: 41 ವರ್ಷದ ಮಹಿಳೆಯನ್ನು ವರಿಸಿದ 16 ವರ್ಷದ ಬಾಲಕ! : ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ನವದೆಹಲಿ:ಪ್ರೀತಿಗೆ ವಯಸ್ಸಿನ ಅಂತರ, ಜಾತಿ-ಧರ್ಮ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿ ಕುರುಡು ಅಂತಾರಲ್ಲ ಹಾಗೆ. ಅನೇಕರು ಯಾವುದನ್ನೂ ಲೆಕ್ಕಿಸದೆ ತಮಗೆ ಇಷ್ಟಬಂದವರನ್ನು ಮದುವೆಯಾಗುತ್ತಾರೆ. ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ, ಅಂತರ್ಧಮಿಯ ವಿವಾಹವಾಗುತ್ತಾರೆ. ಪ್ರಪಂಚದಲ್ಲಿ ಚಿತ್ರ-ವಿಚಿತ್ರವಾಗಿ ಮದುವೆಗಳಾದ ನಿದರ್ಶನಗಳಿವೆ. ಅದೇ ರೀತಿಯ ವಿಚಿತ್ರ ಮದುವೆಯ ಘಟನೆದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕೇವಲ 16 ವರ್ಷದ ಬಾಲಕನೊಬ್ಬ ಶಾಲೆಗೆ ಕೊಂಚಕಾಲ ಗುಡ್‍ಬೈ ಹೇಳಿ 41 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಜುಲೈ 30ರಂದು ಇವರು ಇಂಡೋನೇಷಿಯಾದ ಪಶ್ಚಿಮ ಕಲಿಮಂಟನ್ ಪ್ರಾಂತ್ಯದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ. ಇದೀಗ ಈ ಜೋಡಿ ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಿರುವ ಈ ದಂಪತಿ ಮದುವೆಯ ಉಂಗುರವನ್ನು ಧರಿಸಿರುವುದನ್ನು ನೀವು ಕಾಣಬಹುದಾಗಿದೆ. ಈ ಜೋಡಿಯ ಚಿತ್ರಗಳನ್ನು ನೋಡಿದ ಅನೇಕರು ಇವರಿಬ್ಬರು ತಾಯಿ ಮತ್ತು ಮಗನಂತೆ ಕಾಣುತ್ತಾರೆಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರುಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...