: ಗಂಟಲು ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಅನ್ನನಾಳದಲ್ಲಿತ್ತು ಜೀವಂತ ಆಕ್ಟೋಪಸ್‌! : ಈ ವ್ಯಕ್ತಿಯು ಗಂಟಲು ನೋವಿನಿಂದ ನರಳಲು ಪ್ರಾರಂಭಿಸಿದಾಗ, ಅವನ ಕುಟುಂಬ ಸದಸ್ಯರ ಸಲಹೆಯ ಮೇರೆಗೆ ತಕ್ಷಣ ವೈದ್ಯರ ಬಳಿಗೆ ಹೋದನು. ಅಲ್ಲಿ ಅವನಿಗೆ ಮೊದಲು ಎಕ್ಸ್-ರೇ ಮಾಡಲಾಗಿತ್ತು. ಎಕ್ಸ್-ರೇಯಲ್ಲಿ ಹೊರಬಂದದ್ದು ಆಘಾತಕಾರಿ ವಿಚಾರ. ವೈದ್ಯರೂ ಕೂಡ ವರದಿ ನೋಡಿ ಬೆಚ್ಚಿಬಿದ್ದರು. :ಒಬ್ಬ ವ್ಯಕ್ತಿಯು ಗಂಟಲು ನೋವನ್ನು ತಡೆಯಲಾಗದೆ ಆಸ್ಪತ್ರೆಗೆ ತೆರಳಿದ್ದಾರೆ. ಆಹಾರವನ್ನು ತಿನ್ನುವಾಗ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿತು ಮತ್ತು ಆಹಾರವನ್ನು ನುಂಗಲು ಸಹ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ವೈದ್ಯರ ತಂಡ ಆ ವ್ಯಕ್ತಿಯ ಗಂಟಲಿನ ಎಕ್ಸ್ ರೇ ಮಾಡಿದ್ದಾರೆ. ಆತನ ಗಂಟಲಲ್ಲಿ ಆಕ್ಟೋಪಸ್ ಇರುವ ವಿಚಾರ ಬೆಳಕಿಗೆ ಬಂದಿದೆ. ಅರ್ಧಂಬರ್ಧ ಜೀವವಿರುವ ಆಕ್ಟೋಪಸ್‌ ಇವರ ಗಂಟಲಿನಲ್ಲಿತ್ತು.. ವರದಿಗಳ ಪ್ರಕಾರ, 55 ವರ್ಷದ ವ್ಯಕ್ತಿ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಆಕ್ಟೋಪಸ್ ಅನ್ನು ನುಂಗಿದ್ದಾರೆ. ಆಗ ಎಂಟು ಕಾಲಿನ ಆಕ್ಟೋಪಸ್ ಹೋಗಿ ಗಂಟಲಿಗೆ ಸಿಲುಕಿಕೊಂಡಿದೆ. ಇದು ಅವರಿಗೆ ತಿಳಿದಿರಲೇ ಇಲ್ಲ. ಅವರ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿದೆ. ವಾಂತಿಯಾಗಲು ಶುರುವಾಗಿದೆ. ದೇಹದಿಂದ ನೀರೆಲ್ಲ ಬತ್ತಿಹೋಗಿ ಆಹಾರ ಸೇವಿಸುವಾಗ ಮತ್ತು ನೀರು ಕುಡಿಯುವಾಗ ತೀವ್ರ ನೋವು ಶುರುವಾಗಿದೆ. ಆಗ ಅವರು ಆಸ್ಪತ್ರೆಗೆ ಬಂದಿದ್ದಾರೆ. ಇದನ್ನೂ ಓದಿ: ಸಿಂಗಾಪುರದ ಟ್ಯಾನ್ ಟೋಕ್ ಸೆಂಗ್ ಆಸ್ಪತ್ರೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಆ ವ್ಯಕ್ತಿಯನ್ನು ತಕ್ಷಣವೇ ಎಕ್ಸ್ ರೇ ಮಾಡಿ ಸ್ಕ್ಯಾನ್ ಮಾಡಲಾಗಿದ್ದು, ಆತನ ಅನ್ನನಾಳದಲ್ಲಿ ಆಕ್ಟೋಪಸ್ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಆಕ್ಟೋಪಸ್ ತನ್ನ ಕಣ್ಣು ಮತ್ತು ಕೈಗಳಿಂದ ಗಂಟಲಿನೊಳಗೆ ಹೀರುತ್ತಾ ಮುಂದಕ್ಕೆ ಚಲಿಸುತ್ತಿತ್ತು ಮತ್ತು ವ್ಯಕ್ತಿಯು ನಿರಂತರವಾಗಿ ವಾಂತಿ ಮಾಡುತ್ತಿದ್ದರು. ಮೊದಲಿಗೆ, ವೈದ್ಯರು ಆಕ್ಟೋಪಸ್ ಅನ್ನು ವ್ಯಕ್ತಿಯ ಹೊಟ್ಟೆಯೊಳಗೆ ತಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ ಅದರ ಹಿಡಿತವು ತುಂಬಾ ಬಲವಾಗಿದ್ದರಿಂದ ಅವರು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ರೋಗಿಯನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಎಂಡೋಸ್ಕೋಪ್ ಅನ್ನು ಎಚ್ಚರಿಕೆಯಿಂದ ಹೊಟ್ಟೆಗೆ ಬಿಡಲಾಯಿತು ಮತ್ತು ರೆಟ್ರೋಫ್ಲೆಕ್ಸ್ ಮಾಡಲಾಯಿತು. ನಂತರ ವೈದ್ಯರು ಆಕ್ಟೋಪಸ್ ಅನ್ನು ಹಿಡಿದು ಅದನ್ನು ಹೊರತೆಗೆದರು. ಇದು ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವರದಿಯಾಗಿದೆ. ಮತ್ತೊಂದು ವರದಿಯ ಪ್ರಕಾರ, ಕ್ಲಿನಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟೊಲಜಿ () ನಲ್ಲಿ ಪ್ರಕಟವಾದ ಕೇಸ್ ಸ್ಟಡಿ ಪ್ರಕಾರ, ಆ ವ್ಯಕ್ತಿ 55 ವರ್ಷ ವಯಸ್ಸಿನವನಾಗಿದ್ದನು ಮತ್ತು ಊಟದ ನಂತರ ಡಿಸ್ಫೇಜಿಯಾದಿಂದ ನೋವು ಅನುಭವಿಸಿದರು ಎನ್ನಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...