ಮಾವಿನ ಹಣ್ಣು ತಿನ್ನುವುದರ 05 ಪ್ರಮುಖ ಪ್ರಯೋಜನಗಳು : ಮಾವಿನ ಹಣ್ಣಿನ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಮಾವಿನ ಹಣ್ಣು ತಿನ್ನಲು ಎಷ್ಟು ರುಚಿಯೋ ಇದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. :ಹಣ್ಣುಗಳ ರಾಜ ಎಂತಲೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಬಹುತೇಕ ಎಲ್ಲರ ಪ್ರಿಯವಾದ ಹಣ್ಣು ಎಂತಲೇ ಹೇಳಬಹುದು. ಮಾವಿನಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಮತ್ತು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಮಾವಿನ ಹಣ್ಣು ತಿನ್ನಲು ತಿನ್ನಲು ರುಚಿಕರವಷ್ಟೇ ಅಲ್ಲ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭ್ಯವಾಗುತ್ತದೆ. ಮಾವಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿರುವ 5 ಪ್ರಮುಖ ಪ್ರಯೋಜನಗಳೆಂದರೆ...*ಹೃದಯದ ಆರೋಗ್ಯ:() ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಕಣ್ಣಿನ ಆರೋಗ್ಯ:ಮಾವಿನ ಹಣ್ಣಿನಲ್ಲಿ( ) ಸಮೃದ್ಧವಾಗಿದ್ದು ಇದರ ನಿಯಮಿತ ಸೇವನೆಯು ದೃಷ್ಟಿಯನ್ನು ಸುಧಾರಿಸುತ್ತದೆ. ಇದನ್ನೂ ಓದಿ- ತೂಕ ನಷ್ಟ:ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸಲು ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಕಾರಿ ಆಗಿದೆ. ಹಾಗಾಗಿ, ಹಿತಮಿತವಾದ ಮಾವಿನ ಹಣ್ಣಿನ ಸೇವನೆಯು ತೂಕ ನಷ್ಟವನ್ನು ಸಹ ಪ್ರಚೋದಿಸುತ್ತದೆ. ಮೆದುಳಿನ ಆರೋಗ್ಯ:ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಬಿ6 ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನ್ಯೂರೋಟ್ರಾನ್ಸ್‌ಮಿಟರ್‌ಗಳ ಉತ್ಪಾದನೆಗೆ ಸಹಾಯ ಮಾಡುವ ಮೂಲಕ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನೂ ಓದಿ- ಚರ್ಮದ ಆರೋಗ್ಯ:ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶವೂ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಆಗಿದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...