ಹಾಲಿನೊಂದಿಗೆ ಈ ಹಣ್ಣನ್ನು ನೆನೆಸಿಟ್ಟು ಸೇವಿಸಿದರೆ ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕರಗುವುದು ! :ಕೆಲವು ಆಹಾರಗಳನ್ನು ಸೇವಿಸುವ ಮೂಲಕ ದೇಹದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಗೊಳ್ಳುವ ಬದಲು ಮಲದೊಂದಿಗೆ ದೇಹದಿಂದ ಹೊರಹೋಗುತ್ತದೆ. :ಮೂಲ ಚಿಕಿತ್ಸೆ ಇಲ್ಲದ ಅನೇಕ ರೋಗಗಳಿವೆ.ಈ ರೋಗಗಳನ್ನು ಔಷಧಿಗಳ ಸಹಾಯದಿಂದ ನಿಯಂತ್ರಿಸಬಹುದು.ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತೆಯೇ, ಅಧಿಕ ಕೊಲೆಸ್ಟ್ರಾಲ್ ಕೂಡಾ ದೀರ್ಘಕಾಲದವರೆಗೆ ಕಾಡುವ ಸಮಸ್ಯೆಯಾಗಿದೆ. ಅಧಿಕ ಕೊಲೆಸ್ಟ್ರಾಲ್ ಕೂಡಾ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ.ಇದು ಗಂಭೀರ ಸ್ಥಿತಿಯನ್ನು ತಲುಪಿದಾಗ ಮಾತ್ರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.ಆದ್ದರಿಂದ,ಔಷಧಿಗಳ ಜೊತೆಗೆ, ಸರಿಯಾದ ಆಹಾರ ಮತ್ತು ಜೀವನಶೈಲಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ.ಕೆಲವು ಆಹಾರಗಳನ್ನು ಸೇವಿಸುವ ಮೂಲಕ ದೇಹದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಶೇಖರಗೊಳ್ಳುವ ಬದಲು ಮಲದೊಂದಿಗೆ ದೇಹದಿಂದ ಹೊರಹೋಗುತ್ತದೆ. ಕೊಲೆಸ್ಟ್ರಾಲ್ ಕರಗಿಸಲು ಹಾಲಿನೊಂದಿಗೆ ಈ ವಿಶೇಷ ಪದಾರ್ಥವನ್ನು ಸೇವಿಸಿ :ಪೂರ್ಣ ಕೊಬ್ಬಿನ ಹಾಲನ್ನು ಅಂದರೆ ಕೆನೆ ಅಥವಾ ಕೆನೆ ಹಾಲು ಸೇವಿಸಬಾರದು.ಕಡಿಮೆ ಕೊಬ್ಬಿನ ಹಾಲು ಅಂದರೆ ಟೋನ್ಡ್ ಹಾಲನ್ನು ಸೇವಿಸುವುದು ಕೊಲೆಸ್ಟ್ರಾಲ್ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ.ಇನ್ನು ಒಣಗಿದ ಅಂಜೂರದ ಹಣ್ಣುಗಳನ್ನು ಟೋನ್ಡ್ ಹಾಲಿನಲ್ಲಿ ಕುದಿಸಿ ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಇದನ್ನೂ ಓದಿ : ಮಲದೊಂದಿಗೆ ಹೊರಬರುತ್ತದೆ ಕೊಲೆಸ್ಟ್ರಾಲ್ :ಒಣಗಿದ ಅಂಜೂರದಲ್ಲಿ ನೀರಿನಲ್ಲಿ ಕರಗುವ ನಾರಿನಂಶವಿದೆ. ಅದನ್ನು ಹಾಲಿನಲ್ಲಿ ಕುದಿಸಿದಾಗ,ಅದು ಹೆಚ್ಚು ಆರೋಗ್ಯಕರ ರೀತಿಯಲ್ಲಿ ದೇಹವನ್ನು ಪ್ರವೇಶಿಸುತ್ತದೆ.ಅಂಜೂರದ ಹಣ್ಣುಗಳು ಮತ್ತು ಹಾಲನ್ನು ಸೇವಿಸುವುದರಿಂದ, ಇದು ಕರುಳಿನೊಳಗೆ ವಿಶೇಷ ಪದರವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಅನ್ನು ದೇಹ ಹೀರಿಕೊಳ್ಳದೆ ನೇರವಾಗಿ ಮಲದೊಂದಿಗೆ ದೇಹದಿಂದ ಹೊರಬರುತ್ತದೆ. ಇತರ ಪ್ರಯೋಜನಗಳನ್ನು ಸಹ ತಿಳಿಯಿರಿ :ಅಧಿಕ ಕೊಲೆಸ್ಟ್ರಾಲ್ ರೋಗಿಗಳಿಗೆ ಮಾತ್ರವಲ್ಲದೆಸಮಸ್ಯೆಗಳನ್ನು ನಿಯಂತ್ರಿಸಲು ಕೂಡಾ ಇದು ಸಹಾಯ ಮಾಡುತ್ತದೆ.ಇದಲ್ಲದೆ,ಕ್ಯಾಲ್ಸಿಯಂ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಸ್ನಾಯುಗಳು ಮತ್ತು ಮೂಳೆಗಳ ದೌರ್ಬಲ್ಯವನ್ನು ಕೂಡಾ ಕಡಿಮೆ ಮಾಡುತ್ತದೆ. ಇದನ್ನೂ ಓದಿ : ಸರಿಯಾದ ಬಳಕೆಯ ವಿಧಾನ :ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸರಿಯಾದ ವಿಧಾನದಲ್ಲಿ ಇದನ್ನು ಸೇವಿಸಬೇಕು.ಒಂದು ಲೋಟ ಕಡಿಮೆ ಕೊಬ್ಬಿನ ಹಾಲನ್ನು ತೆಗೆದುಕೊಂಡು ಅದನ್ನು ಕುದಿಸಲು ಉರಿಯಲ್ಲಿ ಇರಿಸಬೇಕು.ಅದು ಬಿಸಿಯಾಗಲು ಪ್ರಾರಂಭಿಸಿದಾಗ, ಅದರಲ್ಲಿ ಒಂದು ಅಥವಾ ಎರಡು ಅಂಜೂರದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ.ನಂತರ,ಅಗತ್ಯಕ್ಕೆ ಅನುಗುಣವಾಗಿ ಸಿಹಿ ಸೇರಿಸಿ ತಣ್ಣಗಾಗಿಸಿ.ತಣ್ಣಗಾದ ಬಳಿಕ ಮೊದಲು ಅಂಜೂರವನ್ನು ಹೊರತೆಗೆದು ಚೆನ್ನಾಗಿ ಅಗಿದು ತಿನ್ನಿ ನಂತರ ನಿಧಾನವಾಗಿ ಹಾಲು ಕುಡಿಯಿರಿ.ಇದನ್ನು ಬೆಳಿಗ್ಗೆ ಅಥವಾ ಸಂಜೆ ಯಾವಾಗ ಬೇಕಾದರೂ ಸೇವಿಸಬಹುದು. (ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...