ನಿರಂತರವಾಗಿ ಕುಸಿಯುತ್ತಿದೆ ಚಿನ್ನದ ಬೆಲೆ : ಬಂಗಾರದ ಖರೀದಿಗೆ ಇದುವೇ ಸರಿಯಾದ ಸಮಯ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ. ಕಸ್ಟಮ್ಸ್ ಸುಂಕದಲ್ಲಿ ಭಾರಿ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. :ಬಜೆಟ್‌ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಭಾರಿ ಕಡಿತ ಘೋಷಣೆಯಾದ ನಂತರ ಚಿನ್ನ ಮತ್ತು ಬೆಳ್ಳಿ ತೀವ್ರ ಕುಸಿತ ಕಂಡಿದೆ. ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿದೆ.ಇಂದು ಕೂಡಾ ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ.ವಾಯಿದಾ ಬಜಾರ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದೆ.ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ 4000 ರೂ.ಕುಸಿತ ಕಂಡು ಬಂದಿದೆ. ​​(.)ನ ಅಧಿಕೃತ ವೆಬ್‌ಸೈಟ್ ಪ್ರಕಾರ, 999 ಶುದ್ಧತೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆಗಳು ಇಂದು ಮತ್ತೆ ದೊಡ್ಡ ಕುಸಿತವನ್ನು ಕಂಡಿವೆ. ಇಂದು ಚಿನ್ನದ ಬೆಲೆಯಲ್ಲಿ 974ರಷ್ಟು ಕುಸಿದು 68,177 ರೂ.ಗೆ ತಲುಪಿದೆ. ಬೆಳ್ಳಿ ಕೂಡಾ ಅಗ್ಗವಾಗಿದೆ.ಪ್ರತಿ ಕೆಜಿಗೆ 3,061 ರೂ.ನಷ್ಟು ಕುಸಿದು 81,801 ರೂ.ಗೆ ತಲುಪಿದೆ. ಇದನ್ನೂ ಓದಿ : ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ :ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1000 ರೂ.ಗೆ ಕುಸಿದಿದ್ದು, ಬೆಳ್ಳಿ ಬೆಲೆ 3200 ರೂ.ವರೆಗೆ ಇಳಿದಿದೆ.ಬೆಳಿಗ್ಗೆ ಆರಂಭಿಕ ದರದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,082 ರೂ. ಇಳಿಕೆಯಾಗಿದ್ದು 67,870 ರೂ. ಆಗಿದೆ. ಬೆಳ್ಳಿ ಕೆಜಿಗೆ 3,246 ರೂಪಾಯಿ ಇಳಿಕೆಯಾಗಿ 81,648 ರೂಪಾಯಿಗಳಿಗೆ ತಲುಪಿದೆ.ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ : ವಿಶೇಷ ಸೂಚನೆ: ನೀಡಿದ ದರಗಳು ದೇಶದಾದ್ಯಂತ ಮಾನ್ಯವಾಗಿರುತ್ತವೆ. ಆದರೆ ಮೇಲೆ ತಿಳಿಸಿದ ಬೆಲೆಗಳು ತೆರಿಗೆ ಮತ್ತು ಮೇಕಿಂಗ್ ಚಾರ್ಜ್ ಅನ್ನು ಒಳಗೊಂಡಿಲ್ಲ.ಚಿನ್ನಾಭರಣಗಳನ್ನು ಖರೀದಿಸುವಾಗ ಗ್ರಾಹಕರು ತೆರಿಗೆಯನ್ನು ಪಾವತಿಸಬೇಕಾಗಿರುವುದರಿಂದ ಹೆಚ್ಚು ಹಣ ನೀಡಬೇಕಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...