ಆ ಆರೋಗ್ಯ ಸಮಸ್ಯೆ ಇದ್ದರೆ ಬದನೆಕಾಯಿ ತಿನ್ನಲೇಬೇಡಿ.. ವಿಷಕ್ಕೆ ಸಮ..! : ಬದನೆಕಾಯಿ ಪಲ್ಯ ಎಂದರೇ ಯಾರಿಗೆ ಇಷ್ಟವಿಲ್ಲ.. ಹೇಳಿ? ಇದು ನೀಡುವ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ..ಇದು ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. :ಬದನೆಕಾಯಿ ಪಲ್ಯ ಎಂದರೇ ಯಾರಿಗೆ ಇಷ್ಟವಿಲ್ಲ.. ಹೇಳಿ? ಇದು ನೀಡುವ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ..ಇದು ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಆದರೂ ಇದು ಕೆಲವು ಸಮಸ್ಯೆ ಇರುವವರಿಗೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.. ಅವು ಯಾವವೆಂದು ಇದೀಗ ತಿಳಿಯೋಣ.. ಜೀರ್ಣಾಂಗ ವ್ಯವಸ್ಥೆ :ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿದ್ದರೆ ಅಥವಾ ಜೀರ್ಣಕ್ರಿಯೆ ನಿಧಾನವಾಗಿದ್ದರೆ.. ನೀವು ಬದನೆ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಬದನೆ ನಿಮ್ಮ ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ.. ಅಲರ್ಜಿ ಸಮಸ್ಯೆ :ನಿಮಗೆ ಚರ್ಮದ ಕಿರಿಕಿರಿ ಮತ್ತು ತುರಿಕೆ ಇದ್ದರೆ ನೀವು ಬದನೆ ತಿನ್ನಬಾರದು. ಸಾಮಾನ್ಯವಾಗಿ, ನೀವು ಯಾವುದೇ ಚರ್ಮದ ಅಲರ್ಜಿಯನ್ನು ಹೊಂದಿದ್ದರೂ, ಬದನೆ ತಿನ್ನಬಾರದು ಎಂದು ವೈದ್ಯರು ಸೂಚಿಸುತ್ತಾರೆ.. ಇದು ನಿಮ್ಮ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.. ಖಿನ್ನತೆ :ನೀವು ಖಿನ್ನತೆ ಅಥವಾ ಆತಂಕಕ್ಕಾಗಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಬದನೆ ತಿನ್ನಬಾರದು.. ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಮಾತ್ರೆಯ ಸಾಮರ್ಥ್ಯವನ್ನೂ ಕಡಿಮೆ ಮಾಡುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ರಕ್ತಹೀನತೆ :ನಿಮಗೆ ಸರಿಯಾದ ರಕ್ತ ಪರಿಚಲನೆ ಇಲ್ಲದಿದ್ದರೇ ರಕ್ತಹೀನತೆ ಉಂಟಾಗುತ್ತದೆ. ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ, ನೀವು ಹೆಚ್ಚು ಬದನೆ ಸೇವಿಸಬಾರದು.. ಕಣ್ಣಿನ ಕಿರಿಕಿರಿ :ಅನೇಕ ಜನರು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರು ಬದನೆಯಿಂದ ದೂರವಿರಬೇಕು. ಕಣ್ಣಿನ ತುರಿಕೆ, ಕಿರಿಕಿರಿ, ದೃಷ್ಟಿ ದೋಷ, ಕಣ್ಣಿನ ಸುತ್ತ ಊತ ಮುಂತಾದ ಸಮಸ್ಯೆಗಳಿದ್ದರೆ ಬದನೆಕಾಯಿಯನ್ನು ತಿನ್ನಬಾರದು. ಕಿಡ್ನಿ ಸ್ಟೋನ್ :ಕಿಡ್ನಿ ಸ್ಟೋನ್ ಇರುವವರು ಬದನೆಕಾಯಿಯನ್ನು ಮುಟ್ಟಲೇಬಾರದು. ಬದನೆಯಲ್ಲಿರುವ ಆಕ್ಸಲೇಟ್‌ಗಳು ನಿಮ್ಮ ಕಲ್ಲಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...