: ಕ್ಯಾನ್ಸರ್‌ನಿಂದ ಬಾಲ್ಯದ ಗೆಳಯನೊಂದಿಗೆ ಮದುವೆಯಾದ 10 ವರ್ಷದ ಬಾಲಕಿ! ’ : ಮದುವೆಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ತಾನು ಸಾಯುವ ಕೆಲವೇ ದಿನಗಳ ಮೊದಲು ಬಾಲ್ಯದ ಗೆಳೆಯನೊಂದಿಗೆ ಆಕೆ ಮದುವೆಯಾಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ನವದೆಹಲಿ:ಆಕೆಗೆ ಇನ್ನೂ ಪುಟ್ಟ ವಯಸ್ಸು.. ಶಾಲೆಗೆ ಹೋಗಿ ಆಟ-ಪಾಠವೆಂದು ಖುಷಿಯಿಂದ ಇರಬೇಕಾದ ವಯಸ್ಸು. ಆದರೆ ಆಕೆಯ ಖುಷಿಯನ್ನು ಮಾರಕ ಕ್ಯಾನ್ಸರ್ ಕಾಯಿಲೆ ಕಸಿದಕೊಂಡಿತ್ತು. ಕ್ಯಾನ್ಸರ್ ಕಾಯಿಲೆಯಿಂದ ಸಾವು ಹತ್ತಿರವಾಗುತ್ತಿದ್ದರೂ ಆಕೆ ತನ್ನ ಕನಸನ್ನು ನನಸು ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದಳು. ಹೌದು,ಯಾಗುವ ಕನಸು ಕಂಡಿದ್ದ ಅಮೆರಿಕದ 10 ವರ್ಷದ ಬಾಲಕಿ ಲ್ಯುಕೇಮಿಯಾದಿಂದ ಬಳಲುತ್ತಿದ್ದಳು. ತಾನು ಸಾಯುವ ಕೆಲವೇ ದಿನಗಳ ಮೊದಲು ಬಾಲ್ಯದ ಗೆಳೆಯನೊಂದಿಗೆ ಆಕೆ ಮದುವೆಯಾಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ವರದಿಗಳ ಪ್ರಕಾರ, ಎಮ್ಮಾ ಎಡ್ವರ್ಡ್ಸ್ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಬಾಲಕಿ. ಈಕೆ ತಾನು ಸಾಯುವ ಕೇವಲ 12 ದಿನಗಳ ಮೊದಲು ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ‘ಡಿಜೆ’ ವಿಲಿಯಮ್ಸ್‌ ಎಂಬಾತನೊಂದಿಗೆ ವಿವಾಹವಾಗಿದ್ದಾಳೆ. ಇದನ್ನೂ ಓದಿ: ಕಳೆದ ವರ್ಷದ ಏಪ್ರಿಲ್‌ನಲ್ಲಿ ಎಮ್ಮಾಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ()ಕಾಯಿಲೆ ಇರುವುದಾಗಿ ವೈದ್ಯರು ತಿಳಿಸಿದ್ದರು. ಅಂದಿನಿಂದ ಸಾವು-ಬದುಕಿನ ನಡುವೆ ಎಮ್ಮಾ ಹೋರಾಡ ನಡೆಸುತ್ತಿದ್ದಳು. ಆಕೆಯ ಪೋಷಕರಾದ ಅಲೀನಾ (39) ಮತ್ತು ಆರನ್ ಎಡ್ವರ್ಡ್ಸ್ (41) ತಮ್ಮ ಮಗಳು ಈ ಮಾರಕ ರೋಗವನ್ನು ಜಯಿಸುತ್ತಾಳೆ ಎಂಬ ಭರವಸೆ ಇಟ್ಟುಕೊಂಡು ಧೈರ್ಯ ತುಂಬಿದ್ದರು. ಎಮ್ಮಾಗೆ ಉನ್ನತಮಟ್ಟದ ಚಿಕಿತ್ಸೆ ನೀಡಿ ಮಗಳನ್ನು ಬದುಕಿಸಲು ಪೋಷಕರು ತುಂಬಾ ಪ್ರಯತ್ನಪಟ್ಟರು. ಆದರೆ ಜೂನ್ ತಿಂಗಳಿನಲ್ಲಿ ಎಮ್ಮಾಗೆ ಆವರಿಸಿರುವ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲವೆಂದು ಹೇಳಿದ ವೈದ್ಯರು, ಆಕೆ ಇನ್ನೂ ಕೆಲವೇ ದಿನಗಳ ಕಾಲ ಬದುಕುತ್ತಾಳೆ ಎಂದಿದ್ದರು. ಇದನ್ನೂ ಓದಿ: ವೈದ್ಯರ ಹೇಳಿಕೆಯಿಂದ ಎಮ್ಮಾಳ ತಂದೆ-ತಾಯಿಗೆ ತೀವ್ರ ಆಘಾತವಾಗಿತ್ತು. ಆದರೆ ಸಾಯುವ ಮೊದಲು ಎಮ್ಮಾಗೆ ಮದುವೆಯಾಗಬೇಕೆಂಬ ಆಸೆಯಿತ್ತು. ಅವಳ ಈ ಆಸೆಯನ್ನು ನೆರವೇರಿಸಲು ಪೋಷಕರು ಸಹ ನಿರ್ಧರಿಸಿದ್ದರು. ಅದರಂತೆ ಎಮ್ಮಾ ಪ್ರೀತಿಸುತ್ತಿದ್ದ ತನ್ನ ಗೆಳೆಯ ಪ್ರೀತಿಯಿಂದ ಎಂದು ಕರೆಯಲ್ಪಡುವ ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ ವಿಲಿಯಮ್ಸ್ ಜೂನಿಯರ್ ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಳು. ಇದಕ್ಕೆ ಪೋಷಕರು ಸಹ ಒಪ್ಪಿಕೊಂಡಿದ್ದರು. ಸುಮಾರು 100 ಮಂದಿ ಅತಿಥಿಗಳ ಸಮ್ಮುಖದಲ್ಲಿ ಉದ್ಯಾನವನದಲ್ಲಿ ಎಮ್ಮಾ ಮತ್ತು ಮದುವೆ ಸಮಾರಂಭ ನೆರವೇರಿತು. ಎಮ್ಮಾಳನ್ನು ಖುಷಿಯಿಂದಲೇ ಮದುವೆಯಾದ. ಈ ವೇಳೆ ಇಬ್ಬರು ಮಿರಿ ಮಿರಿ ಮಿಂಚುವ ಮದುವೆ ಧಿರಿಸಿನಲ್ಲಿ ಕಂಗೊಳಿಸಿದರು. ದುಃಖದ ಸುದ್ದಿಯ ನಡುವೆಯೂ ಮದುವೆಗೆ ಬಂದಿದ್ದ ಗಣ್ಯರು ಇಬ್ಬರಿಗೂ ಶುಭ ಹಾರೈಸಿದರು. ತನ್ನನನಸು ಮಾಡಿಕೊಂಡ ಎಮ್ಮಾ ಜುಲೈ 11ರಂದು ಕೊನೆಯುಸಿರೆಳೆದಳು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...