ಇನ್ನೂ ಬಂದಿಲ್ಲವೇ ? ಹೀಗೆ ಮಾಡಿ ನೋಡಿ, ತಕ್ಷಣ ಖಾತೆಗೆ ಬೀಳುವುದು ರಿಫಂಡ್ ಮೊತ್ತ ಐಟಿಆರ್ ಸಲ್ಲಿಸಿದ್ದರೂ ಇನ್ನೂ ಅನೇಕರಿಗೆ ರಿಫಂಡ್ ಆಗಿಲ್ಲ. ಒಂದು ವೇಳೆ ರಿಫಂಡ್ ಆಗದೇ ಹೋದಲ್ಲಿ ನೀವು ಮಾಡಬೇಕಾದ ಕೆಲಸ ಇದು . :ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರವೂ ಇನ್ನೂ ರಿಫಂಡ್ ಖಾತೆಗೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಹೀಗೆ ಸುಮ್ಮನೆ ಚಿಂತಿಸುವ ಬದಲು ಇನ್ನೂ ರಿಫಂಡ್ ಯಾಕೆ ಆಗಿಲ್ಲ ಎಂದು ತಿಳಿದುಕೊಳ್ಳುವ ಅಗತ್ಯವಿದೆ.ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2024 ಆಗಿತ್ತು.ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸಿದವರಿಗೆ ಆದಾಯ ತೆರಿಗೆ ಇಲಾಖೆಯಿಂದ ರಿಫಂಡ್ ಕೂಡಾ ಆಗಿದೆ.ಇದೀಗ ಇನ್ನೂ ಅನೇಕ ತೆರಿಗೆದಾರರು ಮರುಪಾವತಿಗಾಗಿ ಕಾಯುತ್ತಿದ್ದಾರೆ. ರಿಫಂಡ್ ಗಾಗಿ ಎಷ್ಟು ಸಮಯ ಬೇಕಾಗುತ್ತದೆ ? :ಸರಿಯಾದ ಸಮಯಕ್ಕೆಸಲ್ಲಿಸಿದ್ದರೂ ಮರುಪಾವತಿ ವಿಳಂಬವಾಗುತ್ತಿದೆ ಎಂದರೆ ನೀವು ನೀಡಿರುವ ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿರಬಹುದು. ಅಥವಾ ತಪ್ಪು ಆದಾಯ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಿರಬಹುದು.ಈಗಾಗಲೇ ಪಾವತಿಸಿದ ಮೊತ್ತವು ನಿಜವಾದ ಹೊಣೆಗಾರಿಕೆಗಿಂತ ಹೆಚ್ಚಿದ್ದಾಗ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮರುಪಾವತಿ ನೀಡಲಾಗುತ್ತದೆ. ಎಲ್ಲಾ ಕಡಿತಗಳು ಮತ್ತು ವಿನಾಯಿತಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಆದಾಯ ತೆರಿಗೆ ಇಲಾಖೆ ತೆರಿಗೆ ಮರುಪಾವತಿಯನ್ನು ಲೆಕ್ಕಹಾಕಲಾಗುತ್ತದೆ. ಸಾಮಾನ್ಯವಾಗಿ, ಆದಾಯ ತೆರಿಗೆ ಮರುಪಾವತಿ ಹಣವನ್ನು 30 ರಿಂದ 45 ದಿನಗಳಲ್ಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.ಕೆಲವು ಸಂದರ್ಭಗಳಲ್ಲಿ, ತೆರಿಗೆದಾರರು ಎರಡು ವಾರಗಳಲ್ಲಿಯೂ ತೆರಿಗೆ ಮರುಪಾವತಿಯನ್ನು ಪಡೆಯುತ್ತಾರೆ. ಇದನ್ನೂ ಓದಿ: (ಐಟಿಆರ್) ಸಲ್ಲಿಸಿದ ನಂತರ ಅದನ್ನು ವೆರಿಫೈ ಮಾಡಬೇಕಾಗುತ್ತದೆ. ನಂತರ ಅದನ್ನು ಇಲಾಖೆಯು ಪ್ರಕ್ರಿಯೆಗೊಳಿಸುತ್ತದೆ.