: 11.81 ಇಂಚು ಉದ್ದದ ಗಡ್ಡ ಬಿಟ್ಟ ಮಹಿಳೆ..! : ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ()ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ. ನವದೆಹಲಿ: ಪ್ರಪಂಚದಲ್ಲಿ ಹಲವು ಜನರು ವಿಭಿನ್ನ ರೀತಿಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಉದ್ದದ ನಾಲಿಗೆ, ಉದ್ದದ ಉಗುರು, ಉದ್ದದ ಕೂದಲು ಹೀಗೆ ನಾನಾ ರೀತಿಯಲ್ಲಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ ಅಮೆರಿಕದ ಮಹಿಳೆಯೊಬ್ಬರು ತನ್ನ ಗಡ್ಡದ ಮೂಲಕ ಗಮನ ಸೆಳೆದಿದ್ದಾಳೆ. ಹೌದು,ದ ಮಿಚಿಗನ್‌ನ 38 ವರ್ಷದ ಎರಿನ್ ಹನಿಕಟ್ ಅತಿಉದ್ದದ ಗಡ್ಡ ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ. ವಿಶೇಷವೆಂದರೆ ಎರಿನ್ ಹನಿಕಟ್ ತನ್ನ 11.8-ಇಂಚಿನ (29.9 ) ಗಡ್ಡವನ್ನು ಸುಮಾರು 2 ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾದ ಕೂದಲು ಬೆಳವಣಿಗೆಗೆ ಕಾರಣವಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ()ಕಾಯಿಲೆಯಿಂದ ಎರಿನ್ ಹನಿಕಟ್ ಬಳಲುತ್ತಿದ್ದು, 11.8 ಇಂಚು ಉದ್ದದ ಗಡ್ಡವನ್ನು ಬೆಳೆಸುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾಳೆ. ಸ್ಥಿತಿಯು ಹಾರ್ಮೋನುಗಳ ಅಸಮತೋಲನ, ಅನಿಯಮಿತ ಮುಟ್ಟು, ತೂಕ ಹೆಚ್ಚಾಗುವಿಕೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ. . , ' - ! — (@) ಈ ಹಿಂದೆ ಅಮೆರಿಕದವರೇ ಆದ 75 ವರ್ಷದ ವಿವಾನ್ ವೀಲರ್ ಅವರ 10.04 ಇಂಚು ಗಡ್ಡದ ದಾಖಲೆಯನ್ನು ಎರಿನ್ ಮುರಿದಿದ್ದಾರೆ. ಬಾಲ್ಯದಿಂದಲೂ ಆನುವಂಶಿಕ ಸಮಸ್ಯೆ ಹೊಂದಿದ್ದ ಎರಿನ್‍ಗೆ 13ನೇ ವಯಸ್ಸಿನಿಂದ ಗಡ್ಡವು ಕ್ರಮೇಣ ಬೆಳೆಯಲು ಪ್ರಾರಂಭಿಸಿತು. ಮೊದ ಮೊದಲು ಗಡ್ಡದಿಂದ ಚಿಂತಿತಳಾಗಿದ್ದ ಎರಿನ್ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕ್ಷೌರ ಮಾಡಿಕೊಳ್ಳುತ್ತಿದ್ದಳಂತೆ. ಇದನ್ನೂ ಓದಿ: ಗಡ್ಡ ಬೆಳೆಯಲು ಪ್ರಾರಂಭಿಸಿದಂತೆ ಆಕೆ ಶೇವಿಂಗ್, ವ್ಯಾಕ್ಸಿಂಗ್ ಮತ್ತು ಹೆಚ್ಚುವರಿ ಕೂದಲನ್ನು ತೆಗೆದುಹಾಕುವ ಉತ್ಪನ್ನಗಳನ್ನು ಬಳಸಲಾರಂಭಿಸಿದಳು. ಸ್ವಲ್ಪ ಸಮಯದ ನಂತರ ಆಕೆ ರಕ್ತದೊತ್ತಡದಿಂದ ಭಾಗಶಃ ದೃಷ್ಟಿ ಕಳೆದುಕೊಂಡಿದ್ದರು. ಅಲ್ಲಿಂದ ಅವರು ಕೂದಲು ತೆಗೆಯುವುದನ್ನು ನಿಲ್ಲಿಸಿದರು. ನಂತರ ಬ್ಯಾಕ್ಟೀರಿಯಾದಿಂದ ಅವರು ಒಂದು ಕಾಲನ್ನು ಸಹ ಕಳೆದುಕೊಂಡರು. ಬಳಿಕ ಗಡ್ಡವನ್ನು ಬೆಳೆಸುವತ್ತ ಗಮನ ಹರಿಸಿದರು. ಹೀಗಾಗಿ ಅವರು ವಿಶ್ವ ದಾಖಲೆ ನಿರ್ಮಿಸಲು ಸಾಧ್ಯವಾಯಿತು. ಇದೀಗ ತನ್ನ ಗಡ್ಡದ ಬಗ್ಗೆಹೆಮ್ಮೆ ವ್ಯಕ್ತಪಡಿಸಿದ್ದು, ನನಗೆ ಇದರಿಂದ ಖುಷಿಯಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...