ಮುಖೇಶ್ ಅಂಬಾನಿಯ ಆಂಟಿಲಿಯಾಕ್ಕಿಂತ ದುಬಾರಿ ಈ ಮನೆ ! ಇದು ಭಾರತೀಯ ಮಹಿಳೆಗೆ ಸೇರಿದ ಮನೆ ! ಯಾರು ಆ ಸಿರಿವಂತೆ ? :ಈ ಮನೆ ಮುಖೇಶ್ ಅಂಬಾನಿಯ ಆಂಟಿಲಿಯಾಗಿಂತಲೂ ದೊಡ್ಡದು. ಇನ್ನೊಇನ್ದು ಮುಖ್ಯ ಸಂಗತಿ ಎಂದರೆ ಇದರ ಒಡತಿ ಕೂಡಾ ಭಾರತೀಯಳೆ. :ಗುಜರಾತ್‌ನಲ್ಲಿರುವ ಬೃಹತ್ ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್‌ನ ಪ್ರಸಿದ್ಧ ಬಕಿಂಗ್‌ಹ್ಯಾಮ್ ಅರಮನೆಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಇದನ್ನು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ.ಲಕ್ಷ್ಮಿ ವಿಲಾಸ್ ಅರಮನೆಯು ಬರೋಡಾದ ಗಾಯಕ್ವಾಡ್ ಕುಟುಂಬದ ಒಡೆತನದಲ್ಲಿದೆ.ಹಿಂದೆ ಬರೋಡ ಗಾಯಕ್ವಾಡ್ ಅಧೀನದಲ್ಲಿತ್ತು.ಇಂದಿಗೂ ಇವರು ಬರೋಡಾದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.ಕುಟುಂಬದ ಮುಖ್ಯಸ್ಥ ಎಚ್‌ಆರ್‌ಹೆಚ್ ಸಮರ್ಜಿತ್ ಸಿಂಗ್ ಗಾಯಕ್ವಾಡ್,ವಾಂಕನೇರ್ ರಾಜಮನೆತನಕ್ಕೆ ಸೇರಿದ ರಾಧಿಕಾ ರಾಜೇ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ. ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ :ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ ಏಕೆಂದರೆ ಗಾತ್ರದಲ್ಲಿ ಇದು ಬ್ರಿಟನ್‌ನ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದಾಗಿದೆ.. ಪ್ರಕಾರ,ಲಕ್ಷ್ಮಿ ವಿಲಾಸ್ ಅರಮನೆಯು 3,04,92,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಆದರೆ,ಬಕಿಂಗ್ಹ್ಯಾಮ್ ಅರಮನೆಯು 8,28,821 ಚದರ ಅಡಿಗಳನ್ನು ಹೊಂದಿದೆ. ಗಮನಿಸಬೇಕಾದ ಅಂಶವೆಂದರೆ,ವಿಶ್ವದ ಅತ್ಯಂತ ದುಬಾರಿ ಮನೆಯಾದ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಇರುವುದು 48,780 ಚದರ ಅಡಿಗಳು. ಅದರ ಬೆಲೆ ಸುಮಾರು 15,000 ಕೋಟಿ ಎಂದು ಹೇಳಲಾಗುತ್ತದೆ.ಆದರೆ ಲಕ್ಷ್ಮಿ ವಿಲಾಸ ಅರಮನೆ ಮಾರು ಒಂದೂವರೆ ಲಕ್ಷ ಪೌಂಡ್ ವೆಚ್ಚದಲ್ಲಿ 1890ರಲ್ಲಿ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ರವರು 170 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಈ ಅರಮನೆಯನ್ನು ನಿರ್ಮಿಸಿದರು. ಇದನ್ನೂ ಓದಿ: ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಓದಿರುವ ರಾಧಿಕಾ :ಜುಲೈ 19, 1978 ರಂದು ಜನಿಸಿದಅವರ ತಂದೆ ಡಾ ಎಂಕೆ ರಂಜಿತ್ ಸಿಂಗ್ ಝಾಲಾ ತಮ್ಮ ಪಟ್ಟವನ್ನು ತ್ಯಜಿಸಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ ಝಾಲಾ ರಾಜಮನೆತನದ ಮೊದಲ ಸದಸ್ಯರಾಗಿದ್ದರು.ರಾಧಿಕಾ ರಾಜೇ ಗಾಯಕ್ವಾಡ್ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.2002ರಲ್ಲಿ ಮಹಾರಾಜ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು ಅವರು ಪತ್ರಕರ್ತೆಯಾಗಿ ಕೆಲಸ ಮಾಡಿದರು. ದೆಹಲಿಯಲ್ಲಿ ಸಾಧಾರಣ ಜೀವನ :ರಾಧಿಕಾ ರಾಜೆ ಅವರು ರಾಜಮನೆತನದಲ್ಲಿ ಜನಿಸಿದರೂ ದೆಹಲಿಯಲ್ಲಿ ಅವರ ಜೀವನ ತುಂಬಾ ಸಾಮಾನ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಶಾಲಾ ಬಸ್‌ಗಳಲ್ಲಿ ಶಾಲೆಗೆ ಹೋಗುತ್ತಿದ್ದೆ ಎಂದು ರಾಧಿಕಾ ರಾಜೆ ನೆನಪಿಸಿಕೊಳ್ಳುತ್ತಾರೆ."ನಾವು ತುಂಬಾ ಸರಳವಾದ ಜೀವನವನ್ನು ನಡೆಸುತ್ತಿದ್ದೆವು, ಹಾಗಾಗಿ ಬೇಸಿಗೆ ರಜೆಯಲ್ಲಿ ನಾನು ವಾಂಕನೇರ್ಗೆ ಹೋಗುತ್ತಿದ್ದಾಗ,ಜನರ ನಮ್ಮನ್ನು ನೋಡುತ್ತಿದ್ದ ರೀತಿ, ಕೊಡುತ್ತಿದ್ದ ಗೌರವ ಕಂಡು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...