ಪೇರಲ ಎಲೆಗೆ ಫುಲ್ ಡಿಮ್ಯಾಂಡ್..! ಒಂದು ಟನ್ ಬೆಲೆ ತಿಳಿದರೆ ಶಾಕ್ ಆಗ್ತೀರಾ.. : ಪೇರಲ ಎಲೆಗಳಲ್ಲಿ ಹೆಚ್ಚಿನ ಆಯುರ್ವೇದ ಗುಣಗಳಿವೆ. ಅದಕ್ಕಾಗಿಯೇ ಈ ಎಲೆಯ ಪುಡಿಯನ್ನು ಹಲವು ರೀತಿಯಲ್ಲಿ ಬಳಸುತ್ತಾರೆ. ದಿನದಿಂದ ದಿನಕ್ಕೆ ಪೇರಲ ಎಲೆಯ ಪುಡಿಗೆ ಬೇಡಿಕೆ ಹೆಚ್ಚುತ್ತಿದ್ದು, ವ್ಯಾಪಾರಿಗಳು ಪೇರಲ ಬೆಳೆ ಬೆಳದ ರೈತರ ಹೊಲದತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ.. :ಈ ಭೂಮಿಯಲ್ಲಿ ನೂರಾರು ಸಾವಿರ ವಿಧದ ಸಸ್ಯಗಳಿವೆ. ಅವುಗಳಲ್ಲಿ 90 ಪ್ರತಿಶತ ಭಾರತದಲ್ಲಿ ಬೆಳೆಯುತ್ತವೆ. ಅದಕ್ಕಾಗಿಯೇ ನಮ್ಮ ದೇಶವು ತುಂಬಾ ವಿಶೇಷವಾಗಿದೆ. ಸಂಜೀವನಿ ಹುಟ್ಟಿದ್ದು ಮಣ್ಣು ನಮ್ಮದು. ಜಗತ್ತನ್ನು ಪೋಷಿಸುವ ಬೇವಿನ ನಾಡು ನಮ್ಮದು. ನಮ್ಮ ಭಾರತವು ಸಾವಿರಾರು ಬಗೆಯ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ನೆಲೆಯಾಗಿದೆ. ಇಂತಹ ದೇಶದಲ್ಲಿ ಪ್ರತಿ ಸಸ್ಯವೂ ಅಮೂಲ್ಯ. ಪ್ರತಿಯೊಂದು ಮರವೂ ಒಂದಿಷ್ಟು ಔಷಧಿ ಗುಣಗಳನ್ನು ಹೊಂದಿವೆ.. ನಿಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಯುವ ಹಲವು ಸಸ್ಯಗಳೂ ಸಹ ಔಷಧ ಗುಣಗಳನ್ನು ಹೊಂದಿರುತ್ತವೆ ಆದರೆ, ಈ ವಿಚಾರ ನಿಮಗೆ ತಿಳಿದಿರುವುದಿಲ್ಲ. ಈ ಪೈಕಿ ಪೇರಲ ಮರವೂ ಒಂದು. ಪೇರಲ ಎಲೆಯ ನಿಜವಾದ ಪ್ರಯೋಜನಗಳು ನಿಮಗೆ ತಿಳಿದಿದೆಯೇ? ಬನ್ನಿ ತಿಳಿಯೋಣ.. ಇದನ್ನೂ ಓದಿ: ಇಂದಿನ ಬ್ಯುಸಿ ಲೈಫ್ ನಲ್ಲಿ.. ನಾವು ಏನು ತಿನ್ನುತ್ತೇವೆ.. ಯಾವಾಗ ತಿನ್ನುತ್ತೇವೆ ಎಂಬುದರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದ ಜೊತೆಗೆ ಕಳಪೆ ಆಹಾರವನ್ನೂ ನಾವು ಇಂದು ಸೇವಿಸುತ್ತಿದ್ದೇವೆ.. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಉತ್ತಮ ಆರೋಗ್ಯವು ಉತ್ತಮ ಜೀವನಶೈಲಿ ಮಾತ್ರವಲ್ಲ, ಸರಿಯಾದ ಆಹಾರವೂ ಸಹ ಅಗತ್ಯ. ನೇರವಾಗಿ ವಿಷಯಕ್ಕೆ ಬರೋಣ.. ಪೇರಲ ಪುಡಿ. ಇದು ಪೇರಲ ಹಣ್ಣಿನ ಪುಡಿ ಅಲ್ಲ. ಅದರ ಏಲೆಯಿಂದ ತಯಾರಿಸಿದ ಪುಡಿ. ಇದನ್ನು ಚಹಾ ಮತ್ತು ಕಷಾಯದೊಂದಿಗೆ ಬೆರೆಸಿ ತಿನ್ನುವುದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ನಮ್ಮ ಪೂರ್ವಜರು ಈ ಪೇರಲ ಎಲೆಗಳನ್ನು ಮೌತ್ ಫ್ರೆಶ್ನರ್ ಆಗಿ ಬಳಸುತ್ತಿದ್ದರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಇದನ್ನೂ ಓದಿ: ಹೀಗೆ ಹಲವಾರು ಔಷಧೀಯ ಗುಣಗಳಿಂದಾಗಿ ಪೇರಲ ಎಲೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಕೆಜಿಗೆ 20ರಿಂದ 50 ರೂಪಾಯಿಗೆ ಈ ಎಲೆ ಮಾರಾಟವಾಗುತ್ತಿವೆ. ಇದನ್ನು ಒಣಗಿಸಿ ಬೆಂಗಳೂರು, ಚೆನ್ನೈ ಮತ್ತು ಇತರ ನಗರಗಳಿಗೆ ರಫ್ತು ಮಾಡಲಾಗುತ್ತಿದೆ. ಪೇರಲ ಎಲೆಗಳ ಪುಡಿಯನ್ನು ಕಷಾಯವಾಗಿ ಉಪಯೋಗಿಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ತುಂಬಾ ಉಪಯುಕ್ತ ಎಂದು ಹಲವು ಸಂಶೋಧನಾ ಸಂಸ್ಥೆಗಳು ಹೇಳುತ್ತವೆ. ಹಾಗಾಗಿಯೇ ಇಷ್ಟೊಂದು ಬೇಡಿಕೆ ಬಂದಿದೆ ಎನ್ನುತ್ತಾರೆ ನರ್ಸರಿ ಮಾಲೀಕರು. ಅಲ್ಲದೆ, ಒಂದು ಟನ್ ಪೇರಲ ಎಲೆಯ ವಾಸ್ತವಿಕ ಬೆಲೆ 37 ಸಾವಿರ ರೂಪಾಯಿ. ಪೇರಲದಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ವೈದ್ಯಕೀಯ ತಜ್ಞರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಯಾವುದೇ ಕಲಬೆರಕೆ ಇಲ್ಲದ ಹಣ್ಣು ಪೇರಲ ಎಂದು ಹೇಳಲಾಗುತ್ತದೆ. ಮಧುಮೇಹ ರೋಗಿಗಳಿಗೆ ಈ ಹಣ್ಣು ಉತ್ತಮ ಔಷಧ. ಪೇರಲ ಎಲೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ಮಾಡಿ ಬೆಳಗ್ಗೆ ಕುಡಿದರೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. (ಸೂಚನೆ:ಪೇರಲ ಎಲೆಯ ಕಷಾಯ ಕುಡಿಯುವ ಮೊದಲು ವೈಧ್ಯರ ಸಲಹೆ ಪಡೆಯಿರಿ..) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...