: 26 ವರ್ಷದ ಬಳಿಕ ಈಜಿಪ್ಟ್‌ಗೆ ಭಾರತದ ಪ್ರಧಾನಿಯ ಮೊದಲ ಭೇಟಿ! ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ನವದೆಹಲಿ:ಅಮೆರಿಕದ ಯಶಸ್ವಿ ಭೇಟಿ ಮುಗಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಈಜಿಪ್ಟ್ ರಾಜಧಾನಿ ಕೈರೋಗೆ ಆಗಮಿಸಿದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಅಧಿಕೃತ ಭೇಟಿಗಾಗಿ ಕೈರೋಗೆ ಆಗಮಿಸಿದರು. ಬರೋಬ್ಬರಿ 26 ವರ್ಷಗಳ ನಂತರ ಮೊದಲ ದ್ವಿಪಕ್ಷೀಯ ಭೇಟಿಗಾಗಿಈಜಿಪ್ಟ್ಗೆ ಆಗಮಿಸಿದ್ದಾರೆ. ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ನೀಡುವ ಮೂಲದ ಈಜಿಪ್ಟ್ ಪ್ರಧಾನಿ ಸ್ವಾಗತಿಸಿದರು. ಇದೇ ವೇಳೆ ಪ್ರಧಾನಿ ಮೋದಿಯವರಿಗೆ ವಿಶೇಷ ಗೌರವ ರಕ್ಷೆ ನೀಡಲಾಯಿತು. ಇದನ್ನೂ ಓದಿ: ಕೈರೋದ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಈಜಿಪ್ಟ್ ಪ್ರಧಾನಿ ಮುಸ್ತಫಾ ಮಡ್ಬೌಲಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಅವರಿಗೆ ವಿಶೇಷ ಗೌರವವನ್ನು ನೀಡಲಾಯ್ತು. ಕಳೆದ 26 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಈಜಿಪ್ಟ್‍ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. | 26 . , . . — (@) ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಮೋದಿಯವರು ಇಂದು ಈಜಿಪ್ಟ್‌ನ ಗ್ರಾಂಡ್ ಮುಫ್ತಿ ಡಾ ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಮ್ ಅವರನ್ನು ಭೇಟಿಯಾಗಲಿದ್ದಾರೆ ಮತ್ತು ಈಜಿಪ್ಟ್ ಚಿಂತನೆಯ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ಭಾನುವಾರ ಪ್ರಧಾನಿ ಮೋದಿಯವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. 16ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬಿ-ಅಮ್ರ್ ಅಲ್ಲಾ (985-1021) ಅವರ ಹೆಸರಿನ ಕೈರೋದಲ್ಲಿನ ಐತಿಹಾಸಿಕ ಮತ್ತು ಪ್ರಮುಖ ಮಸೀದಿಯಾದ ಅಲ್-ಹಕೀಮ್ ಮಸೀದಿಯಲ್ಲಿ ಪ್ರಧಾನಿ ಮೋದಿ ಸುಮಾರು ಅರ್ಧ ಗಂಟೆ ಕಳೆಯಲಿದ್ದಾರೆ. ಇದನ್ನೂ ಓದಿ: | — (@) ತಮ್ಮ ಈಜಿಪ್ಟ್ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿಯವರು ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್‌ಗಾಗಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಹೆಲಿಯೊಪೊಲಿಸ್ ವಾರ್ ಗ್ರೇವ್ ಸ್ಮಶಾನಕ್ಕೂ ಭೇಟಿ ನೀಡಲಿದ್ದಾರೆ. ಸಾಂಪ್ರದಾಯಿಕವಾಗಿ ಆಫ್ರಿಕನ್ ಖಂಡದಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿರುವುದರಿಂದ ಈ ಭೇಟಿಯು ಮಹತ್ವದ್ದಾಗಿದೆ. ಭಾರತ-ಈಜಿಪ್ಟ್ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಮಾರ್ಚ್ 1978ರಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಈಜಿಪ್ಟ್ ಸೆಂಟ್ರಲ್ ಏಜೆನ್ಸಿ ಫಾರ್ ಪಬ್ಲಿಕ್ ಮೊಬಿಲೈಸೇಶನ್ ಮತ್ತು ಸ್ಟ್ಯಾಟಿಸ್ಟಿಕ್ಸ್ () ಪ್ರಕಾರ ಅತ್ಯಂತ ಒಲವುಳ್ಳ ರಾಷ್ಟ್ರದ ಷರತ್ತು ಆಧರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...