: ಕಾಲುಂಗುರ ಧರಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ? : ಜ್ಯೋತಿಷ್ಯದ ಪ್ರಕಾರ, ಕಾಲ್ಬೆರಳ ಉಂಗುರದ ಬೆಳ್ಳಿಯ ಲೋಹವು ಚಂದ್ರನು ದೇಹದ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ವಿವಾಹಿತ ಮಹಿಳೆಯರಲ್ಲಿ ಇದು ಒತ್ತಡ ನಿವಾರಣೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ :ಕಾಲುಂಗುರವನ್ನು ಧರಿಸುವುದು ಹಿಂದೂ ಧರ್ಮದ ಸಂಸ್ಕೃತಿ ಮಾತ್ರವಲ್ಲ, ಇದರಿಂದ ಮಹಿಳೆಯರಿಗೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಕಾಲುಂಗುರಗಳನ್ನು ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಹಿಡಿದು ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುವವರೆಗೆ ಪ್ರಯೋಜನಗಳಿವೆ. ಕಾಲುಂಗರ ಧರಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.... ಇದನ್ನೂ ಓದಿ: ಕಾಲುಂಗುರ ಧರಿಸುವುದರ ಪ್ರಯೋಜನಗಳು ● ಕಾಲಿನ ೨ನೇ ಬೆರಳಿನ ನರ ಮತ್ತು ಸ್ತ್ರೀಯಕ್ಕೆ ನೇರ ಸಂಪರ್ಕ ಹೊಂದಿರುತ್ತದೆ ಎನ್ನಲಾಗುತ್ತದೆ.● ಕಾಲುಂಗುರ ಧರಿಸುವುದರಿಂದ ಮುಟ್ಟು ನಿಯಮಿತವಾಗಿ ಆಗುತ್ತದೆ ಮತ್ತು ಗರ್ಭಕೋಶದ ಆರೋಗ್ಯಕ್ಕೂ ಹಿತಕರ.● ಕಾಲುಂಗುರ ಧರಿಸುವುದರಿಂದ ಗರ್ಭಾಶಯ ಮತ್ತು ಮಹಿಳೆಯ ಋತುಚಕ್ರವನ್ನು ಸಮತೋಲನಗೊಳಿಸುವುದರಿಂದ ಗರ್ಭಧರಿಸಲು ಮಹಿಳೆಯರಿಗೆ ಸಹಾಯ ಮಾಡುತ್ತದೆ.● ಬೆಳ್ಳಿ ಎಲ್ಲಾ ಲೋಹಗಳಿಗಿಂತಲೂ ಹೆಚ್ಚು ಉಷ್ಣ ವಾಹಕತೆಯನ್ನು ಹೊಂದಿದ್ದು, ದೇಹದಲ್ಲಿನ ಅಧಿಕ ಉಷ್ಣತೆಯನ್ನು ಇದು ತಗ್ಗಿಸುತ್ತದೆ.● ಬೆಳ್ಳಿ ಕಾಲುಂಗುರ ಧರಿಸುವುದರಿಂದ ವಿವಾಹಿತ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ.● ೨ನೇ ಬೆರಳಿಗೆ ಮಸಾಜ್ ಮಾಡುವ ಮೂಲಕ ಸ್ತ್ರೀರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು● ಬೆಳ್ಳಿಯ ಕಾಲುಂಗುರವನ್ನು ಹೆಚ್ಚು ಬಳಕೆ ಮಾಡುವುದು ಏಕೆಂದರೆ ಇದು ಭೂಮಿಯಿಂದ ಮತ್ತು ದೇಹದಿಂದ ಉತ್ಪತ್ತಿಯಾಗುವ ಉಷ್ಣ ಶಕ್ತಿಯನ್ನು ಹೀರಿಕೊಳ್ಳುತ್ತದೆ● ವಿವಾಹಿತ ಮಹಿಳೆಯರಲ್ಲಿ ಇದು ಒತ್ತಡ ನಿವಾರಣೆಯಾಗುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ● ಜ್ಯೋತಿಷ್ಯದ ಪ್ರಕಾರ, ಕಾಲ್ಬೆರಳ ಉಂಗುರದ ಬೆಳ್ಳಿಯ ಲೋಹವು ಚಂದ್ರನು ದೇಹದ ಮೇಲೆ ಬೀರುವ ಪರಿಣಾಮಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.● ಚಂದ್ರನು ಮನಸ್ಸು ಮತ್ತು ಹೃದಯವನ್ನು ಶಾಂತಗೊಳಿಸುತ್ತಾನೆ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ನೀವು ಶಾಂತವಾಗಿದ್ದರೆ ನಿಮ್ಮ ರಕ್ತದೊತ್ತಡವನ್ನು ಸಹ ನೀವು ನಿಯಂತ್ರಣದಲ್ಲಿಟ್ಟುಕೊಳ್ಳುತ್ತೀರಿ.● ಕಾಲ್ಬೆರಳವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...