ಮೈಗ್ರೇನ್ ತಲೆನೋವಿಗೆ ತಕ್ಷಣ ಪರಿಹಾರಕ್ಕಾಗಿ ಮನೆಮದ್ದು : ಮೈಗ್ರೇನ್ ತಲೆನೋವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಆದರೆ, ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. :ಮೈಗ್ರೇನ್ ಸಮಸ್ಯೆಯು ನಿಯಮಿತ ತಲೆನೋವಿಗಿಂತ ಭಿನ್ನವಾಗಿರುತ್ತದೆ. ಮೈಗ್ರೇನ್ ಸಂದರ್ಭದಲ್ಲಿ ಧ್ವನಿ ಕಿರಿಕಿರಿ ಎಂದೆನಿಸುವುದರ ಜೊತೆಗೆ, ತೀವ್ರವಾದ ಕಣ್ಣು ನೋವು, ವಾಕರಿಕೆಯಂತಹ ಹಲವು ಲಕ್ಷಣಗಳು ಕಂಡುಬರಬಹುದು. ಕೆಲವು ನೈಸರ್ಗಿಕ ಪರಿಹಾರಗಳು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಮೈಗ್ರೇನ್ ನಿವಾರಣೆಗೆ ಮನೆಮದ್ದು:( ) ತಡೆಗಟ್ಟುವಲ್ಲಿ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ, ಸರಿಯಾದ ಸಮಯಕ್ಕೆ ಆಹಾರ ಸೇವನೆಯನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಹಸಿವಿನಿಂದಾಗಿ ಮೈಗ್ರೇನ್ ಬರುತ್ತಿದ್ದರೆ ಹೆಚ್ಚು ಸಮಯ ಹಸಿವಿನಿಂದ ಇರುವುದನ್ನು ತಪ್ಪಿಸಿ. ಇದನ್ನೂ ಓದಿ- ಶುಂಠಿ:ನಿಮಗೆ( ) ಸಂದರ್ಭದಲ್ಲಿ ವಾಕರಿಕೆ ಸಮಸ್ಯೆ ಕಾಡುತ್ತಿದ್ದರೆ ಈ ಸಂದರ್ಭದಲ್ಲಿ ಶುಂಠಿ ಟೀ ಸೇವನೆಯು ಪ್ರಯೋಜನಕಾರಿ ಎನ್ನಲಾಗುವುದು. ಪುದೀನಾ ಎಣ್ಣೆ:ಮೈಗ್ರೇನ್ ನಿವಾರಣೆಗೆ ( ) ಪುದೀನಾ ಎಣ್ಣೆ ಪ್ರಯೋಜನಕಾರಿ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ. ಪುದೀನಾ ಎಣ್ಣೆಯು ಒತ್ತಡದ ತಲೆನೋವಿಗೆ ಬಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದನ್ನೂ ಓದಿ- ಯೋಗ:ಯೋಗ, ಧ್ಯಾನ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕ. ಅದರಲ್ಲೂ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಯೋಗವನ್ನು ಸೇರಿಸಿ. ಇದರಿಂದಾಗಿ, ಒತ್ತಡ, ಆತಂಕ, ಮುಟ್ಟಿನ ಸಮಯದಲ್ಲಿ ಕಾಡುವ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮೈಗ್ರೇನ್‌ ಸಮಸ್ಯೆ ನಿವಾರಣೆಗೆ ನೈಸರ್ಗಿಕ ವಿಧಾನಗಳು ಪರಿಣಾಮಕಾರಿಯೇ ಆಗಿದ್ದರೂ ಸಹ ನೀವು ಆಗಾಗ್ಗೆ ಮೈಗ್ರೇನ್‌ನಿಂದ ಬಳಲುತ್ತಿದ್ದರೆ, ಪರಿಣಾಮಕಾರಿ ಚಿಕಿತ್ಸಾ ಯೋಜನೆಯನ್ನು ಅಭಿವೃದ್ಧಿಪಡಿಸಲು ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...