ಯೋಗ ದಿನಾಚರಣೆ: ನ್ಯೂಯಾರ್ಕ್ ನಲ್ಲಿ ಹೊಸ ಜಾಗತಿಕ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ. ನ್ಯೂಯಾರ್ಕ್‌:ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಯೋಗ ದಿನಾಚರಣೆ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ೧೮೦ ದೇಶಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಹೊಸ ದಾಖಲೆಯಾಗಿದೆ. ವಿಶ್ವಸಂಸ್ಥೆಯಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯೋಗ ಎಲ್ಲರನ್ನೂ ಒಟ್ಟುಗೂಡಿಸುವ ವಿಧಾನವಾಗಿದೆ. ಇದು ಆರೋಗ್ಯ ವರ್ಧನೆಗೆ ಸಹಕಾರಿ. ಭೂಮಿಯ ಆರೋಗ್ಯಯುತವಾಗಿರಲು ಇದು ಪೂರಕ ಎಂದು ಹೇಳಿದರು. ಇದನ್ನೂ ಓದಿ: ! . , , . — (@) ಯೋಗ ಜೀವನ ವಿಧಾನ, ಸಮಗ್ರ ಸೌಖ್ಯದ ರಹದಾರಿಯಾಗಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಮಂತ್ರಿ, ಆರೋಗ್ಯಕ್ಕಾಗಿ ಮತ್ತು ಪರಸ್ಪರ ಸಹಾನುಭೂತಿಯಿಂದಲು ಯೋಗ ಸಹಕಾರಿ. ಸುಸ್ಥಿರ ಭವಿಷ್ಯ, ಶಾಂತಿಯುತ ಸಮಾಜಕ್ಕಾಗಿ ಯೋಗ ಸೇತುವೆಯಾಗಬಲ್ಲದು ಎಂದು ಮೋದಿ ಹೇಳಿದರು. ಇದನ್ನೂ ಓದಿ: ಯೋಗದ ಮಹತ್ವ ಸಾರುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾತ್ರ ಅಪಾರ ಎಂದು ವಿಶ್ವ ಸಂಸ್ಥೆ ಮುಖ್ಯಸ್ಥಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...