ಶೀತ, ಕೆಮ್ಮು ನಿವಾರಣೆಗೆ ಮಾತ್ರ ಅಲ್ಲ... ಹೀಗೆ ಬಳಸಿದರೆ ಸ್ಟ್ರೆಚ್ ಮಾರ್ಕ್ಸ್ ಕೂಡ ಮಾಯವಾಗುತ್ತೆ! : ವಿಕ್ಸ್ ಬಳಸುವುದರಿಂದ ತಲೆನೋವು, ಕೆಮ್ಮು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಉಸಿರಾಟದ ಸಮಸ್ಯೆಗಳಿಗೆ ಪರಿಹಾರವಾಗಿಯೂ ಅದು ಕಾರ್ಯನಿರ್ವಹಿಸುತ್ತದೆ. :ಮಳೆಗಾಲ ಶುರುವಾಗಿದೆ. ಈಗ ಪ್ರತಿಯೊಬ್ಬರೂ ಮನೆಯಲ್ಲಿ ಶೀತ, ಕೆಮ್ಮು ಮತ್ತು ಜ್ವರ ನಿವಾರಣೆ ಮಾಡುವಂತಹ ಕಿಟ್’ಗಳನ್ನು ಇಟ್ಟುಕೊಳ್ಳುವುದು ಉತ್ತಮ. ಈ ಕ್ರಮದಲ್ಲಿಯೇ ಅನೇಕ ಜನರು ಶೀತದ ಸಮಸ್ಯೆಯನ್ನು ಕಡಿಮೆ ಮಾಡಲು ವಿಕ್ಸ್ ಬಳಸುತ್ತಾರೆ. ವಿಕ್ಸ್ ಬಳಸುವುದರಿಂದ ತಲೆನೋವು, ಕೆಮ್ಮು, ಶೀತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಉಸಿರಾಟದ ಸಮಸ್ಯೆಗಳಿಗೆ ಪರಿಹಾರವಾಗಿಯೂ ಅದು ಕಾರ್ಯನಿರ್ವಹಿಸುತ್ತದೆ. ಇನ್ನು ವಿಕ್ಸ್ ಈ ಸಮಸ್ಯೆಗಳಿಗೆ ಮಾತ್ರ ಕೆಲಸ ಮಾಡುತ್ತದೆ ಎಂದು ಭಾವಿಸುವುದು ತಪ್ಪು. ಬದಲಾಗಿ ಇದನ್ನು ಹಲವು ರೀತಿಯ ಸಮಸ್ಯೆಗಳ ಪರಿಹಾರಕ್ಕೆಂದು ಬಳಕೆ ಮಾಡಬಹುದು. ಇದನ್ನೂ ಓದಿ: ಸೈನಸ್ ಕಡಿಮೆ: ಅನೇಕ ಜನರು ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹವರು ವಿಕ್ಸ್ ಅನ್ನು ಮೂಗಿನ ಬಳಿ ಸ್ವಲ್ಪ ಹಿಡಿದುಕೊಂಡು ವಾಸನೆಯನ್ನು ಬಲವಾಗಿ ತೆಗೆದುಕೊಂಡಿರೆ, ಸೈನಸ್ ತಲೆನೋವು ಕಡಿಮೆಯಾಗುತ್ತದೆ. ಸೊಳ್ಳೆಗಳುಕಚ್ಚುವುದಿಲ್ಲ: ಸೊಳ್ಳೆ ಕಡಿತದಿಂದ ಮುಕ್ತಿ ಪಡೆಯಬೇಕಾದರೆ ವಿಕ್ಸ್ ಅನ್ನು ಬಳಸಬಹುದು. ವಿಕ್ಸ್‌’ಗೆ ಸ್ವಲ್ಪ ವ್ಯಾಸಲೀನ್ ಬೆರೆಸಿ, ಅದನ್ನು ಚರ್ಮ ಮತ್ತು ಬಟ್ಟೆಗಳಿಗೆ ಹಚ್ಚಿ. ಹೀಗೆ ಮಾಡಿದರೆ ಸೊಳ್ಳೆ- ನೊಣಗಳು ಹತ್ತಿರಬರುವುದಿಲ್ಲ. ಮೊಡವೆ ಕಡಿಮೆ: ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ವಿಕ್ಸ್ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ವಿಕ್ಸ್ ಅನ್ನು ದಿನಕ್ಕೆ ಕನಿಷ್ಠ 3 ಬಾರಿ ಮೊಡವೆಗಳ ಮೇಲೆ ಹಚ್ಚಬೇಕು. ಹೀಗೆ ಮಾಡಿದರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ಸ್ನಾಯು ನೋವು: ಸ್ನಾಯು ನೋವಿನಿಂದ ಬಳಲುತ್ತಿರುವವರು ವಿಕ್ಸ್ ಅನ್ನು ಬಳಸಬಹುದು. ನೋವು ಇರುವಲ್ಲಿ ವಿಕ್ಸ್‌’ನಿಂದ ಮಸಾಜ್ ಮಾಡಿ. ನಂತರ, ಒಂದು ಬಟ್ಟೆಯನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಅದ್ದಿ ಮಸಾಜ್ ಮಾಡಿದ ದೇಹದ ಭಾಗಕ್ಕೆ ಇಡಿ. ಇದು ತಕ್ಷಣವೇ ನೋವನ್ನು ಕಡಿಮೆ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ಸ್ದೂರ: ಅನೇಕ ಜನರು ಸ್ಟ್ರೆಚ್ ಮಾರ್ಕ್ಸ್ ಹೊಂದಿರುತ್ತಾರೆ. ಅವು ಅಷ್ಟು ಬೇಗ ಹೋಗುವುದಿಲ್ಲ. ಹೀಗಿರುವಾಗ ಎರಡು ವಾರಗಳ ಕಾಲ ಸ್ಟ್ರೆಚ್ ಮಾರ್ಕ್ಸ್ ಮೇಲೆ ವಿಕ್ಸ್ ಹಚ್ಚಿದರೆ ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...