2024 : ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್ ನಿಯಮಗಳಲ್ಲಿ ಬದಲಾವಣೆ, ನಿಮ್ಮ ಜೇಬಿನ ಮೇಲೆ ಡೈರೆಕ್ಟ್ ಎಫೆಕ್ಟ್! 2024 : ಪ್ರತಿ ತಿಂಗಳು ಮೊದಲ ದಿನದಂದು ಕೆಲವು ನಿಯಮಗಳು ಬದಲಾಗುತ್ತವೆ. ಈ ಬದಲಾವಣೆಗಳು ನಿಮ್ಮ ಬಜೆಟ್‌ನ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ ಈ ನಿಯಮಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. 2024 :ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು ಇಂದಿನಿಂದ ಎಂದರೆ ಆಗಸ್ಟ್ 01, 2024ರಿಂದ ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್, ಗೂಗಲ್ ಮ್ಯಾಪ್ ನಿಯಮಗಳಲ್ಲಿ ಭಾರೀ ಬದಲಾವಣೆಗಳು ಜಾರಿಗೆ ಬರಲಿವೆ. ಇದಲ್ಲದೇ, ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ. ಇವೆಲ್ಲ ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬಿರುವುದರಿಂದ ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯುವುದು ಮುಖ್ಯವಾಗಿದೆ. ( 2024 ). ಇದರಿಂದ ಸಾರ್ವಜನಿಕರ ಬಜೆಟ್ () ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ನೋಡುವುದಾದರೆ... * ಎಲ್‌ಪಿ‌ಜಿ ಬೆಲೆಗಳು ( ):ಪ್ರತಿ ತಿಂಗಳ ಮೊದಲನೆಯ ದಿನಪರಿಷ್ಕರಿಸಲಾಗುತ್ತದೆ. ಕೇಂದ್ರ ಬಜೆಟ್ ( ) ಮಂಡನೆ ವೇಳೆ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿರುವುದರಿಂದ ಆಗಸ್ಟ್‌ನಲ್ಲಿ, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷಿಸಲಾಗಿದೆ. ಇದನ್ನೂ ಓದಿ- * ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳು ( ):ಆಗಸ್ಟ್ 01ರಿಂದ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ( ) ಸಂಬಂಧಿಸಿದಂತೆ ಪ್ರಮುಖ ನಿಯಮಗಳು ಬದಲಾಗಲಿವೆ. ಇಂದಿನಿಂದ , , ಮತ್ತು ನಂತಹ ಥರ್ಡ್-ಪಾರ್ಟಿ ಪಾವತಿ ಅಪ್ಲಿಕೇಶನ್‌ಗಳ ಮೂಲಕ ನಡೆಸಲಾಗುವ ವಹಿವಾಟುಗಳಿಗೆ 1% ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ₹15,000 ಕ್ಕಿಂತ ಕಡಿಮೆ ಮೊತ್ತದ ಇಂಧನ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಬಾಕಿ ಇರುವ ಬ್ಯಾಲೆನ್ಸ್‌ನ ಆಧಾರದ ಮೇಲೆ ವಿಳಂಬ ಪಾವತಿ ಶುಲ್ಕಗಳು ಈಗ ₹100 ರಿಂದ ₹1,300 ವರೆಗೆ ಇರುತ್ತದೆ. * ಇಂದಿನಿಂದ ಬದಲಾಗಲಿವೆ ಫಾಸ್ಟ್‌ಟ್ಯಾಗ್ ನಿಯಮಗಳು ( ):ಆಗಸ್ಟ್ 1 ರಿಂದ ಫಾಸ್ಟ್‌ಟ್ಯಾಗ್ () ಸಂಬಂಧಿತ ಹೊಸ ನಿಯಮಗಳು ಜಾರಿಯಾಗಲಿವೆ. ಟೋಲ್ ಬೂತ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ- ಎನ್‌ಪಿ‌ಸಿ‌ಐ ಇಂದಿನಿಂದ ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ಅಪ್ಡೇಟ್ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಿದೆ. * ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ನಿಯಮ ( ):ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮಾರ್ಗಸೂಚಿ ಪ್ರಕಾರ, ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಅಕ್ಟೋಬರ್ 31ರೊಳಗೆ ಕೆ‌ವೈ‌ಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇದನ್ನೂ ಓದಿ- * ಗೂಗಲ್ ಮ್ಯಾಪ್ ಶುಲ್ಕ ( ):ಇಂದಿನಿಂದ ಭಾರತದಲ್ಲಿ ಗೂಗಲ್ ಮ್ಯಾಪ್ ( ) ಶುಲ್ಕಗಳು ಕಡಿಮೆಯಾಗಲಿವೆ. ಗೂಗಲ್ ಮ್ಯಾಪ್ ದರ ಪರಿಷ್ಕರಿಸಿರುವ ಕಂಪನಿಯು 70% ರಷ್ಟು ಶುಲ್ಕವನ್ನು ಕಡಿಮೆ ಮಾಡುತ್ತಿದೆ. ಆದಾಗ್ಯೂ, ಈ ಬದಲಾವಣೆಯು ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...