ಈ ದೇಶಕ್ಕೆ ಭಾರತದಿಂದ ಸಿಗುತ್ತಿದೆ ಭಾರೀ ಆರ್ಥಿಕ ಸಹಾಯ: ಕೇಂದ್ರ ಬಜೆಟ್ ಮಂಡನೆ ವೇಳೆ ಹೊರಬಿತ್ತು ಮಹತ್ವದ ಮಾಹಿತಿ 2024-25 : ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 2024-25 :ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದ್ದಾರೆ. ಬಜೆಟ್ ಘೋಷಣೆ ಬಳಿಕ ಬಿಡುಗಡೆಯಾದ ದಾಖಲೆಗಳಿಂದ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ದಾಖಲೆಗಳ ಪ್ರಕಾರ, ಭಾರತ ಸರ್ಕಾರವು ವಿದೇಶಿ ನೆರವಿಗೆ ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಇದರಲ್ಲಿ ಭೂತಾನ್‌ಗೆ ಗರಿಷ್ಠ ಸಹಾಯವನ್ನು ನೀಡಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಬಜೆಟ್ ಅಂದಾಜು ಸ್ವಲ್ಪ ಕಡಿಮೆಯಾಗಿದೆ. 2024-25 ಕ್ಕೆ ಗಾಗಿ ಬಜೆಟ್ ಅಂದಾಜು ₹22,155 ಕೋಟಿ. ಈ ಮೊತ್ತವು 2023-24 ರಲ್ಲಿ ನಿಗದಿಪಡಿಸಿದ ₹18,050 ಕೋಟಿಗಿಂತ ಹೆಚ್ಚು, ಆದರೆ ಅದೇ ಆರ್ಥಿಕ ವರ್ಷಕ್ಕೆ ₹29,121 ಕೋಟಿಗಳ ಪರಿಷ್ಕೃತ ಅಂದಾಜಿಗಿಂತ ಕಡಿಮೆ. ಇದನ್ನೂ ಓದಿ: ಪರಿಷ್ಕೃತ ಅಂದಾಜಿನ ಪ್ರಕಾರ, 2023-24ನೇ ಸಾಲಿನಲ್ಲಿ ಭಾರತ ಸರ್ಕಾರವು ವಿದೇಶಿ ಸರ್ಕಾರಗಳಿಗೆ ₹ 6,541.79 ಕೋಟಿ ಮೊತ್ತದ ನೆರವು ನೀಡಿತ್ತು. ಈ ಮೊತ್ತವು 2023-24ನೇ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ₹ 5,848.58 ಕೋಟಿ ಬಜೆಟ್‌ಗಿಂತ ಹೆಚ್ಚು. 2024-25ರ ಆರ್ಥಿಕ ವರ್ಷದ ಅಂದಾಜು ₹5,667.56 ಕೋಟಿ. ಭೂತಾನ್‌ʼಗೆ ಗರಿಷ್ಠ ಸಹಾಯ 2024-2025ರ ಬಜೆಟ್ ಪ್ರಕಾರ, ಭೂತಾನ್‌ʼಗೆ ₹2,068.56 ಕೋಟಿಯಷ್ಟು ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ. ಈ ಮೊತ್ತ ಕಳೆದ ವರ್ಷದ ₹2,400 ಕೋಟಿಗಿಂತ ಕಡಿಮೆ. 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ʼನಲ್ಲಿ ₹2,398.97 ಕೋಟಿ ವೆಚ್ಚವಾಗಿದೆ. ಮಾಲ್ಡೀವ್ಸ್‌ಗೆ ಎಷ್ಟು ಸಹಾಯ? ಕಳೆದ ವರ್ಷದಂತೆ ಈ ಬಾರಿಯೂ ಮಾಲ್ಡೀವ್ಸ್‌ಗೆ ₹ 400 ಕೋಟಿ ಅನುದಾನ ನೀಡಲಾಗುತ್ತದೆ. ಆದರೆ, 2023-2024ರ ಆರ್ಥಿಕ ವರ್ಷದ ಪರಿಷ್ಕೃತ ಬಜೆಟ್‌ನಲ್ಲಿನ ವೆಚ್ಚವು ₹770.90 ಕೋಟಿಗಳಷ್ಟಿತ್ತು, ಇದು ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು. ನೇಪಾಳ ಮತ್ತು ಮಾಲ್ಡೀವ್ಸ್‌ʼಗೆ ಕ್ರಮವಾಗಿ ₹700 ಕೋಟಿ ಮತ್ತು ₹400 ಕೋಟಿ ನೆರವು ಘೋಷಿಸಲಾಗಿದೆ. ಭಾರತ ಸರ್ಕಾರವು 2023-24ರಲ್ಲಿ ವಿದೇಶಿ ಸರ್ಕಾರಗಳಿಗೆ ₹6,541.79 ಕೋಟಿ ನೀಡಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರಲ್ಲಿ ವಿತ್ತೀಯ ಕೊರತೆಯ ಗುರಿಯನ್ನು 4.9% ಯಲ್ಲಿ ನಿಗದಿಪಡಿಸಿದ್ದಾರೆ. ಆಫ್ರಿಕಾ ರಾಷ್ಟ್ರಗಳಿಗೆ ₹200 ಕೋಟಿಆಫ್ರಿಕನ್ ರಾಷ್ಟ್ರಗಳಿಗೆ ₹ 200 ಕೋಟಿ, ಬಾಂಗ್ಲಾದೇಶಕ್ಕೆ ₹ 120 ಕೋಟಿ, ಸೆಶೆಲ್ಸ್‌ʼಗೆ ₹ 40 ಕೋಟಿ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಿಗೆ ₹ 30 ಕೋಟಿ ನೆರವು ನೀಡಲಾಗುತ್ತದೆ. 2025-26ರ ವೇಳೆಗೆ ವಿತ್ತೀಯ ಕೊರತೆಯನ್ನು ಯ 4.5% ಕ್ಕೆ ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಭಾರತದಿಂದ ಸಹಾಯ ಪಡೆಯುತ್ತಿರುವ ಟಾಪ್ 10 ದೇಶಗಳು 1. ಭೂತಾನ್: ₹2,068.56 ಕೋಟಿ 2. ನೇಪಾಳ: ₹700 ಕೋಟಿ 2. ಮಾಲ್ಡೀವ್ಸ್: ₹400 ಕೋಟಿ 3. ಮಾರಿಷಸ್: ₹370 ಕೋಟಿ 4. ಮ್ಯಾನ್ಮಾರ್: ₹250 ಕೋಟಿ 5. ಶ್ರೀಲಂಕಾ: ₹245 ಕೋಟಿ 6. ಅಫ್ಘಾನಿಸ್ತಾನ: ₹200 ಕೋಟಿ 7. ಆಫ್ರಿಕನ್ ದೇಶ: ₹200 ಕೋಟಿ 8. ಬಾಂಗ್ಲಾದೇಶ: ₹120 ಕೋಟಿ 9. ಸೀಶೆಲ್ಸ್: ₹40 ಕೋಟಿ 10. ಲ್ಯಾಟಿನ್ ಅಮೆರಿಕ ದೇಶಗಳು: ₹30 ಕೋಟಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...