ಹೆಂಡತಿ ಕೊಂದು ಮೆದುಳು ತಿಂದ ಗಂಡ...! ತಲೆ ಬುರುಡೆಯನ್ನು ಸಿಗರೇಟ್‌ ಆಶ್ ಟ್ರೇ ಮಾಡಿಕೊಂಡ : ಹೆಂಡತಿಯನ್ನು ಕೊಂದು ಆಕೆಯ ಮೆದಳನ್ನು ಗಂಡ ತಿಂದ ಭಯಾನಕ ಘಟನೆಯೊಂದು ವರದಿಯಾಗಿದೆ. ದೆಹಲಿಯಲ್ಲಿ ಭೀಕರವಾಗಿ ಗೆಳೆತಿಯ ಹತ್ಯೆ ಬಳಿಕ ಇಂತಹ ಸಾಲು ಸಾಲು ಅಘಾತಕಾರಿ ಸುದ್ದಿ ಕೇಳಿದ್ದ ಜನರು ಇದೀಗ ಈ ಭಯಾನಕ ಸುದ್ದಿ ತಿಳಿದು ಶಾಕ್‌ಗೆ ಒಳಗಾಗಿದ್ದಾರೆ. :ಹೆಂಡತಿಯನ್ನು ಭೀಕರವಾಗಿ ಕೊಂದು ನಂತರ ಆಕೆಯ ಮೆದಳನ್ನು ಗಂಡ ತಿಂದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಘಟನೆ ಸಂಬಂಧ ಪ್ಯುಬ್ಲೋದ ಅಲ್ವರೋ ಎಂಬಾತನನ್ನು ಬಂಧಿಸಲಾಗಿದೆ. ಶಾಕಿಂಗ್‌ ಅಂದ್ರೆ, ಆತ ತನ್ನ ಹೆಂಡತಿಯ ಮೆದಳನ್ನು ಟ್ಯಾಕೋಸ್‌ ಎಂಬ ಖಾದ್ಯದಲ್ಲಿ ಹಾಕಿಕೊಂಡು ತಿಂದಿದ್ದಾನೆ. ಬಿಲ್ಡರ್ ಕೆಲಸ ಮಾಡಿಕೊಂಡಿರುವ ಅಲ್ವರೋ ಡ್ರಗ್‌ ಸೇವಿಸಿ ಅದರ ಮತ್ತಿನಲ್ಲಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಜೂನ್ 29ರಂದು ನಡೆದಿದೆ. ವಿಚಿತ್ರ ಅಂದ್ರೆ ದೆವ್ವಗಳು ತನಗೆ ಈ ರೀತಿಯ ಕೃತ್ಯ ಎಸಗುವಂತೆ ಆದೇಶ ನೀಡಿದ್ದಾಗಿ ಆರೋಪಿ ಹೇಳಿದ್ದಾನೆ. ಇದನ್ನೂ ಓದಿ: ಮರಿಯಾ ಮಾಂಟ್ಸೆರಾಟ್ (38 ವರ್ಷ) ತನ್ನ ಮೊದಲ ಪತಿಯಿಂದ ದೂರವಾಗಿದ್ದಳು. ಆಕೆಗೆ 12 ರಿಂದ 23 ವರ್ಷದ ಐದು ಹೆಣ್ಣುಮಕ್ಕಳಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಅಲ್ವರೋನನ್ನು ಮದುವೆಯಾಗಿದ್ದಳು. ಮಾದಕ ವಸ್ತು ವ್ಯಸನಿಯಾಗಿದ್ದ ಈತ ಪತ್ನಿಯ ಮೆದುಳಿನ ಭಾಗವನ್ನು ಟ್ಯಾಕೋಸ್‌ನಲ್ಲಿ ತಿಂದಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ, ಮರಿಯಾ ದೇಹವನ್ನು ಉಳಿ ಮತ್ತು ಸುತ್ತಿಗೆಯಿಂದ ತುಂಡರಿಸಿ ಚೀಲದಲ್ಲಿ ತುಂಬಿದ್ದ. ತಲೆ ಬರುಡೆಯನ್ನು ಆಶ್‌ ಟ್ರೇ ಮಾಡಿಕೊಂಡಿದ್ದ. ಉಳಿದ ಭಾಗಗಳನ್ನು ಕಂದಕವೊಂದಕ್ಕೆ ಎಸೆದಿದ್ದಾಗಿ ಪೊಲೀಸರ ಮುಂದೆ ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಎರಡು ದಿನಗಳ ನಂತರ, ತನ್ನ ಮಲ ಮಗಳೊಬ್ಬಳಿಗೆ ಕರೆ ಮಾಡಿದ್ದ ಕ್ರೂರಿ, ತಾನು ಎಸಗಿದ ಅಪರಾಧದ ಬಗ್ಗೆ ಮಾಹಿತಿ ನೀಡಿದ್ದ. ಇದನ್ನೂ ಓದಿ: ಅಲ್ಲದೆ, ತನ್ನ ಹೆಂಡತಿಯ ಮೊದಲ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಅಲ್ವರೋ ಹಿಂಸಿಸುತ್ತಿದ್ದ ಎಂದು ಮರಿಯಾ ಕುಟುಂಬಸ್ಥರು ಆರೋಪಿಸಿದಾರೆ. ತನಿಖೆ ವೇಳೆ ಆರೋಪಿಯ ಮನೆಯಲ್ಲಿ ಮಾಟ ಮಂತ್ರದ ಚಟುವಟಿಕೆ ನಡೆಸಿದ ಕುರುಹುಗಳು ಪತ್ತೆಯಾಗಿದ್ದು, ಆತ ದೆವ್ವ ಭೂತಗಳನ್ನು ಆರಾಧಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...