ಲಿಪ್‌ಕಿಸ್‌ ಮಾಡೋಕು ಮುಂಚೆ ಎಚ್ಚರ..! ಇಲ್ಲೊಬ್ಬ ಯುವಕ ಕಿವುಡನಾಗಿದ್ದಾನೆ.. ಹೇಗೆ ಗೊತ್ತೆ..? ಪ್ರಪಂಚದಾದ್ಯಂತ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದಿಷ್ಟು ಸಂಗತಿಗಳು ಜನರಿಗೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಚೀನಾದಲ್ಲಿ ನಡೆದ ಘಟನೆಯೊಂದರು ಪ್ರೇಮಿಗಳಿಗೆ ಶಾಕ್‌ ನೀಡಿದೆ. :ಚೀನಾದ ಯುವಕನೊಬ್ಬ ತನ್ನ ಗೆಳತಿಗೆ 10 ನಿಮಿಷಗಳ ಕಾಲ ನಿರಂತರವಾಗಿ ಚುಂಬಿಸಿದ ಪರಿಣಾಮ ಕಿವಿ ಕಳೆದುಕೊಂಡಿದ್ದಾನೆ. ಮುತ್ತು ಕೊಟ್ಟ ನಂತರ ಕಿವಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಾದಾಗ ಈ ಘಟನೆ ವರದಿಯಾಗಿದೆ. ಇದರಿಂದ ಯುವಕ ಆಘಾತಕ್ಕೊಳಗಾಗಿದ್ದಾನೆ. ಹೌದು.. ಆಗಸ್ಟ್ 22 ರಂದು ಈ ಘಟನೆ ನಡೆದಿದೆ. ಜೋಡಿ ಚುಂಬಿಸುತ್ತಿದ್ದಾಗ, ವ್ಯಕ್ತಿಗೆ ಇದ್ದಕ್ಕಿದ್ದಂತೆಕಾಣಿಸಿಕೊಂಡಿದೆ, ಇದರಿಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತನನ್ನು ಪರೀಕ್ಷಿಸಿದ ವೈದ್ಯರು ಕಿವಿಯಲ್ಲಿ ರಂಧ್ರವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ ಅಂತ ಹೇಳಿದ್ದಾರಂತೆ. ಇದನ್ನೂ ಓದಿ: ಭಾವೋದ್ರಿಕ್ತ ಚುಂಬನವು ಕಿವಿಯೊಳಗೆ ಗಾಳಿಯ ಒತ್ತಡವನ್ನು ಉಂಟುಮಾಡುತ್ತದೆ ಇದರಿಂದಾಗಿ ತಮಟೆಗಳಿಗೆ ಹಾನಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಪ್ರಕರಣದಲ್ಲಿಯೂ ಸಹ ಉತ್ಸಾಹಭರಿತ ಚುಂಬನ ಕಿವಿಯಲ್ಲಿನ ರಂಧ್ರಕ್ಕೆ ಕಾರಣವಾಗಿದೆ ಅಂತ ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. 2008 ರಲ್ಲಿ ದಕ್ಷಿಣ ಚೀನಾದ ಯುವತಿಯೊಬ್ಬಳು ತನ್ನ ಗೆಳೆಯನ ಮೇಲೆ ಭಾವೋದ್ರಿಕ್ತಳಾಗಿ ಚುಂಬಿಸಿದ ಸಮಯದಲ್ಲಿ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾಗಿ ವರದಿಯಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...