ಆಕಸ್ಮಿಕವಾಗಿ ನುಂಗಿದ ಚೂಯಿಂಗ್ ಗಮ್ ದೇಹದ ಮೇಲೆ ಏನು ಪರಿಣಾಮ ಬೀರುತ್ತೆ..? : ಮಕ್ಕಳು ಮತ್ತು ವಯಸ್ಕರು ಚೂಯಿಂಗ್ ಗಮ್ ಅಗಿಯಲು ಇಷ್ಟ ಪಡುತ್ತಾರೆ. ಕೆಲವರು ದವಡೆಯ ವ್ಯಾಯಾಮ, ಹಲ್ಲುಗಳ ಬಲ, ಶುಚಿಗೊಳಿಸುವಿಕೆ, ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದನ್ನು ತಿನ್ನುತ್ತಾರೆ, ಇನ್ನು ಕೆಲವರು ಸಮಯ ಕಳೆಯಲು ಇದನ್ನು ತಿನ್ನುತ್ತಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಚೂಯಿಂಗ್ ಗಮ್ ಅನ್ನು ತಮಗೆ ಅರಿವಿಲ್ಲದಂತೆ ನುಂಗಿ ಬಿಡುತ್ತಾರೆ.. :ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮವಿದೆಯೇ? ದೇಹದ ಭಾಗಗಳ ಮೇಲೆ ಇದು ಯಾವುದಾದರು ಪರಿಣಾಮ ಬಿರುತ್ತದೆಯೇ? ಎಂಬುದು ಹಲವರಿಗೆ ಕಾಡುವ ಪ್ರಶ್ನೆ. ಈಗ ನಾವು ಚೂಯಿಂಗ್ ಗಮ್ ನುಂಗುವುದರಿಂದ ಉಂಟಾಗುವ ಹಾನಿಯನ್ನು ತಿಳಿಯೋಣ. ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಅದು ಹೊಟ್ಟೆಯ ಮೂಲಕ ಹಾದುಹೋದ ನಂತರ ಕರುಳನ್ನು ನಿರ್ಬಂಧಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಚೂಯಿಂಗ್ ಗಮ್ ಸುಮಾರು 7 ವರ್ಷಗಳ ಕಾಲ ಹೊಟ್ಟೆಯಲ್ಲಿ ಇರುತ್ತದೆ ಎಂಬ ಮಾತಿದೆ. ಆದಾಗ್ಯೂ, ಈ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚ್ಯೂಯಿಂಗ್ ಗಮ್ ಜೀರ್ಣವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ.. ಇದು ಕರಗದ ವಸ್ತುವಿನಿಂದ ಮಾಡಲ್ಪಟ್ಟಿದೆ. ಆದರೂ, ಅದನ್ನು ನುಂಗಿದರೆ, ಅದು ಕೆಲವು ಗಂಟೆಗಳಲ್ಲಿ ಅಥವಾ ಕೆಲವು ದಿನಗಳ ನಂತರವೂ ಮಲದಲ್ಲಿ ಸ್ವತಃ ಹಾದುಹೋಗುತ್ತದೆ ಎಂದು ಹೇಳಲಾಗುತ್ತದೆ. ಚೂಯಿಂಗ್ ಗಮ್ ಅನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಚೂಯಿಂಗ್ ಗಮ್‌ ಅನ್ನು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...