ಕೊರೊನಾದಿಂದ ಬಳಲಿ ಬೆಂಂಡಾಗಿದ್ದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿ..! ಸುಮಾರು ಎರಡು ವರ್ಷಗಳ ಕಾಲ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ನವದೆಹಲಿ:ಸುಮಾರು ಎರಡು ವರ್ಷಗಳ ಕಾಲ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಹೌದು, ಈಗ ಬಂದಿರುವ ಹೊಸ ಮಾಹಿತಿ ಪ್ರಕಾರ ಹೊಸ ಕೊರೊನಾ ರೂಪಾಂತರಿಯೊಂದು ಬ್ರಿಟನ್ ನಲ್ಲಿ ಪತ್ತೆಯಾಗಿದೆ.ಈಗ ಬಂದಿರುವ ಹೊಸ ರೂಪಾಂತರಿಗೆ ಎರಿಸ್‌ ಎಂದು ಹೆಸರಿಸಲಾಗಿದ್ದು ,ಇದು ಹೊಸ ರೂಪಾಂತರಿಯಾಗಿರುವ ಇಜಿ 5.1 ರ ಭಾಗವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಸೋಂಕು ಪ್ರಕರಣ ಹೆಚ್ಚಿಸಿದ್ದ ಒಮಿಕ್ರಾನ್‌ ರೂಪಾಂತರಿಯ ಉಪತಳಿಯಾಗಿರುವ ಈ ಎರಿಸ್‌, ಅಷ್ಟೇ ಪರಿಣಾಮಕಾರಿಯಾಗಿ ರಾಷ್ಟ್ರಾದ್ಯಂತ ಸೋಂಕು ಹೆಚ್ಚಲು ಕಾರಣವಾಗುತ್ತಿದೆ ಎಂದು ಬ್ರಿಟನ್‌ ವೈದ್ಯಕೀಯ ತಜ್ಞರ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಾರದಿಂದ ವಾರಕ್ಕೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ.14.6ರಷ್ಟು ಪ್ರಕರಣಗಳು ಎರಿಸ್‌ ರೂಪಾಂತರಿಯದ್ದೇ ಆಗಿವೆ ಎನ್ನಲಾಗಿದೆ.ಇದು ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವ 2ನೇ ರೂಪಾಂತರಿಯೂ ಆಗಿದೆ ಎಂದು ದೃಢಪಟ್ಟಿದೆ. ಎರಿಸ್‌ ದೃಢಪಟ್ಟವರಲ್ಲಿ ಹೆಚ್ಚಿನವರಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ಎದುರಾಗಿದೆ.ವಯಸ್ಸಾದವರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...