ಅರ್ಧಕ್ಕೆ ಸಂದರ್ಶನ ಬಿಟ್ಟು ಹೊರ ನಡೆದ ಯುಸ್‌ ಅಧ್ಯಕ್ಷ ಜೋ ಬೈಡನ್‌, ಇಲ್ಲಿದೆ ವಿಡಿಯೋ! : ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಯುಸ್‌ ಅಧ್ಯಕ್ಷ ಜೋ ಬೈಡನ್ ಗುರುವಾರ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಿಂದ ಎದ್ದು, ಆಂಕರ್ ಜೊತೆಗೆ ಶೇಕ್‌ ಹ್ಯಾಂಡ್‌ ನೀಡಿದರು. ಸಂದರ್ಶನಕ್ಕಾಗಿ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು. :ಯುಎಸ್ ಅಧ್ಯಕ್ಷ ಜೋ ಬೈಡನ್ ಅವರ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಟಿವಿ ವಾಹಿನಿಯೊಂದರ ಸಂದರ್ಶನದಿಂದ ಜೋ ಬೈಡನ್ ಅರ್ಧಕ್ಕೆ ಎದ್ದು ಹೋಗಿರುವುದನ್ನು ಕಾಣಬಹುದು. ವಾಹಿನಿಯ ಆ್ಯಂಕರ್ ಸಂದರ್ಶನವನ್ನು ಕೊನೆಗೊಳಿಸುವ ಮೊದಲೆ ಯುಎಸ್ ಅಧ್ಯಕ್ಷ ಜೋ ಬೈಡನ್ ಆಸನದಿಂದ ಎದ್ದು ಹೋದರು. ಟಿವಿ ನ್ಯೂಸ್ ಚಾನೆಲ್ ಆಂಕರ್ ನಿಕೋಲ್ ವ್ಯಾಲೇಸ್ ಅವರೊಂದಿಗೆ ಸ್ಟುಡಿಯೋದಲ್ಲಿ ನೇರ ಸಂದರ್ಶನದಲ್ಲಿ ಭಾಗಿಯಾಗಿದ್ದರು. ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಗುರುವಾರ ಎಂಎಸ್‌ಎನ್‌ಬಿಸಿ ಚಾನೆಲ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಬೈಡನ್ ತಮ್ಮ ಆಸನದಿಂದ ಮೇಲೆದ್ದು, ಆಂಕರ್ ನಿಕೋಲ್ ವ್ಯಾಲೇಸ್ ಅವರ ಕೈ ಕುಲುಕಿ, ಸಂದರ್ಶನವನ್ನು ತೆಗೆದುಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು. ಇದನ್ನು ಕಂಡು ಅಲ್ಲಿದ್ದ ಪ್ರೇಕ್ಷಕರೂ ಅಲ್ಲಿಂದ ಹೊರಡಲು ಆರಂಭಿಸಿದರು. ಇದಾದ ನಂತರ ಆ್ಯಂಕರ್ ಜನರು ತಕ್ಷಣ ಹೊರಗೆ ಹೋಗಬೇಡಿ ಮತ್ತು ಅಲ್ಲಿಯೇ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಟಿವಿ ಆಂಕರ್ ವಿರಾಮ ತೆಗೆದುಕೊಳ್ಳುವ ಮೊದಲು ಅಥವಾ ಸಂದರ್ಶನವನ್ನು ಮುಗಿಸುವ ಮೊದಲು ಬೈಡನ್ ಈ ರೀತಿ ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದನ್ನು ಜನರು ಇಷ್ಟಪಡಲಿಲ್ಲ. ಅವರು ಬೈಡನ್ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. . — (@) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...