ʼಜೋಳದ ರೊಟ್ಟಿʼ ಆರೋಗ್ಯದ ಗುಟ್ಟೇನು ಗೊತ್ತು ಪಿಜ್ಜಾ, ಬರ್ಗರ್ ತಿನ್ನುವ ಮಂದಿಗೆ..! ತಿಳ್ಕೋರಿ.. ತಿನ್ನಿ.. : ಜೋಳದ ರೊಟ್ಟಿ ಆರೋಗ್ಯಕರ ಮಾತ್ರವಲ್ಲದೆ ರುಚಿಕರವೂ ಹೌದು.. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದರ ಆರೋಗ್ಯ ಪ್ರಯೋಜನಗಳ ಕುರಿತು ಹೆಚ್ಚಾಗಿ ಹಳ್ಳಿ ಮಂದಿಗೆ ಗೊತ್ತು. ಪಿಜ್ಜಾ ಬರ್ಗರ್‌ ತಿನ್ನುವ ಸಿಟಿ ಮಂದಿ ಅಷ್ಟು ಗೊತ್ತಿಲ್ಲ... :ಜೋಳದ ರೊಟ್ಟಿ ಜೋಳದ ಹಿಟ್ಟಿನಿಂದ ಮಾಡಲಾಗುತ್ತದೆ. ಇದು ಕರ್ನಾಟಕ, ತೆಲುಗು ರಾಜ್ಯಗಳು ಮತ್ತು ಮಹಾರಾಷ್ಟ್ರದಂತಹ ಪ್ರದೇಶಗಳಲ್ಲಿ ಬಹಳ ಜನಪ್ರಿಯ ದೈನದಿಂನ ಆಹಾರವಾಗಿದೆ. ಮುಸುಕಿನ ಜೋಳ ಪೌಷ್ಟಿಕ ಆಹಾರಗಳಲ್ಲಿ ಒಂದು. ಇದು ಫೈಬರ್, ಪ್ರೋಟೀನ್ಗಳು, ವಿಟಮಿನ್‌ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಮಧುಮೇಹ ನಿಯಂತ್ರಣ: ಜೋಳದಲ್ಲಿರುವ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಕ್ಕೆ ಈ ಆಹಾರ ತುಂಬಾ ಒಳ್ಳೆಯದು. ಅಲ್ಲದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೆಚ್ಚು ಕಾಲ ಹಸಿವಾಗದಂತೆ ತಡೆಯುತ್ತದೆ. ತೂಕ ನಷ್ಟಕ್ಕೆ ತುಂಬಾ ಸಹಾಯಕಾರಿ. ಇದನ್ನೂ ಓದಿ: ಜೋಳದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೂ ಇದರಲ್ಲಿರುವ ನಾರಿನಂಶವು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮುಸುಕಿನ ಜೋಳದಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಜೋಳದಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ, ಸುಕ್ಕುಗಳನ್ನು ತಡೆಯುತ್ತದೆ. ಇದರಿಂದ ನೈಸರ್ಗಿಕವಾಗಿ ಅಂದವಾಗಿ ಕಾಣಬಹುದು.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...