: ಸ್ಪರ್ಮ್ ತಿಮಿಂಗಿಲ ದೇಹದಲ್ಲಿ 9.5KG ‘ತೇಲುವ ಚಿನ್ನ’ ಪತ್ತೆ! ಇದರ ಬೆಲೆ ಎಷ್ಟು ಗೊತ್ತಾ? : ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್‌ ತಿಮಿಂಗಿಲಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ. ನವದೆಹಲಿ:‌ಕಳೆದ ತಿಂಗಳು ಕ್ಯಾನರಿ ದ್ವೀಪದ ಲಾ ಪಾಲ್ಮಾ ನೋಗಾಲ್ಸ್‌ ಬೀಚ್‌ನಲ್ಲಿ ಸಾವನ್ನಪ್ಪಿದ್ದ ‘ಸ್ಪರ್ಮ್‌ ತಿಮಿಂಗಿಲ’(ದೊಡ್ಡ ಹಲ್ಲುಗಳ ತಿಮಿಂಗಿಲ) ಕರುಳಿನಲ್ಲಿ ಅಡಗಿದ್ದ ಅಮೂಲ್ಯವಾದ ನಿಧಿಯನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ತಿಮಿಂಗಲ ದೇಹದಲ್ಲಿ ತೇಲುವ ಚಿನ್ನ ಎಂದೇ ಖ್ಯಾತಿಯಾಗಿರುವ 9.5 ಕೆಜಿಗಳಷ್ಟು ಅಂಬರ್ಗೀಸ್‌ ಪತ್ತೆಯಾಗಿದೆ. ದ ಪ್ರಾಣಿಗಳ ಆರೋಗ್ಯ ಮತ್ತು ಆಹಾರ ಭದ್ರತೆಯ ಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಫೆರ್ನಾಂಡಿಸ್ ರೋಡ್ರಿಗಸ್ ಅವರು ಈ ತಿಮಿಂಗಿಲಿನ ಹಠಾತ್ ಸಾವಿನ ಕಾರಣ ತಿಳಿಯಲು ನಿರ್ಧರಿಸಿದ್ದರು. ಅದರಂತೆ ಅದರ ಮೃತದೇಹವನ್ನು ಪರೀಕ್ಷಿಸುವ ವೇಳೆ $250,000 ಮೌಲ್ಯದ ಅಮೂಲ್ಯ ನಿಧಿ ಪತ್ತೆಯಾಗಿದೆ. ಸ್ಪರ್ಮ್‌ ತಿಮಿಂಗಿಲಿನ ಹೊಟ್ಟೆಯಲ್ಲಿ ಸಿಕ್ಕ 9.5 ಕೆಜಿ ಅಂಬರ್‌ ಗ್ರೀಸ್‌ ಅಂದರೆ ವಾಂತಿಯ ಮೌಲ್ಯವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು 3 ಕೋಟಿ ರೂ. ಆಗುತ್ತದೆ ಎಂದು ವರದಿಯಾಗಿದೆ. ಲಾಸ್‌ ಪ್ಲಾಮಾಸ್‌ ಡಿ ಗ್ರಾನ್‌ ಕೆನರಿಯಾ ವಿವಿಯ ತಜ್ಞರ ಮಾಹಿತಿಯಂತೆ, ಅಂಬರ್‌ ಗ್ರೀಸ್‌ ಎಂದು ಕರೆಯಲ್ಪಡುವ ಈ ವಾಂತಿಯು ಸುಮಾರು 10KG ಯಷ್ಟಿದ್ದು, ಇದು ಕರುಳಿನಲ್ಲಿ ಹುಣ್ಣಾಗಲು ಕಾರಣವಾಗಿದ್ದರಿಂದ ತಿಮಿಂಗಿಲ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿರುವ ಸ್ಪರ್ಮ್‌ ತಿಮಿಂಗಿಲ 33 ಅಡಿ ಉದ್ದವಿದ್ದು, 2 ಅಡಿ ಅಗಲವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ‘ನಾನು ತೆಗೆದದ್ದು ಸುಮಾರು 50-60 ಸೆಂ.ಮೀ ವ್ಯಾಸದ 9.5 ಕೆಜಿ ತೂಕದ ಫ್ಲೋಟಿಂಗ್‌ ಗೋಲ್ಡ್. ಅಲೆಗಳು ತಿಮಿಂಗಿಲದ ಮೇಲೆ ಕೊಚ್ಚಿಕೊಂಡು ಹೋಗುತ್ತಿದ್ದವು. ನಾನು ಬೀಚ್‌ ತಲುಪಿದಾಗ ಎಲ್ಲರೂ ನೋಡುತ್ತಿದ್ದರು. ಆದರೆ ನನ್ನ ಕೈಯಲ್ಲಿದ್ದದ್ದು ಆಂಬರ್ಗ್ರಿಸ್ ಎಂಬುದು ಅವರಿಗೆ ತಿಳಿದಿರಲಿಲ್ಲ’ವೆಂದು ರೊಡ್ರಿಗಸ್ ಹೇಳಿದ್ದಾರೆ. ಏನಿದು ಫ್ಲೋಟಿಂಗ್‌ ಗೋಲ್ಡ್? ಸ್ಪರ್ಮ್‌ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆ ಇದೆ. ಈ ಅಂಬರ್‌ ಗ್ರೀಸ್‍ಗೆ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆ ಹಾಗೂ ಸುಗಂಧ ದ್ರವ್ಯ ತಯಾರಿಕೆಯ ಉದ್ಯಮದಲ್ಲಿ ಭಾರೀ ಬೇಡಿಕೆಯಿದೆ. ಸ್ಪರ್ಮ್‌ ತಿಮಿಂಗಿಲದ ದೇಹದೊಳಗೆ ಈ ಅಂಬರ್‌ ಗ್ರೀಸ್‌ ಹೇಗೆ ಉತ್ಪತ್ತಿಯಾಗುತ್ತದೆ ಅನ್ನೋದು ಇದುವರೆಗೂ ವಿಜ್ಞಾನಿಗಳಿಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ ತಿಮಿಂಗಿಲ ಕೊಕ್ಕಿನಂತಹ ಜಲಚರವನ್ನು ತಿಂದ ಸಂದರ್ಭದಲ್ಲಿ ಅಂಬರ್‌ ಗ್ರೀಸ್‌ ಸೃಷ್ಟಿಯಾಗುತ್ತದೆ ಎಂಬ ನಂಬಿಕೆಯಿದೆ. ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್‌ಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವುದರಿಂದ ತಿಮಿಂಗಿಲಗಳನ್ನು ಕೊಲ್ಲುವುದು ಕಾನೂನುಬಾಹಿರವಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...