ಏನೇ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ದರೆ ಮಲಗುವ ಮುನ್ನ ಇದೊಂದು ಕೆಲಸ ಮಾಡಿ ಸಾಕು, ಒಂದೇ ವಾರದಲ್ಲಿ ತಿಳಿಯುವುದು ವ್ಯತ್ಯಾಸ : ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದರೆ ಸಾಕು.ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. :ಸ್ಥೂಲಕಾಯತೆ ಎನ್ನುವ ಸಮಸ್ಯೆಗೆ ವಯಸ್ಸಿನ ಭೇದ ಇಲ್ಲ.ಹಿರಿಯರು ಕಿರಿಯರು ಯಾರಲ್ಲಿ ಬೇಕಾದರೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಾವು ಅನುಸರಿಸುವ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮ ಮಾಡದೇ ಇರುವುದು, ಇವೆಲ್ಲಾ ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.ಬೊಜ್ಜು ಹೆಚ್ಚಾದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.ಬೊಜ್ಜು ಮಧುಮೇಹ,ಅಧಿಕ ರಕ್ತದೊತ್ತಡ,ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ನಿಯಂತ್ರಿಸಲು ಅಥವಾ ಹೆಚ್ಚಿದ ತೂಕವನ್ನು ಇಳಿಸಲು ಜನರು ಮೊದಲು ಮಾಡುವ ಕೆಲಸ ಎಂದರೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು.ಎಷ್ಟೋ ಜನ ಊಟ ತಿಂಡಿಯನ್ನೇ ಬಿಟ್ಟು ಬಿಡುತ್ತಾರೆ. ಇನ್ನು ಕೆಲವರು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ.ಇಷ್ಟೆಲಾ ಮಾಡಿಯೂ ಕೆಲವೊಮ್ಮೆ ಯಾವುದೇ ಪರಿಣಾಮ ಬೀರುವುದಿಲ್ಲ.ಆದರೆ,ಆಹಾರ ಮತ್ತು ಜೀವನಶೈಲಿಯಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಬದಲಾವಣೆ ಅತಿ ಶೀಘ್ರದಲ್ಲಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ : ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ವಿಷಯಗಳು :ರಾತ್ರಿ 7 ಗಂಟೆಯ ಮೊದಲು ಭೋಜನ :ತೂಕ ಇಳಿಸಿಕೊಳ್ಳಬೇಕಾದರೆ ಸಂಜೆ 7 ಗಂಟೆಯ ಮೊದಲು ರಾತ್ರಿಯ ಊಟವನ್ನು ಮಾಡಿ ಮುಗಿಸಬೇಕು.ಸಂಜೆ 7 ಗಂಟೆಯ ನಂತರ ಏನನ್ನೂ ತಿನ್ನಬಾರದು.ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಸುಮಾರು 3 ಗಂಟೆಗಳ ಅಂತರವಿರಬೇಕು ಎನ್ನುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ. ಯಾಕೆಂದರೆ ತಡರಾತ್ರಿ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ.ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಲಘು ಆಹಾರ ಸೇವಿಸಿ :ರಾತ್ರಿ ವೇಳೆ ಸೇವಿಸುವ ಆಹಾರ ಯಾವಾಗಲೂ ಹಗುರವಾಗಿರಬೇಕು.ತೂಕ ಇಳಿಸಿಕೊಳ್ಳಲುಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ.ರಾತ್ರಿ ಹಸಿರು ತರಕಾರಿಗಳು,ಸೂಪ್,ಸಲಾಡ್ ಮತ್ತು ದಾಲ್ ತಿನ್ನಬಹುದು. ಇದನ್ನೂ ಓದಿ : ಚೆನ್ನಾಗಿ ನಿದ್ರೆ ಮಾಡಿ :ತಡವಾಗಿ ಮಲಗುವ ಹವ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ನಾವು ಬೇಗನೆ ಮಲಗಿದಾಗ,ಮೆಲಟೋನಿನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಕಂದು ಕೊಬ್ಬನ್ನು ಸೃಷ್ಟಿಸುತ್ತದೆ. ಈ ಮೂಲಕ ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ರಾತ್ರಿಯ ನಿದ್ರೆಯು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ಕನಿಷ್ಠ 7 ಗಂಟೆಗಳ ಉತ್ತಮ ನಿದ್ರೆ ಅಗತ್ಯ. ಅರಿಶಿನ ಹಾಲು ಕುಡಿಯಿರಿ :ಅರಿಶಿನ ಹಾಲು ತೂಕ ನಷ್ಟಕ್ಕೆ ಅಬಹಲ ಸಹಕಾರಿ, ಮಾತ್ರವಲ್ಲ ರಾತ್ರಿ ಅರಶಿನ ಹಾಲು ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ. ಅರಿಶಿನವು ಥರ್ಮೋಜೆನಿಕ್ ಗುಣಗಳನ್ನು ಹೊಂದಿದ್ದು ಅದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. (ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...