25 ಕೋಟಿ ಜಾಕ್ ಪಾಟ್ ಗೆದ್ದಿದ್ದ ಲಾಟರಿಯನ್ನು ಶರಾಬು ಅಂಗಡಿಯಲ್ಲಿ ಮರೆತು ಬಂದ ವ್ಯಕ್ತಿ! ಮುಂದೆ ಆಗಿದ್ದು ರೋಚಕ ! ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ. :ಲಾಟರಿ ಟಿಕೆಟ್ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅದೆಷ್ಟೋ ಜನ ಕ್ಷಣಾರ್ಧದಲ್ಲಿ ಲಕ್ಷಾಧಿಪತಿಗಳಾಗುತ್ತಾರೆ. ಆದರೆ, ಅಮೆರಿಕದಲ್ಲಿ ಲಾಟರಿ ಟಿಕೆಟ್‌ ಗೆ ಸಂಬಂಧಿಸಿದಂತೆ ರೋಚಕ ಘಟನೆ ನಡೆದಿದೆ. ಇಲ್ಲಿ ಕಾರ್ ಮೆಕ್ಯಾನಿಕ್ ಒಬ್ಬರಿಗೆ 25 ಕೋಟಿ ಲಾಟರಿ ಬಂದಿದೆ. ಈ ಲಾಟರಿ ದೊಡ್ಡ ರಾದ್ದಾಂತವನ್ನೇ ಉಂಟು ಮಾಡಿದೆ. ಲಾಟರಿಯ ಜಾಕ್ ಪಾಟ್ ಹಣ ಗೆದ್ದ ಮೆಕ್ಯಾನಿಕ್ ಹೆಸರು ಪಾಲ್ ಲಿಟಲ್. ಅವರು ಯುಎಸ್ಎ ಮ್ಯಾಸಚೂಸೆಟ್ಸ್ ನಿವಾಸಿ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ. ಪಾಲ್ ಲಿಟಲ್ ಜನವರಿಯಲ್ಲಿಖರೀದಿಸಿದ್ದರು. ಆದರೆ ಟಿಕೆಟ್ ಖರೀದಿಸಿ ಮನೆಗೆ ಹಿಂತಿರುಗುತ್ತಿದ್ದ ಅವರು ದಾರಿ ಮಧ್ಯೆ ಮದ್ಯದಂಗಡಿಯಲ್ಲಿ ಈ ಟಿಕೆಟ್ ಅನ್ನು ಮರೆತಿದ್ದಾರೆ. ತಾನು ಶರಾಬು ಅಂಗಡಿಯಲ್ಲಿ ಟಿಕೆಟ್ ಬಿಟ್ಟು ಬಂದಿರುವ ವಿಚಾರ ಕೂಡಾ ಅವರಿಗೆ ನೆನಪಿರಲಿಲ್ಲ. ಈ ವ್ಯಕ್ತಿ ಬಿಟ್ಟು ಬಂದಿರುವ ಟಿಕೆಟ್ ಮದ್ಯದಂಗಡಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಸಿಕ್ಕಿತ್ತು. ಇದನ್ನೂ ಓದಿ : ಇತ್ತೀಚೆಗಷ್ಟೇ ಈ ಟಿಕೆಟ್‌ನ ಫಲಿತಾಂಶ ಹೊರಬಂದಾಗ ಮೆಕ್ಯಾನಿಕ್ ಖರೀದಿಸಿದ ಟಿಕೆಟ್ ಗೆ 25 ಕೋಟಿ ರೂಪಾಯಿ ಜಾಕ್ ಪಾಟ್ ಬಂದಿರುವುದು ಗೊತ್ತಾಗಿದೆ. ಮೆಕ್ಯಾನಿಕ್ ಪಾಲ್ ಲಿಟಲ್ ಹೆಸರು ಅನೌನ್ಸ್ ಕೂಡಾ ಆಗಿತ್ತು. ಆದರೆ ಇವರ ಕೈಯ್ಯಲ್ಲಿ ಟಿಕೆಟ್ ಇರಲಿಲ್ಲ. ಟಿಕೆಟ್ ಗಾಗಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗೆ ಟಿಕೆಟ್ ಹುಡುಕುತ್ತಿದ್ದಾಗ ತಾನುಟಿಕೆಟ್ ಬಿಟ್ಟು ಬಂದಿರುವುದು ಪಾಲ್ ಲಿಟಲ್ ಅವರಿಗೆ ನೆನಪಾಗಿದೆ. ಶರಾಬು ಅಂಗಡಿಯಲ್ಲಿ ವಿಚಾರಣೆ ನಡೆಸಿದಾಗ ಅಲ್ಲಿದ್ದ ಮಹಿಳೆ ತನಗೆ ಯಾವ ಟಿಕೆಟ್ ಕೂಡಾ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಸ್ವಾರಸ್ಯಕರ ಸಂಗತಿ ಎಂದರೆ ಮಹಿಳೆಯೇ ಲಾಟರಿ ಕಚೇರಿಗೆ ಆಗಮಿಸಿ 25 ಕೋಟಿ ರೂ. ಗೆದ್ದ ಲಾಟರಿ ಟಿಕೆಟ್ ಅನ್ನು ತೋರಿಸಿದ್ದಾಳೆ. ಆದರೆ ಅಲ್ಲಿದ್ದವರಿಗೆ ಮಹಿಳೆಯ ಮೇಲೆ ಅನುಮಾನ ಮೂಡಿದ್ದು, ತನಿಖೆ ನಡೆಸಿದ್ದಾರೆ. ಈ ವೇಳೆ ಎಲ್ಲಾ ವಿಚಾರ ಬೆಳಕಿಗೆ ಬಂದಿದೆ. ಅಂತಿಮವಾಗಿ ಟಿಕೆಟ್ ಖರೀದಿಸಿದ ಪಾಲ್ ಲಿಟಲ್ ಅನ್ನು ಪತ್ತೆ ಹಚ್ಚಿ ಲಾಟರಿ ಹಣವನ್ನು ಹಸ್ತಾಂತರಿಸಲಾಯಿತು. ಅಲ್ಲದೆ ಟಿಕೆಟ್ ಬಚ್ಚಿಟ್ಟಿದ್ದ ಮಹಿಳೆಯ ಮೇಲೆ ವಂಚನೆ ಆರೋಪ ಹೊರಿಸಿ ಜೈಲಿಗೆ ಹಾಕಲಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...