ನಿಯಮಿತವಾಗಿ ಈ ಆಯುರ್ವೇದ ಎಲೆಗಳನ್ನು ಬಳಸಿದರೆ ದೇಹದಲ್ಲಿ ಎಂದೂ ಹೆಚ್ಚಾಗಲ್ಲ ಯೂರಿಕ್ ಆಸಿಡ್ : ನೀವು ಅಧಿಕ ಯೂರಿಕ್ ಆಸಿಡ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಆಯುರ್ವೇದದ ಎಲೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು :ದೇಹದಲ್ಲಿ ಪ್ಯೂರಿನ್ ಎಂಬ ಪ್ರಮುಖ ರಾಸಾಯನಿಕವನ್ನು ವಿಭಜಿನೆಗೊಂಡಾಗ ಯೂರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದು ಸಾಮಾನ್ಯವಾಗಿ ರಕ್ತದಲ್ಲಿ ಕರಗಿ ಮೂತ್ರಪಿಂಡಗಳ ಮೂಲಕ ಹಾದುಹೋಗಿ ಮೂತ್ರದ ರೂಪದಲ್ಲಿ ಹೊರಬರುತಡೆ. ಆದರೆ, ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಗೌಟ್ ಸಂಭವಿಸಬಹುದು. ಅಷ್ಟೇ ಅಲ್ಲದೆ, ಕಿಡ್ನಿ ಸ್ಟೋನ್ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾಗದಂತೆ ನಿಗಾವಹಿಸುವುದು ಮುಖ್ಯ. ದ () ಕೆಲವು ಎಲೆಗಳನ್ನು ಬಳಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಹೌದು, ಔಷಧೀಯ ಗುಣಗಳಲ್ಲಿ ಹೇರಳವಾಗಿರುವ ಈ ಎಲೆಗಳನ್ನು ನಿಯಮಿತವಾಗಿ ಬಳಸುತ್ತಾ ಬಂದರೆ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ. ಅಂತಹ ಎಲೆಬಾಳು ಯಾವುವೆಂದರೆ... ನಿಯಮಿತವಾಗಿ ಈ ಆಯುರ್ವೇದ ಎಲೆಗಳನ್ನು ಬಳಸಿದರೆ ದೇಹದಲ್ಲಿ ಎಂದೂ ಹೆಚ್ಚಾಗಲ್ಲ ಯೂರಿಕ್ ಆಸಿಡ್:ತುಳಸಿ:ಹಿಂದೂ ಧರ್ಮದಲ್ಲಿ ಪೂಜನೀಯ ಸಸ್ಯದ ಸ್ಥಾನಮಾನ ಹೊಂದಿರುವ ತುಳಸಿ ಎಲೆಯಲ್ಲಿ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಕಂಡು ಬರುತ್ತದೆ. ಈ ಎಲೆಯನ್ನು ಜಗಿದು ತಿನ್ನುವುದರಿಂದ ದೇಹವು ನಿರ್ವಿಷಗೊಂಡು ಯೂರಿಕ್ ಆಸಿಡ್ ಕಂಟ್ರೋಲ್ ( ) ನಲ್ಲಿರುವಂತೆ ನಿಗಾವಹಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ- ಬೇವಿನ ಎಲೆಗಳು:ಆಯುರ್ವೇದದ ಗಣಿ ಎಂತಲೇ ಕರೆಯಲಾಗುವ( ) ಕಂಡು ಬರುವ ನಿರ್ವಿಶೀಕರಣ ಗುಣಲಕ್ಷಣಗಳು ರಕ್ತ ಶುದ್ಧೀಕರಣಕ್ಕೆ ಹೆಸರುವಾಸಿ ಆಗಿದೆ. ಅಷ್ಟೇ ಅಲ್ಲದೆ, ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶವು ದೇಹದಲ್ಲಿ ಹೆಚ್ಚುವರಿ ಯೂರಿಕ್ ಆಸಿಡ್ ಸಂಗ್ರಹಣೆಯನ್ನು ತಡೆಯುತ್ತದೆ. ಕೊತ್ತಂಬರಿ ಸೊಪ್ಪು:ಭಾರತೀಯ ಪಾಕ ವಿಧಾನಗಳಲ್ಲಿ ಆಹಾರದ ರುಚಿಯನ್ನು ಹೆಚ್ಚಿಸಲು ಹೆಚ್ಚಾಗಿ ಬಳಸಲ್ಪಡುವ ಕೊತ್ತಂಬರಿ ಸೊಪ್ಪು ಆರೋಗ್ಯದ ಗಣಿಯೂ ಹೌದು. ವಾಸ್ತವವಾಗಿ, ಕೊತ್ತಂಬರಿ ಸೊಪ್ಪಿನಲ್ಲಿರುವ ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದನ್ನೂ ಓದಿ- ತ್ರಿಫಲ:ತ್ರಿಫಲ ಹೆಸರೇ ಸೂಚಿಸುವಂತೆ ಇದು ಬಿಭಿತಕಿ, ಅಮಲಕಿ ಮತ್ತು ಹರಿತಕಿ ಎಂಬ ಮೂರು ಹಣ್ಣುಗಳ ಸಂಯೋಜನೆ. ನಿಯಮಿತವಾಗಿ ತ್ರಿಫಲ ಚೂರ್ಣ, ತ್ರಿಫಲ ಪುಡಿ ಬೆರೆಸಿದ ನೀರನ್ನು ಕುಡಿಯುತ್ತಾ ಬಂದರೆ ಇದು ಹೆಚ್ಚಿನ ಗೌಟ್‌ಗೆ ಸಂಬಂಧಿಸಿದ ಉರಿಯೂತವನ್ನು ಕಡಿಮೆ ಮಾಡಿ ದೇಹದಲ್ಲಿ ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ ಏಡು ಹೇಳಲಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...