಗಳಾದ ಲ್ಯಾರಿ ಪೇಜ್‌ ಮತ್ತು ಸೆರ್ಗೆ ಬ್ರಿನ್‌ ಪ್ರಾರಂಭಿಸಿದ ಗೂಗಲ್‌, ದಶಕಗಳಲ್ಲಿ ಗಮರ್ನಾಹವಾಗಿ ರೂಪಾಂತರಗೊಂಡಿದ್ದು, ಆಧುನಿಕ ಪ್ರಪಂಚದ ಒಂದು ಭಾಗವಾಗಿ ಹೊರಹೊಮ್ಮಿದೆ. ಕ್ಯಾಲಿಪೋರ್ನಿಯಾದ ಸ್ಟ್ಯಾನ್‌ಪೋರ್ಡ್‌ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್‌ ಇಬ್ಬರು ಸೇರಿ ಜನರಿಗೆ ಹೇಗೆ ಮಾಹಿತಿಯನ್ನು ದೊರಕಿಸಿಕೊಡಬಹುದು ಎಂಬ ನಿಟ್ಟಿನಲ್ಲಿ ಕ್ರಾಂತಿಕಾರಿ ಸರ್ಚ್‌ಎಂಜಿನ್‌ನ್ನು ಪ್ರಾರಂಭಿಸಿದರು. ಇದನ್ನು ಓದಿ- ಜನರಿಗೆ ಸರಿಯಾದ ರೀತಿಯಲ್ಲಿ ನಿರ್ದಿಷ್ಟವಾಗಿಯನ್ನು ಕೊಡುವ ಉದ್ದೇಶದೊಂದಿಗೆ ಪ್ರಾರಂಭವಾದ ಗೂಗಲ್‌ ಕಾಲಕ್ರಮೇಣವಾಗಿ ಹೊಸ ಹೊಸ ಬದಲಾವಣೆಗಳೊಂದಿಗೆ ವೇಗವಾಗಿ ವಿಸ್ತರಿಸುತ್ತಾ, ಇಂದು ಜನರ ದೈನಂದಿನ ಜೀವನದಲ್ಲಿ ಮಾಹಿತಿ, ಉತ್ಪನ್ನಗಳು ಇನ್ನಿತರ ಸೇವೆಗಳನ್ನು ಒದಗಿಸಿಕೊಡುತ್ತದೆ. ಗೂಗಲ್‌ ಭಾಗವಾಗಿ , , , , , , , , ಹೀಗೆ ಇನ್ನಿತರ ಅಪ್ಲೀಕೇಶನ್‌ಗಳ ಮೂಲಕ ಜನರಿಗೆ ಸೇವೆಗಳನ್ನು ನೀಡುತ್ತದೆ. ಅಲ್ಲದೇ 2015ರಲ್ಲಿ ಅಲ್ಪಾಬೆಟ್‌ ಸಂಸ್ಥೆಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಗೂಗಲ್‌ ಜನರೇಟಿವ್‌ ಜಗತ್ತಿನಲ್ಲಿ ಮುಳುಗಿದ್ದು, ಗೂಗಲ್‌‌ ಗೂಗಲ್‌ ಬಾರ್ಡ್ 9 ಭಾರತೀಯ ಭಾಷೆಗಳನ್ನು ಒಳಗೊಂಡಂತೆ 40 ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. 230ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಗೆ ವಿಸ್ತರಿಸಿದೆ . ಗೂಗಲ್‌ ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎರಡು ಹೆಚ್ಚುವರಿ ಡೇಟಾ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿದೆ ಮತ್ತು ಡೇಟಾ ಸಂಸ್ಕರಣೆ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಹೊಸ ವೈಶಿಷ್ಟ್ಯಗಳೊಂದಿಗೆ ಇದು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಗೂಗಲ್‌ ನಿರಂತರವಾಗಿ ಶ್ರಮಿಸುತ್ತಿದೆ. ಗೂಗಲ್‌ 25ನೇ ವರ್ಷದ ಸಂಭ್ರಮದಲ್ಲಿದ್ದು, ಇದು ಜನರ ಜೀವನದ ಅನಿವಾರ್ಯ ಭಾಗವಾಗಿದೆ. ಮತ್ತು ಇದು ಇಮೇಲ್‌ ಸಂವಹನ, ಗೂಗಲ್‌ ಮ್ಯಾಪ್‌, ಮೊಬೈಲ್‌ ಆಪರೇಟಿಂಗ್ ಸಿಸ್ಟಂಗಳಿಗೆ ಸಹಕಾರಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...