: ಪುಂಡಿ ಪಲ್ಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ? : ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ. :ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳೆಯುವ ಪುಂಡಿ ಪಲ್ಲೆ/ಪುಂಡಿ ಸೊಪ್ಪು ಗ್ರಾಮೀಣ ಹಾಗೂ ರೈತಾಪಿ ಜನರ ಮೆಚ್ಚಿನ ತರಕಾರಿ. ಸಾಮಾನ್ಯವಾಗಿ ಗೊಂಗುರ ಸೊಪ್ಪು ಎಂದು ಕರೆಯಲ್ಪಡುವ ಇದನ್ನು ಪುಂಡಿ ಪಲ್ಲೆ, ಪುಂಡಿ ಸೊಪ್ಪು, ಪುಳಚ ಕೀರೆ ಎಂತಲೂ ಕರೆಯುತ್ತಾರೆ. ಪುಂಡಿ ಸೊಪ್ಪಿನಿಂದ ಪಲ್ಯ, ಚಟ್ನಿ ಮತ್ತು ಉಪ್ಪಿನಕಾಯಿ ತಯಾರಿಸುತ್ತಾರೆ. ಮಾಂಸಾಹಾರ ಅಡುಗೆಗಳಲ್ಲೂ ಇದನ್ನು ಬಳಸುತ್ತಾರೆ. ಜೋಳದ ನುಚ್ಚುಅಥವಾ ಹೆಸರು ಕಾಳು ಹಾಕಿ ಅಭಿರುಚಿಗೆ ತಕ್ಕಂತೆ ಪುಂಡಿ ಪಲ್ಲೆಯನ್ನು ಮಾಡಲಾಗುತ್ತದೆ. ಪುಂಡಿ ಪಲ್ಲೆ ಮೊದಲು ಮಣ್ಣಿನ ಗಡಿಗೆಯೊಳಗೆ ಮಾಡಿ ಇಟ್ಟರೆ ಮೂರ್ನಾಲ್ಕು ದಿನವಾದರೂ ಕೆಡುತ್ತಿರಲಿಲ್ಲ. ಜೋಳದ ರೊಟ್ಟಿ/ಖಡಕ್ ಸಜ್ಜಿ ರೊಟ್ಟಿ ಪುಂಡಿ ಪಲ್ಲೆ, ಮೊಸರು, ಕೆಂಪು ಖಾರ, ಉಳ್ಳಾಗಡ್ಡಿ, ಮಿಡಿ ಸೌತೆಕಾಯಿ ಸೇರಿಸಿ ತಿನ್ನುವ ಉತ್ತರ ಕರ್ನಾಟಕದ ಜವಾರಿ ಊಟದ ಮಜಾವೇ ಬೇರೆ ಎಂದು ಹೇಳಬಹುದು. ಇದನ್ನೂ ಓದಿ: ಪುಂಡಿ ಪಲ್ಲೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ. ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪುಂಡಿ ಪಲ್ಲೆ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...