ಮದ್ಯಪ್ರಿಯರಿಗೆ ಶಾಕ್ :ಬಿಯರ್ ಬೆಲೆ ಮತ್ತೆ ಏರಿಕೆ ! ಈ ಬಾರಿ ಜೇಬಿಗೆ ಎಷ್ಟು ಹೆಚ್ಚು ಹೊರೆ ತಿಳಿದುಕೊಳ್ಳಿ ! ಮದ್ಯ ಪ್ರಿಯರಿಗೆ ಮತ್ತಿನದು ಶಾಕ್ ಸಿಕ್ಕಿದೆ. ಮತ್ತೆ ಬಿಯರ್ ಬೆಲೆಯಲ್ಲಿ ಏರಿಕೆಯನ್ನು ಕಂಪನಿಗಳು ಪ್ರಕಟಿಸಿವೆ. ಈ ನಿಟ್ಟಿನಲ್ಲಿ ಕಳೆದ ೧೭ ತಿಂಗಳಲ್ಲಿ ಬಿಯರ್ ಬೆಲೆ ೬೦ ರೂಪಾಯಿಯಷ್ಟು ಏರಿಕೆ ಕಂಡಿದೆ. ಬೆಂಗಳೂರು :ಕಳೆದ 17 ತಿಂಗಳಲ್ಲಿ ಐದನೇ ಸಲ ಬಿಯರ್ ಬೆಲೆ ಏರಿಕೆಯಾಗಿದೆ. ಇದೀಗ ಮತ್ತೆ 10ರಿಂದ 20 ರೂಪಾಯಿವರೆಗೆ ಬಿಯರ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಬಿಯರ್ ದರ ಏರಿಕೆ ಮಾಡಲು ಕಂಪನಿಗಳು ತೀರ್ಮಾನ ಮಾಡುವ ಮೂಲಕ ಬಿಯರ್ ಪ್ರಿಯರಿಗೆ ಶಾಕ್ ನೀಡಿದೆ. ಒಂದು ತಿಂಗಳ ಹಿಂದೆಯಷ್ಟೆಮಾಡಿದ್ದ ಕಂಪನಿಗಳು ಹೊಸ ದರ ಜಾರಿಗೆ ತಂದಿತ್ತು. ಇದೀಗ ಮತ್ತೆ ಕಚ್ಚಾ ವಸ್ತುಗಳ ದರ ಏರಿಕೆ ಕಾರಣವೊಡ್ಡಿ ದರ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿವೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಯರ್ ದರ ಸುಮಾರು 60 ರೂಪಾಯಿವರೆಗೆ ಏರಿಕೆಯಾಗಿದೆ. ಇದನ್ನೂ ಓದಿ : ಮದ್ಯ ಪ್ರಿಯರಿಗೆ ಬಿಯರ್ ಬರೆ :ರಾಜ್ಯದಲ್ಲಿನಂತರ ಕಾಂಗ್ರೆಸ್‌ ಸರಕಾರ ಬಿಯರ್‌ ಮೇಲೆ ಶೇ.20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಇದರಿಂದ ಬಿಯರ್ ದರ ಅಂದು ಏರಿಕೆಯಾಗಿತ್ತು. ನಂತರ ಬಿಯರ್‌ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್‌ ಮೇಲೆ ಕನಿಷ್ಠ 10 ರೂ.ವರೆಗೆ ಏರಿಕೆ ಮಾಡಿದ್ದವು. ಇದಾದ ನಂತರ ಮತ್ತೆ ಸರ್ಕಾರ ಬಿಯರ್ ಮೇಲಿನ ಸುಂಕ‌ ಹೆಚ್ಚಳ ಮಾಡಿತ್ತು. ಈ ಹಿನ್ನೆಲಯಲ್ಲಿ ಫೆಬ್ರವರಿಯಲ್ಲಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್‌ ಬೆಲೆ ಸುಮಾರು 60 ವರೆಗೆ ಹೆಚ್ಚಳವಾದಂತಾಗಿದೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...