ದೇಶ ಕಂಡ ಅತ್ಯಂತ ಕ್ರೂರ ಬೇಬಿ ಸೀರಿಯಲ್ ಕಿಲ್ಲರ್ ಬಂಧನ..! ಇದೇಲ್ಲ ಮಾಡಿದ್ದು ದೆವ್ವ... 2015-2016ರ ಅವಧಿಯಲ್ಲಿ ಲೂಸಿಯ ಕ್ರೌರ್ಯಕ್ಕೆ 13 ಮಕ್ಕಳು ಬಲಿಯಾಗಿದ್ದರು. ಸಧ್ಯ ಬೇಬಿ ಸೀರಿಯಲ್‌ ಕಿಲ್ಲರ್‌ ಬಂಧನವಾಗಿದೆ. ಆದ್ರೆ ಆಕೆಯ ಮನೆಯಲ್ಲಿ ಸಿಕ್ಕಿರುವ ಬರಹಗಳು ಪೊಲೀಸರಿಗೆ ಶಾಕ್‌ ಮೂಡಿಸಿವೆ. ಲಂಡನ್ :ಶಿಶುಗಳನ್ನು ಕೊಂದ ನರ್ಸ್ ಬಂಧಿಸಲಾಗಿದೆ. ಲೂಸಿ ಲೆಟ್ಬಿ ಎಂಬ ನರ್ಸ್ 7 ಶಿಶುಗಳನ್ನು ಕೊಂದ ಮತ್ತು 6 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಯಿತು. ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಕೊಲೆ ಮತ್ತು ಕೊಲೆ ಯತ್ನ ನಡೆದಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಅಲ್ಲದೆ, ಲೂಸಿಯ ಮನೆಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಸಿಕ್ಕಿದೆ.ಬದುಕುವ ಅರ್ಹತೆ ನನಗಿಲ್ಲ, ಇದೆಲ್ಲ ಮಾಡಿದ ದೆವ್ವ ನಾನೇ' ಎಂಬ ಬರಹ ಲೂಸಿಯ ಮನೆಯಲ್ಲಿ ಕಂಡು ಬಂದಿದ್ದು, ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಇನ್ನು ಲೂಸಿ ಶಿಶುಗಳನ್ನು ಹತ್ಯೆಗೈದು ಸಾವು ಸಹಜ ಎಂದು ತೋರುವ ಪ್ರಯತ್ನಗಳನ್ನು ಮಾಡಿದ್ದಾಗಿ ತಿಳಿದು ಬಂದಿದೆ. 2015-2016ರ ಅವಧಿಯಲ್ಲಿ ಇಂತಹ 13 ಮಕ್ಕಳು ಲೂಸಿಯ ಕ್ರೌರ್ಯಕ್ಕೆ ಬಲಿಯಾಗಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ. ಸಿಎನ್‌ಎನ್‌ನ ವರದಿಯ ಪ್ರಕಾರ, ಲೂಸಿ ತನ್ನ ಸಹೋದರನಿಗೆ ಚುಚ್ಚುಮದ್ದು ನೀಡಿ ಕೊಲ್ಲಲು ಪ್ರಯತ್ನಿಸಿದಳಂತೆ. ಸಧ್ಯ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯವು ಲೂಸಿ ಕೊಂದ ಮತ್ತು ಕೊಲ್ಲಲು ಪ್ರಯತ್ನಿಸಿದ ಶಿಶುಗಳ ವಿವರಗಳನ್ನು ಸಾರ್ವಜನಿಕಗೊಳಿಸಂದೆ ಎಂದು ಆದೇಶಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...