: 20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆ ಸಾವು! : ವೈದ್ಯರ ಹೇಳಿಕೆಯ ಪ್ರಕಾರ ಆಶ್ಲೇ ಸಮ್ಮರ್ಸ್ ಮೆದುಳಿನ ಊತ ಹೊಂದಿದ್ದಳು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಕುಡಿದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. ನವದೆಹಲಿ:20 ನಿಮಿಷದಲ್ಲಿ 2 ಲೀಟರ್ ನೀರು ಕುಡಿದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಅಮೆರಿದಲ್ಲಿ ನಡೆದಿದೆ. 35 ವರ್ಷದ ಆಶ್ಲೇ ಸಮ್ಮರ್ಸ್ ಸಾವನ್ನಪ್ಪಿರುವ ಮಹಿಳೆಯಾಗಿದ್ದಾಳೆ. ಕಳೆದ ತಿಂಗಳು20 ನಿಮಿಷಗಳಲ್ಲಿ ಸುಮಾರು 2 ಲೀಟರ್‍ನಷ್ಟು ನೀರು ಕುಡಿದಿದ್ದರು. ಕೂಡಲೇ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಜುಲೈ 4ನೇ ವಾರಾಂತ್ಯದಲ್ಲಿ ಆಶ್ಲೇ ಸಮ್ಮರ್ಸ್ ತನ್ನ ಕುಟುಂಬದೊಂದಿಗೆ ಗೆಟ್‌ಅವೇನಲ್ಲಿದ್ದರು. ಇದನ್ನೂ ಓದಿ: ತನ್ನ ಪತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಇಂಡಿಯಾನಾದಲ್ಲಿರುವ ಲೇಕ್ ಫ್ರೀಮನ್ ಸರೋವರ ವೀಕ್ಷಿಸಿದ ಬಳಿಕ ಆಶ್ಲೇ ಸಮ್ಮರ್ಸ್ ತುಂಬಾ ನಿರ್ಜಲೀಕರಣ()ಗೊಂಡಿದ್ದರು. ತುಂಬಾ ಬಾಯಾರಿಕೆಯಿಂದ ಬಳಲುತ್ತಿದ್ದ ಕಾರಣ ಆಕೆ 20 ನಿಮಿಷಗಳಲ್ಲಿ 4 ಬಾಟಲಿ ಅಂದ್ರೆ 2 ಲೀಟರ್‍ನಷ್ಟು ನೀರು ಕುಡಿದಳು ಎಂದು ಹೇಳಲಾಗಿದೆ. ಇಡೀ ದಿನ ಕುಡಿಯಬೇಕಾದ ನೀರನ್ನು ಆಶ್ಲೇ ಸಮ್ಮರ್ಸ್ 20 ನಿಮಿಷದಲ್ಲಿ ಕುಡಿದಿರುವುದೇ ಆಕೆಯ ಸಾವಿಗೆ ಕಾರಣವೆಂದು ಹೇಳಲಾಗಿದೆ. ನೀರು ಕುಡಿದ ನಂತರ ಆಕೆ ತಲೆನೋವಿನಿಂದ ಬಳಲುತ್ತಿದ್ದರು. ಮನೆಗೆ ಬಂದ ಬಳಿಕ ಆಶ್ಲೇ ಸಮ್ಮರ್ಸ್ ಪ್ರಜ್ಞೆ ತಪ್ಪಿ ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆಗೆ ಮತ್ತೆ ಪ್ರಜ್ಞೆ ಬರಲಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯರ ಹೇಳಿಕೆಯ ಪ್ರಕಾರ ಆಶ್ಲೇ ಸಮ್ಮರ್ಸ್ ಮೆದುಳಿನ ಊತ ಹೊಂದಿದ್ದಳು. ಕಡಿಮೆ ಸಮಯದಲ್ಲಿ ಹೆಚ್ಚು ನೀರು ಕುಡಿದ ಕಾರಣ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ. ನೀರಿನ ವಿಷತ್ವವು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದರಿಂದ ಉಂಟಾಗುವ ಸ್ಥಿತಿಯಾಗಿದೆ. ಅತ್ಯಂತ ವಿಪರೀತ ಸಂದರ್ಭಗಳಲ್ಲಿ ಇದು ಜೀವಕ್ಕೆ ಮಾರಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.‌ ಸರಾಸರಿ ನೀರಿನ ಬಾಟಲಿಯು 16 ಔನ್ಸ್‌ಗಳಿರುತ್ತದೆ. ಆಶ್ಲೇ ಸಮ್ಮರ್ಸ್ 20 ನಿಮಿಷಗಳ ಅವಧಿಯಲ್ಲಿ 64 ಔನ್ಸ್‍ಗಳಷ್ಟು ಅಂದರೆ ಅರ್ಧ ಗ್ಯಾಲನ್ ನೀರು. ಇದನ್ನು ಇಡೀ ದಿನ ಕುಡಿಯಬೇಕು. ಆದರೆ ಏಕಾಏಕಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಯಾಣದ ನೀರು ಕುಡಿದ ಕಾರಣ ನೀರಿನ ವಿಷತ್ವ ಉಂಟಾಗಿ ಆಕೆ ಸಾವನ್ನಪ್ಪಿದ್ದಾಳೆಂದುತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...