ರತನ್ ಟಾಟಾ ಕಂಪನಿಗೆ ಭಾರೀ ಲಾಭ ತಂದು ಕೊಟ್ಟ ಹಣಕಾಸು ಸಚಿವರ ಈ ಘೋಷಣೆ ! :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ ನಂತರ ಆಭರಣ ಸಂಬಂಧಿತ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ. :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ ನಂತರ ವೇತನ ವರ್ಗ ಸಮಾಧಾನಕರವಾಗಿಲ್ಲ.ಆದರೆ ಕೆಲವು ಕಂಪನಿಗಳು ಅದರಿಂದ ಭಾರೀ ಪಡೆದಿವೆ.ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಶೇ.15ರಿಂದ ಶೇ.6ಕ್ಕೆ ಇಳಿಸಲಾಗಿದೆ.ಇದಲ್ಲದೇ ಪ್ಲಾಟಿನಂ ಮೇಲಿನ ಸುಂಕವನ್ನು ಶೇ.6.4ಕ್ಕೆ ಇಳಿಸಲಾಗಿದೆ.ಹಣಕಾಸು ಸಚಿವರ ಈ ಘೋಷಣೆಯ ನಂತರ ಮಂಗಳವಾರ ಟೈಟಾನ್ ಕಂಪನಿ, ಸೆಂಕೋ ಗೋಲ್ಡ್ ಲಿಮಿಟೆಡ್, ಪಿಸಿ ಜ್ಯುವೆಲರ್ ಲಿಮಿಟೆಡ್,ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ ಲಿಮಿಟೆಡ್ ಮುಂತಾದ ಕಂಪನಿಗಳ ಷೇರುಗಳಲ್ಲಿ 12% ವರೆಗೆ ಏರಿಕೆಯಾಗಿದೆ.ರತನ್ ಟಾಟಾ ಅವರ ಪ್ರೀಮಿಯಂ ಕಂಪನಿ ಟೈಟಾನ್ ಷೇರುಗಳು ಸುಮಾರು 7 ಪ್ರತಿಶತದಷ್ಟು ಹೆಚ್ಚಾಗಿದೆ. ಮಂಗಳವಾರಷೇರುಗಳು 3,490 ರೂ. ತಪುಲಿದ್ದು, ನಂತರ 3468 ರೂ.ಗೆ ಕ್ಲೋಸ್ ಆಗಿದೆ. ಸೆಂಕೋ ಗೋಲ್ಡ್ ಷೇರುಗಳೂ ಏರಿಕೆ ಕಂಡಿವೆ.ನಿಫ್ಟಿ 50 ಷೇರುಗಳಲ್ಲಿ, ಚಿನ್ನಾಭರಣಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಹೆಚ್ಚಿನ ಏರಿಕೆ ಕಂಡಿದೆ. ಟೈಟಾನ್ ನಂಬರ್-1 ಸ್ಥಾನದಲ್ಲಿದೆ.ಮಂಗಳವಾರ ಟೈಟಾನ್ ಷೇರುಗಳ ಏರಿಕೆಯಿಂದಾಗಿ ಕಂಪನಿಯ ಮೌಲ್ಯ ಸುಮಾರು 19000 ಕೋಟಿ ರೂ.ಯಷ್ಟು ಹೆಚ್ಚಾಗಿದೆ. ಇದನ್ನೂ ಓದಿ : ಒಂದೇ ವಹಿವಾಟಿನಲ್ಲಿ 19,140 ಕೋಟಿ ರೂ.ಗಳ ಲಾಭ :ಮುಂಬರುವ ದಿನಗಳಲ್ಲಿ ಚಿನ್ನಾಭರಣಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು. ಟೈಟಾನ್ ಷೇರುಗಳ ಏರಿಕೆಯಿಂದ ಹೂಡಿಕೆದಾರರು ನೇರವಾಗಿ ಲಾಭ ಪಡೆದಿದ್ದಾರೆ. ಕಂಪನಿಯ ಮೌಲ್ಯಮಾಪನದ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿಯಾಗಿದೆ. ಶೇ.6.63ರಷ್ಟು ಏರಿಕೆಯೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 3,07,897 ಕೋಟಿ ರೂ.ಗೆ ಏರಿಕೆಯಾಗಿದೆ.ಈ ಮೂಲಕ ಬಜೆಟ್ ನಲ್ಲಿ ಮಾಡಿದ ಘೋಷಣೆಯಿಂದಾಗಿ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 19,140 ಕೋಟಿ ರೂ.ಯಷ್ಟು ಏರಿಕೆಯಾಗಿದೆ. ಮೇಲಿನ ಆಮದು ಸುಂಕವನ್ನು ಶೇ.9ರಷ್ಟು ತಗ್ಗಿಸಲು ಹಣಕಾಸು ಸಚಿವರು ನಿರ್ಧರಿಸಿದ ಪರಿಣಾಮ ಬುಲಿಯನ್ ಮಾರುಕಟ್ಟೆಯಲ್ಲೂ ಕಂಡುಬಂದಿದೆ.ಇದಾದ ಬಳಿಕ ಮಂಗಳವಾರ ಸಂಜೆ ಬೆಳ್ಳಿಯ ದರ ಪ್ರತಿ ಕೆಜಿಗೆ 88,196 ರೂ.ನಿಂದ 84,919 ರೂ.ಗೆ ಕುಸಿದಿದೆ. ಮತ್ತೊಂದೆಡೆ, 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 73,218 ರೂ.ನಿಂದ 10 ಗ್ರಾಂಗೆ 69,602 ರೂ.ಗೆ ಇಳಿದಿದೆ.ಎಂಸಿಎಕ್ಸ್‌ನಲ್ಲಿ ಎರಡೂ ಅಮೂಲ್ಯ ಲೋಹಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಇದನ್ನೂ ಓದಿ : ಚಿನ್ನಾಭರಣಗಳ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ :ರತನ್ ಟಾಟಾ ಅವರ ಟೈಟಾನ್ ಕಂಪನಿಯು ದೇಶ ಮತ್ತು ವಿದೇಶಗಳಲ್ಲಿ ತನಿಷ್ಕ್ ಬ್ರ್ಯಾಂಡ್‌ನ ಶೋರೂಮ್‌ಗಳನ್ನು ನಿರ್ವಹಿಸುತ್ತದೆ.ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾದ ನಂತರ, ಆಭರಣ ತಯಾರಿಕಾ ಕಂಪನಿಗಳ ಷೇರುಗಳ ಬೇಡಿಕೆ ಕೂಡಾ ಹೆಚ್ಚಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...