ಒಂದು ವೇಳೆ, ನೀವು ಸಲ್ಲಿಸಿದ ದಾಖಲೆ ಸರಿಯಾಗಿದೆ ಎಂದಾದರೆ ನಿಮಗೆ ಸೆಕ್ಷನ್ 143(1) ಅಡಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ.ಇನ್ಕಮ್ ಟ್ಯಾಕ್ಸ್ ರಿಫಂಡ್ ನಿಮಗೆ ಬರುವುದಾದರೆ ಬಡ್ಡಿ ಸಮೇತ ಆ ಹಣವನ್ನು ನಿಮ್ಮ ಖಾತೆಗೆ ಹಾಕಲಾಗುವುದು. ಒಂದು ವೇಳೆ 30 ರಿಂದ 45 ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಬಾರದೇ ಹೋದಲ್ಲಿ ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮರುಪಾವತಿಯ ಮರು ವಿತರಣೆಗೆ ವಿನಂತಿ:ತೆರಿಗೆದಾರರಿಂದ ಆಗಿರುವ ತಪ್ಪಿನಿಂದಾಗಿ ಮರುಪಾವತಿಯಲ್ಲಿ ವಿಳಂಬವಾಗಬಹುದು.ಅಥವಾ ಇಲಾಖೆಯ ಕಡೆಯಿಂದ ಏನಾದರೂ ಸಮಸ್ಯೆಗಳು ಎದುರಾದಲ್ಲಿ ಕೂಡಾ ಮರುಪಾವತಿ ವಿಳಂಬವಾಗಬಹುದು.ನೀವು ಐಟಿಆರ್ ಸಲ್ಲಿಸಿ ಹೆಚ್ಚು ಸಮಯ ಆಗಿದ್ದರೆ ಮರುಪಾವತಿಯನ್ನು ಮರು-ವಿತರಣೆಗಾಗಿ ವಿನಂತಿಸಬಹುದು. ಇದನ್ನೂ ಓದಿ: ರಿಫಂಡ್ ಅನ್ನು ರೀ ಇಶ್ಯೂ ಮಾಡಲು ವಿನಂತಿಸುವುದು ಹೇಗೆ ? :೧.ಮೊದಲನೆಯದಾಗಿ ಫೈಲಿಂಗ್ ಪೋರ್ಟಲ್‌ಗೆ ಹೋಗಿ ಮತ್ತು ನಿಮ್ಮ ಬಳಕೆದಾರ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.೨.ಇದರ ನಂತರ ‘’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ‘ ’ ಕ್ಲಿಕ್ ಮಾಡಿ.೩.ಇಲ್ಲಿ ಕ್ಲಿಕ್ ಮಾಡುವುದರಿಂದ ಹೊಸ ವೆಬ್‌ಪುಟ ತೆರೆಯುತ್ತದೆ. ಇಲ್ಲಿ ನೀವು ' 'ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರ ನಂತರ, ರಿಫಂಡ್ ಅನ್ನು ರೀ ಇಶ್ಯೂಗೆ ವಿನಂತಿಸಲು ಬಯಸುವ ಅನ್ನು ಆಯ್ಕೆಮಾಡಿ.ಇದು ಪೂರ್ಣಗೊಂಡ ನಂತರ, ಕ್ಲಿಕ್ ಮಾಡಿ.೪.ನೀವು ಮರುಪಾವತಿಯನ್ನು ತೆಗೆದುಕೊಳ್ಳಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿ.೫. ಇದರ ನಂತರ ಅನ್ನು ಕ್ಲಿಕ್ ಮಾಡಿ.೬. ವೆರಿಫಿಕೆಶನ್ ವಿಧಾನದಿಂದ ಆಧಾರ್ , ಅಥವಾ ಅನ್ನು ಆಯ್ಕೆ ಮಾಡಿ.೭. ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಅದನ್ನು ಪ್ರಕ್ರಿಯೆಗೊಳಿಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...