ಥೈರಾಯ್ಡ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರುತ್ತದೆ ಈ ಆಹಾರ !ದಿನಕ್ಕೊಮ್ಮೆ ಸೇವಿಸಿದರೆ ಸಾಕು :ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಥೈರಾಯ್ಡ್‌ನಿಂದಾಗಿ,ಅವರ ದೇಹದಲ್ಲಿನ ಹಾರ್ಮೋನ್ ಮಟ್ಟವು ಬದಲಾಗುತ್ತದೆ. :ಥೈರಾಯ್ಡ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರನ್ನು ಅತಿಯಾಗಿ ಕಾಡುವ ಸಮಸ್ಯೆಯಾಗಿದೆ.ಇದು ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ರೋಗಗಳಲ್ಲಿ ಒಂದಾಗಿದೆ.ಥೈರಾಯ್ಡ್ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗಿದೆ.ಥೈರಾಯ್ಡ್‌ನಿಂದಾಗಿ,ಅವರ ದೇಹದಲ್ಲಿನ ಹಾರ್ಮೋನ್ ಮಟ್ಟವು ಬದಲಾಗುತ್ತದೆ.ಹಾರ್ಮೋನ್ ನಲ್ಲಿ ಆಗುವ ಬದಲಾವಣೆಯಿಂದಾಗಿ ದೇಹ ತೂಕವು ತುಂಬಾ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ ಅಥವಾ ಇಳಿಯಲು ಶುರುವಾಗುತ್ತದೆ. ಥೈರಾಯ್ಡ್ ನಿಯಂತ್ರಣಕ್ಕೆ ಆಹಾರಗಳು :ಅಥವಾ ನಿಯಂತ್ರಣಕ್ಕೆ ಬರಲು ನಾವು ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ.ಅಯೋಡಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳದಿದ್ದರೆ, ಥೈರಾಯ್ಡ್ ಸಮಸ್ಯೆಯು ಗಂಭೀರವಾಗಬಹುದು.ಇನ್ನು ನಿಯಮಿತವಾಗಿ ಕೆಲವು ವಿಶೇಷ ಆಹಾರಗಳನ್ನು ಸೇವಿಸಿದರೆ, ಥೈರಾಯ್ಡ್ ಅನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಥೈರಾಯ್ಡ್ ನಿಯಂತ್ರಣಕ್ಕೆ ಭಾರೀ ಪರಿಣಾಮಕಾರಿ ಎನ್ನುವಂಥಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ. ಇದನ್ನೂ ಓದಿ : ಬೆರಿ ಹಣ್ಣುಗಳು :ವಿವಿಧ ರೀತಿಯ ಬೆರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭಿಸುತ್ತವೆ.ಆಂಟಿಆಕ್ಸಿಡೆಂಟ್‌ಗಳು ಮತ್ತು ಅಯೋಡಿನ್, ಸೆಲೆನಿಯಮ್ ಮತ್ತು ವಿಟಮಿನ್ ಡಿಯಂಥಹ ಪೋಷಕಾಂಶಗಳನ್ನು ಈ ಹಣ್ಣುಗಳಿಂದ ಪಡೆಯಬಹುದು.ಸ್ಟ್ರಾಬೆರಿ,ದ್ರಾಕ್ಷಿ, ನೆಲ್ಲಿ ಕಾಯಿ,ಸೇವಿಸುವ ಮೂಲಕ ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮೊಸರು :ಡೈರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಅಯೋಡಿನ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ.ಇದು ಥೈರಾಯ್ಡ್ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.ವಯಸ್ಕ ವ್ಯಕ್ತಿಗೆ ದಿನಕ್ಕೆ 150mcg ಅಯೋಡಿನ್ ನ ಅಗತ್ಯವಿರುತ್ತದೆ.ಇದಕ್ಕಾಗಿ ದಿನಕ್ಕೆ 2 ಬೌಲ್ ಮೊಸರು ತಿನ್ನಬಹುದು. ನಾನ್ ವೆಜ್ ಆಹಾರಗಳು :ಮಾಂಸಾಹಾರಿ ಆಹಾರವನ್ನು ಸೇವಿಸುವ ಜನರಿಗೆ,ಕೋಳಿ,ಮಾಂಸ,ಮೀನು ಮತ್ತು ಸಮುದ್ರಾಹಾರವು ಥೈರಾಯ್ಡ್ ನಿಯಂತ್ರಣಕ್ಕೆ ಬಹಳ ಮುಖ್ಯ.ಈ ಆಹಾರಗಳಲ್ಲಿ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದನ್ನೂ ಓದಿ : ಹೂಕೋಸು :ಕೆಲವು ಅಧ್ಯಯನಗಳ ಪ್ರಕಾರ, ಕೋಸು ತರಕಾರಿಗಳ ಸೇವನೆಯು ಥೈರಾಯ್ಡ್ ರೋಗಿಗಳಿಗೆ ತುಂಬಾ ಒಳ್ಳೆಯದು.ಹೂಕೋಸು,ಕೋಸುಗಡ್ಡೆ ಮತ್ತು ಎಲೆಕೋಸು ಸೇವಿಸುವ ಮೂಲಕ ಥೈರಾಯ್ಡ್ ಅನ್ನು ನಿಯಂತ್ರಿಸಬಹುದು. ಮೊಟ್ಟೆ :ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದರ ಮೂಲಕ ದೇಹಕ್ಕೆ ಅಗತ್ಯವಿರುವ ಅಯೋಡಿನ್ ಸಿಗುತ್ತದೆ.ಒಂದು ಮೊಟ್ಟೆಯು ಸುಮಾರು 16 ಪ್ರತಿಶತ ಅಯೋಡಿನ್ ಅನ್ನು ದೇಹಕ್ಕೆ ಒದಗಿಸುತ್ತದೆ.ಹಾಗಾಗಿ ಥೈರಾಯ್ಡ್ ರೋಗಿಗಳು ಪ್ರತಿದಿನ ಮೊಟ್ಟೆಯನ್ನು ಸೇವಿಸಬೇಕು. (ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಖಚಿತಪಡಿಸಿಕೊಳ್ಳುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...